ADVERTISEMENT

ಜಯದತ್ತ ಪ್ರಿಯಾಂಕ್ ಬಳಗ

ಕ್ರಿಕೆಟ್: ರಜತ್ ಪಾಟೀದಾರ್ ಶತಕದ ಅಬ್ಬರ; ನ್ಯೂಜಿಲೆಂಡ್ ಎ ತಂಡಕ್ಕೆ ಕಠಿಣ ಗುರಿ

ಗಿರೀಶದೊಡ್ಡಮನಿ
Published 17 ಸೆಪ್ಟೆಂಬರ್ 2022, 14:45 IST
Last Updated 17 ಸೆಪ್ಟೆಂಬರ್ 2022, 14:45 IST
ರಜತ್ ಪಾಟೀದಾರ್ ಹಾಗೂ ಸರ್ಫರಾಜ್ ಖಾನ್‌   –ಪ್ರಜಾವಾಣಿ ವಾರ್ತೆ/ಎಸ್‌.ಕೆ. ದಿನೇಶ್ 
ರಜತ್ ಪಾಟೀದಾರ್ ಹಾಗೂ ಸರ್ಫರಾಜ್ ಖಾನ್‌   –ಪ್ರಜಾವಾಣಿ ವಾರ್ತೆ/ಎಸ್‌.ಕೆ. ದಿನೇಶ್    

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣವೆಂದರೆ ರಜತ್ ಪಾಟೀದಾರ್‌ಗೆ ಅಚ್ಚುಮೆಚ್ಚು ಎಂಬುದು ಶನಿವಾರ ಮತ್ತೊಮ್ಮೆ ಸಾಬೀತಾಯಿತು.

ಈ ಅಂಗಳದಲ್ಲಿ 15 ದಿನಗಳ ಅಂತರದಲ್ಲಿ ನಡೆದ ಎರಡನೇ ಪಂದ್ಯದಲ್ಲಿಯೂ ಶತಕ(ಔಟಾಗದೆ 109; 135ಎ, 4X13, 6X2) ಗಳಿಸಿದರು. ಇದರಿಂದಾಗಿ ನ್ಯೂಜಿಲೆಂಡ್ ಎ ತಂಡಕ್ಕೆ ಆತಿಥೇಯ ಬಳಗವು 416 ರನ್‌ಗಳ ಗೆಲುವಿನ ಗುರಿಯೊಡ್ಡಿತು.

ಮೂರನೇ ದಿನದಾಟದಲ್ಲಿ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ 85 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 359 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಗುರಿ ಬೆನ್ನಟ್ಟಿರುವ ಪ್ರವಾಸಿ ಬಳಗವು 14 ಓವರ್‌ಗಳಲ್ಲಿ 1 ವಿಕೆಟ್‌ಗೆ 20 ರನ್ ಗಳಿಸಿದೆ. ಜೋ ಕಾರ್ಟರ್ (ಬ್ಯಾಟಿಂಗ್ 6) ಹಾಗೂ ಜೋ ವಾಕರ್ ಕ್ರೀಸ್‌ನಲ್ಲಿದ್ದಾರೆ. ಜಯಸಾಧಿಸಬೇಕಾದರೆ ಪಂದ್ಯ ಕೊನೆಯ ದಿನವಾದ

ADVERTISEMENT

ಸರಣಿಯ ಮೊದಲ ಪಂದ್ಯದಲ್ಲಿಯೂ ಅವರು ಶತಕ (ಸೆ 3) ದಾಖಲಿಸಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಋತುರಾಜ್ (94; 164ಎ, 4X11) ಹಾಗೂ ನಾಯಕ ಪ್ರಿಯಾಂಕ್ ಪಾಂಚಾಲ್ ಎರಡನೇ ವಿಕೆಟ್‌ಗೆ 122 ರನ್‌ ಸೇರಿಸಿದರು. 37ನೇ ಓವರ್‌ನಲ್ಲಿ ಪಾಂಚಾಲ್ ವಿಕೆಟ್ ಗಳಿಸಿದ ಜೋ ವಾಕರ್ ಸಂಭ್ರಮಿಸಿದರು. ಆದರೆ ಇದರ ನಂತರವೇ ಬೌಲರ್‌ಗಳ ಸಂಕಷ್ಟ ಹೆಚ್ಚಿತು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಜತ್ಕ್ರೀಸ್‌ಗೆ ಬಂದವರೇ ಬೌಲರ್‌ಗಳನ್ನು ದಂಡಿಸಿದರು. ಅವರು ಶತಕ ಗಳಿಸಿದರು. ಅಲ್ಲದೇ ಎರಡು ಶತಕದ ಜೊತೆಯಾಟಗಳಲ್ಲಿ ಭಾಗಿಯಾದರು.

ಐಪಿಎಲ್‌ನಲ್ಲಿ ಆಡುವ ಚೆನ್ನೈ ಸೂಪರ್ ಕಿಂಗ್ಸ್‌ ಬ್ಯಾಟರ್ ಋತುರಾಜ್ ಹಾಗೂ ರಜತ್ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 102 ರನ್‌ ಸೇರಿಸಿದರು. ಊಟದ ನಂತರದ ಅವಧಿಯಲ್ಲಿ ಋತುರಾಜ್ ಔಟಾದರು. ಕೇವಲ ಆರು ರನ್‌ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡರು.

ಕ್ರೀಸ್‌ಗೆ ಬಂದ ಸರ್ಫರಾಜ್ ಖಾನ್ ಕೂಡ ರನ್‌ ಗಳಿಕೆಗೆ ವೇಗ ನೀಡಿದರು. ರಜತ್ ಮತ್ತು ಖಾನ್ ಇಬ್ಬರೂ ಸೇರಿ ‘ಚುಟುಕು ಕ್ರಿಕೆಟ್‌’ ಮಾದರಿಯ ಬ್ಯಾಟಿಂಗ್ ಮಾಡಿದರು. ಸರ್ಫರಾಜ್ 74 ಎಸೆತಗಳಲ್ಲಿ 63 ರನ್‌ ಗಳಿಸಿದರು. ಅದರಲ್ಲಿ ಚೆಂಡನ್ನು ಏಳು ಬಾರಿ ಬೌಂಡರಿಗಟ್ಟಿದರು. ಎರಡು ಬಾರಿ ಖಾಲಿ ಗ್ಯಾಲರಿಗೂ ಕಳಿಸಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 108 ರನ್‌ ಸೇರಿದವು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 86.4 ಓವರ್‌ಗಳಲ್ಲಿ 293, ನ್ಯೂಜಿಲೆಂಡ್ ಎ:71.2 ಓವರ್‌ಗಳಲ್ಲಿ 237. ಎರಡನೇ ಇನಿಂಗ್ಸ್: ಭಾರತ ಎ: 85 ಓವರ್‌ಗಳಲ್ಲಿ 7ಕ್ಕೆ359 ಡಿಕ್ಲೆರ್ಡ್ (ಪ್ರಿಯಾಂಕ್ ಪಾಂಚಾಲ್ 62, ಋತುರಾಜ್ ಗಾಯಕವಾಡ 94, ರಜತ್ ಪಾಟೀದಾರ್ ಔಟಾಗದೆ 109, ಸರ್ಫರಾಜ್ ಖಾನ್ 63, ಜೋ ವಾಕರ್ 64ಕ್ಕೆ2, ರಚಿನ್ ರವೀಂದ್ರ 65ಕ್ಕೆ3) ನ್ಯೂಜಿಲೆಂಡ್ ಎ: 14 ಓವರ್‌ಗಳಲ್ಲಿ 1 ವಿಕೆಟ್‌ಗೆ 20 (ರಚಿನ್ ರವೀಂದ್ರ 12, ಜೋ ಕಾರ್ಟರ್ ಬ್ಯಾಟಿಂಗ್ 6)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.