ADVERTISEMENT

ಭಾರತ–ದಕ್ಷಿಣ ಆಫ್ರಿಕಾ ಟೆಸ್ಟ್: ದ್ವಿಶತಕ ದಾಖಲಿಸಿದ ವಿರಾಟ್‌ ಕೊಹ್ಲಿ

ಎರಡನೇ ಟೆಸ್ಟ್ ಪಂದ್ಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 9:55 IST
Last Updated 11 ಅಕ್ಟೋಬರ್ 2019, 9:55 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ    

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನ ಎರಡನೇ ದಿನ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ದ್ವಿಶತಕಪೂರೈಸಿದರು. ಇದು ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲಿಸಿದಏಳನೇದ್ವಿಶತಕವಾಗಿದೆ.

ದ್ವಿಶತಕ ಸಿಡಿಸಿರುವ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 7000 ರನ್‌ ಗಡಿ ದಾಟಿದ್ದಾರೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ರವೀಂದ್ರ ಜಡೇಜಾ(69) ಮತ್ತು ವಿರಾಟ್‌ ಕೊಹ್ಲಿ(230) ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಭಾರತ ಮಧ್ಯಾಹ್ನದ ವಿರಾಮದ ವೇಳೆಗೆ 3 ವಿಕೆಟ್‌ಗಳಿಕೆ 356 ರನ್‌ ಕಲೆಹಾಕಿತ್ತು. ಪ್ರಸ್ತುತ ಭಾರತ 4 ವಿಕೆಟ್‌ ನಷ್ಟಕ್ಕೆ 555ರನ್‌ ಗಳಿಸಿದೆ.

ADVERTISEMENT

59ರನ್‌ ಗಳಿಸಿದ್ದರಹಾನೆ ಮಹರಾಜ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.

ಗುರುವಾರಮಯಂಕ್‌ ಅಗರವಾಲ್‌ ಶತಕದ(108 ರನ್‌) ನೆರವಿಂದ ಭಾರತ85.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 273 ರನ್ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.