ವೈಭವ್ ಸೂರ್ಯವಂಶಿ
ಮೆಕಾಯ್: ಭಾರತ 19 ವರ್ಷದೊಳಗಿನವರ ತಂಡವು ಎರಡನೇ ಹಾಗೂ ಅಂತಿಮ ಯುವ ಟೆಸ್ಟ್ ಪಂದ್ಯದ ಎರಡನೇ ದಿನವಾದ ಬುಧವಾರ ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಆ ಮೂಲಕ ಸರಣಿಯನ್ನು 2–0 ಯಿಂದ ಕ್ಲೀನ್‌ಸ್ವೀಪ್ ಮಾಡಿತು.
ನಾಲ್ಕು ದಿನಗಳ ಈ ಪಂದ್ಯ ಎರಡನೇ ದಿನಗಳಲ್ಲಿ ಮಗಿಯಿತು. ಆಸ್ಟ್ರೇಲಿಯಾ ಯುವ ತಂಡದ 135 ರನ್‌ಗಳಿಗೆ ಉತ್ತರವಾಗಿ ಮಂಗಳವಾರ 7 ವಿಕೆಟ್‌ಗೆ 144 ರನ್ ಗಳಿಸಿದ್ದ ಭಾರತ ಎರಡನೇ ದಿನದಾಟದಲ್ಲಿ 171 ರನ್‌ಗಳಿಗೆ ಆಲೌಟಾಯಿತು. ಆ ಮೂಲಕ 36 ರನ್ ಮುನ್ನಡೆ ಪಯಿತು.
ಆತಿಥೇಯ ತಂಡ ಎರಡನೇ ಇನಿಂಗ್ಸ್‌ನಲ್ಲಿ ಮತ್ತೊಮ್ಮೆ ಕಳಪೆಯಾಗಿ ಆಡಿ ಕೇವಲ 119 ರನ್‌ಗಳಿಗೆ ಪತನಗೊಂಡಿತು. ಗೆಲುವಿನಗೆ ಬೇಕಾದ 81 ರನ್‌ಗಳ ಗುರಿಯನ್ನು ಭಾರತ 12.2 ಓವರುಗಳಲ್ಲಿ (3 ವಿಕೆಟ್‌ಗೆ 83) ಹೊಡೆಯಿತು. ಆರಂಭ ಆಟಗಾರರಾದ ಆಯುಷ್ ಮ್ಹಾತ್ರೆ (13) ಮತ್ತು ವೈಭವ್ ಸೂರ್ಯವಂಶಿ (0) ಬಲುಬೇಗ ನಿರ್ಗಮಿಸಿದರೂ,
ಭಾರತ ಯುವ ತಂಡ ಏಕದಿನ ಸರಣಿಯಲ್ಲೂ 3–0 ಯಿಂದ ಗುಡಿಸಿಹಾಕಿತ್ತು.
ಸಂಕ್ಷಿಪ್ತ ಸ್ಕೋರು:
ಆಸ್ಟ್ರೇಲಿಯಾ ಯುವ ತಂಡ: 135 ಮತ್ತು 40.1 ಓವರುಗಳಲ್ಲಿ 116 (ಅಲೆಕ್ಸ್ ಲೀ ಯಂಗ್ 38; ಉಧವ್ ಮೋಹನ್ 17ಕ್ಕೆ2, ಹೆನಿಲ್ ಪಟೇಲ್ 23ಕ್ಕೆ3, ನಮನ್ ಪುಷ್ಪಕ್ 19ಕ್ಕೆ3,
ಭಾರತ ಯುವ ತಂಡ: 171 ಮತ್ತು 12.2 ಓವರುಗಳಲ್ಲಿ 3ಕ್ಕೆ 83 (ವಿಹಾನ್ ಮಲ್ಹೋತ್ರಾ 21, ವೇದಾಂತ್ ತ್ರಿವೇದಿ ಔಟಾಗದೇ 33, ಕಾಸಿ ಬಾರ್ಟನ್ 32ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.