ADVERTISEMENT

ವೇಗಿಗಳ ಎದುರು ಆಡಲು ನೆರವಾದ ಕನ್ನಡಿಗ ರಘು

ಭಾರತ ಕ್ರಿಕೆ್ಟ್ ತಂಡದ ಥ್ರೋಡೌನ್ ಪರಿಣತನ ಬಗ್ಗೆ ಕೊಹ್ಲಿ ಮೆಚ್ಚುಗೆ

ಪಿಟಿಐ
Published 19 ಮೇ 2020, 19:45 IST
Last Updated 19 ಮೇ 2020, 19:45 IST
ರಾಘವೇಂದ್ರ ದೇವಗಿ
ರಾಘವೇಂದ್ರ ದೇವಗಿ   

ನವದೆಹಲಿ : ಭಾರತ ಕ್ರಿಕೆಟ್‌ ತಂಡದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ, ಥ್ರೋಡೌನ್ ಪರಿಣತ ರಾಘವೇಂದ್ರ ದೇವಗಿ (ರಘು) ಅವರ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ.

’ನಮ್ಮ ತಂಡವು 2013ರಿಂದ ವೇಗದ ಬೌಲರ್‌ಗಳ ಎದುರು ಉತ್ತಮವಾಗಿ ಆಡುತ್ತಿದೆ. ಬ್ಯಾಟ್ಸ್‌ಮನ್‌ಗಳು ಪಾದಚಲನೆ, ಹೊಡೆತಗಳ ಆಯ್ಕೆಗನ್ನು ನಿಖರವಾಗಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ರಘು‘ ಎಂದು ಕೊಹ್ಲಿ ಹೇಳಿದ್ದಾರೆ.

ಇನ್ಸ್ಟಾಗ್ರಾಮ್‌ ಲೈವ್‌ನಲ್ಲಿ ಬಾಂಗ್ಲಾದೇಶದ ಆಟಗಾರ ತಮೀಮ್ ಇಕ್ಬಾಲ್ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಕೊಹ್ಲಿ ಈ ಮಾತುಗಳನ್ನು ಹೇಳಿದ್ದಾರೆ.

ADVERTISEMENT

’ಸೈಡ್‌ ಆರ್ಮ್ ಸಲಕರಣೆಯಿಂದ ಚೆಂಡನ್ನು ಬ್ಯಾಟ್ಸ್‌ಮನ್‌ಗಳಿಗೆ ವಿವಿಧ ಕೋನಗಳಲ್ಲಿ ಪ್ರಯೋಗಿಸುವುದನ್ನು ರಘು ಕರಗತ ಮಾಡಿಕೊಂಡಿದ್ದಾರೆ. ನೆಟ್ಸ್‌ನಲ್ಲಿ ಅವರು ಹಾಕುವ ಎಸೆತಗಳ ವೇಗವು ಬೇರೆ ಬೇರೆ ರೀತಿಯಲ್ಲಿರುತ್ತದೆ. ಅದರಿಂದಾಗಿ ಪಂದ್ಯದಲ್ಲಿ ಬೌಲರ್‌ಗಳನ್ನು ಎದುರಿಸಲು ಆತ್ಮವಿಶ್ವಾಸ ಹೆಚ್ಚುತ್ತದೆ‘ ಎಂದು ವಿರಾಟ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.