
ಭಾರತ ಮಹಿಳಾ ಕ್ರಿಕೆಟ್ ತಂಡ (ಸಂಗ್ರಹ ಚಿತ್ರ, ಪ್ರಾತಿನಿಧಿಕ ಚಿತ್ರ)
(ಚಿತ್ರ ಕೃಪೆ: X/@BCCIWomen)
ಜೋಹಾನೆಸ್‌ಬರ್ಗ್: ಭಾರತ ಮಹಿಳಾ ತಂಡದ ವಿರುದ್ದ ಐದು ಪಂದ್ಯಗಳ ಟಿ20 ಸರಣಿಗೆ ಆತಿಥ್ಯ ವಹಿಸಿಕೊಳ್ಳುವುದಾಗಿ ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಂಗಳವಾರ ಪ್ರಕಟಿಸಿದೆ. ಏ. 17ರಂದು ದರ್ಬನ್‌ನ ಕಿಂಗ್ಸ್‌ಮೀಡ್ ಕ್ರೀಡಾಂಗಣದಲ್ಲಿ ಸರಣಿಯ ಮೊದಲ ಪಂದ್ಯ ನಡೆಯಲಿದೆ.
17 ಮತ್ತು 19ರಂದು ಮೊದಲ ಎರಡು ಪಂದ್ಯಗಳು ಡರ್ಬನ್‌ನಲ್ಲಿ ನಡೆಯಲಿವೆ. ಮೂರನೇ ಮತ್ತು ನಾಲ್ಕನೇ ಪಂದ್ಯಗಳು ಜೋಹಾನೆಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಕ್ರಮವಾಗಿ 22 ಮತ್ತು 25ರಂದು ನಡೆಯಲಿವೆ. ಅಂತಿಮ ಪಂದ್ಯ ಬೆನೋನಿಯ ವಿಲ್ಲೋಮೂರ್ ಪಾರ್ಕ್‌ನಲ್ಲಿ ನಿಗದಿಯಾಗಿದೆ.
ಹಾಲಿ ರನ್ನರ್ ಅಪ್ ದಕ್ಷಿಣ ಆಫ್ರಿಕಾಕ್ಕೆ ಐಸಿಸಿ ಟಿ20 ಮಹಿಳಾ ವಿಶ್ವಕಪ್‌ಗೆ ಮೊದಲು ಈ ಸರಣಿಯು ಅಂತಿಮ ಸಿದ್ಧತೆ ನಡೆಸಲು ನೆರವಾಗಲಿದೆ. ವಿಶ್ವಕಪ್ ಟೂರ್ನಿ ಜೂನ್ 12ರಂದು ಇಂಗ್ಲೆಂಡ್‌ನಲ್ಲಿ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.