ADVERTISEMENT

ಐಸಿಸಿ ರ‍್ಯಾಂಕಿಂಗ್: ಭಾರತಕ್ಕೆ ಅಗ್ರಸ್ಥಾನ ಕಾಪಾಡಿಕೊಳ್ಳುವ ಸವಾಲು

ಪಿಟಿಐ
Published 2 ಅಕ್ಟೋಬರ್ 2018, 15:41 IST
Last Updated 2 ಅಕ್ಟೋಬರ್ 2018, 15:41 IST

ದುಬೈ: ಐಸಿಸಿ ಟೆಸ್ಟ್‌ ತಂಡಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಳ್ಳುವ ಸವಾಲು ಈಗ ಭಾರತದ ಎದುರಿಗಿದೆ.

ವಿರಾಟ್‌ ಕೊಹ್ಲಿ ಪಡೆಯ ಖಾತೆಯಲ್ಲಿ ಪ್ರಸ್ತುತ 115 ಪಾಯಿಂಟ್ಸ್‌ಗಳಿವೆ. ಮುಂಬರುವ ವೆಸ್ಟ್‌ ಇಂಡೀಸ್‌ ಎದುರಿನ ಎರಡು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ ‘ಕ್ಲೀನ್‌ ಸ್ವೀಪ್‌’ ಸಾಧಿಸಿದರೆ ಪಾಯಿಂಟ್ಸ್‌ 116ಕ್ಕೆ ಏರಲಿದೆ.

ಒಂದು ವೇಳೆ ಸರಣಿ ಸೋತರೆ ಪಾಯಿಂಟ್ಸ್‌ 108ಕ್ಕೆ ಇಳಿಯಲಿದೆ. ಯುಎಇಯಲ್ಲಿ ಭಾನುವಾರದಿಂದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಣ ಟೆಸ್ಟ್‌ ಸರಣಿ ನಡೆಯಲಿದೆ. ಇದರಲ್ಲಿ ಆಸ್ಟ್ರೇಲಿಯಾ 2–0ರಿಂದ ಗೆದ್ದರೆ, ಕೊಹ್ಲಿ ಪಡೆ ಅಗ್ರಸ್ಥಾನ ಕಳೆದುಕೊಳ್ಳಲಿದೆ. ಆಸ್ಟ್ರೇಲಿಯಾ 1–0 ಅಂತರದಿಂದ ಗೆದ್ದರೆ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಎರಡನೇ ಸ್ಥಾನ ತನ್ನದಾಗಿಸಿಕೊಳ್ಳಲಿದೆ.

ADVERTISEMENT

ವಿಂಡೀಸ್‌ ತಂಡ ಪ್ರಸ್ತುತ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.