ADVERTISEMENT

19 ವರ್ಷದೊಳಗಿವರ ಕ್ರಿಕೆಟ್‌: ಇಂಗ್ಲೆಂಡ್‌ಗೆ ಮಣಿದ ಭಾರತ

ಪಿಟಿಐ
Published 8 ಜುಲೈ 2025, 15:34 IST
Last Updated 8 ಜುಲೈ 2025, 15:34 IST
.
.   

ವೋರ್ಸೆಸ್ಟರ್ (ಇಂಗ್ಲೆಂಡ್): ಭಾರತ ಯುವ (19 ವರ್ಷದೊಳಗಿವರ) ತಂಡವು ಸೋಮವಾರ ನಡೆದ ಐದನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಏಳು ವಿಕೆಟ್‌ಗಳಿಂದ ಪರಾಭವಗೊಂಡಿತು. ಈ ಸೋಲಿನ ಹೊರತಾಗಿಯೂ ಐದು ಪಂದ್ಯಗಳ ಸರಣಿಯನ್ನು ಭಾರತ 3–2ರಿಂದ ಗೆದ್ದಿತು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಯುವ ತಂಡವು ವೈಭವ್‌ ಸೂರ್ಯವಂಶಿ (33; 42ಎ) ಆರ್.ಎಸ್. ಅಂಬರೀಶ್ (66;81ಎ) ಅವರ ಬ್ಯಾಟಿಂಗ್‌ ನೆರವಿನಿಂದ 9 ವಿಕೆಟ್‌ಗೆ 210 ರನ್‌ ಗಳಿಸಿತು. ಇಂಗ್ಲೆಂಡ್‌ ತಂಡವು 113 ಎಸೆತಗಳು ಬಾಕಿ ಇರುವಂತೆ 3 ವಿಕೆಟ್‌ಗೆ 211 ರನ್‌ ಗಳಿಸಿ ಜಯ ಸಾಧಿಸಿತು. 

ಸಂಕ್ಷಿಪ್ತ ಸ್ಕೋರ್‌: ಭಾರತ 19 ವರ್ಷದೊಳಗಿನವರ ತಂಡ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 210 (ಆರ್‌.ಎಸ್. ಅಂಬರೀಶ್ 66, ವೈಭವ್‌ ಸೂರ್ಯವಂಶಿ 33; ರಾಲ್ಫಿ ಆಲ್ಬರ್ಟ್ 24ಕ್ಕೆ 2, ಅಲೆಕ್ಸ್ ಫ್ರೆಂಚ್ 37ಕ್ಕೆ 2). ಇಂಗ್ಲೆಂಡ್‌ 19 ವರ್ಷದೊಳಗಿನವರ ತಂಡ: 31.1 ಓವರ್‌ಗಳಲ್ಲಿ 3 ವಿಕೆಟ್‌ಗೆ 211 (ಬೆನ್ ಮೇಯ್ಸ್ ಔಟಾಗದೇ 82, ಬಿ.ಜೆ. ಡಾಕಿನ್ಸ್ 66; ನಮನ್ ಪುಷ್ಪಕ್ 65ಕ್ಕೆ 2). ಫಲಿತಾಂಶ: ಇಂಗ್ಲೆಂಡ್‌ ತಂಡಕ್ಕೆ ಏಳು ವಿಕೆಟ್‌ಗಳ ಗೆಲುವು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.