
ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಣ ಹಳಸಿರುವ ಸಂಬಂಧ ಕ್ರಿಕೆಟ್ ಮೈದಾನದಲ್ಲೂ ಪ್ರತಿಧ್ವನಿಸಿತು. ಶನಿವಾರ ನಡೆದ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ‘ಎ’ ಗುಂಪಿನ ಪಂದ್ಯದಲ್ಲಿ ಉಭಯ ತಂಡಗಳ ನಾಯಕರು ಹಸ್ತಲಾಘವಕ್ಕೆ ಮುಂದಾಗಲಿಲ್ಲ.
ಮಳೆಯಿಂದ ತಡವಾದ ಟಾಸ್‌ಗೆ ಭಾರತ ತಂಡದ ನಾಯಕ ಆಯುಷ್ ಮ್ಹಾತ್ರೆ ಮತ್ತು ಬಾಂಗ್ಲಾದೇಶ ತಂಡದ ನಾಯಕ ಝವಾದ್ ಅಬ್ರಾರ್ ಹಾಜರಿದ್ದರು. ಆದರೆ ಟಾಸ್‌ಗೆ ಮೊದಲಾಗಲಿ, ನಂತರವಾಗಲಿ ಆತ್ಮೀಯತೆ ಕಾಣಲಿಲ್ಲ.
ಮುಸ್ತಫಿಝುರ್ ರೆಹಮಾನ್ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್, ಐಪಿಎಲ್ ತಂಡದಿಂದ ಕೈಬಿಟ್ಟ ಬಳಿಕ ಕ್ರಿಕೆಟ್ ಬಾಂಧವ್ಯವೂ ಹದಗೆಡುತ್ತಿದೆ. ಬಾಂಗ್ಲಾದೇಶ, ಭಾರತದಲ್ಲಿ ನಿಗದಿಯಾಗಿರುವ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಐಸಿಸಿಗೆ ಒತ್ತಾಯಿಸಿದೆ.
2025ರಲ್ಲಿ ಏಷ್ಯಾ ಕಪ್ ವೇಳೆ, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಪಂದ್ಯಗಳ ವೇಳೆಯೂ ಭಾರತದ ಆಟಗಾರರು ಹಸ್ತಲಾಘವಕ್ಕೆ ನಿರಾಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.