ADVERTISEMENT

ಪುರುಷರ ಟೆಸ್ಟ್ ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್ ಕ್ಲೇರ್ ಪೊಲೊಸಾಕ್

ಪಿಟಿಐ
Published 6 ಜನವರಿ 2021, 16:07 IST
Last Updated 6 ಜನವರಿ 2021, 16:07 IST
ಕ್ಲೇರ್ ಪೊಲೊಸಾಕ್  –ಟ್ವಿಟರ್ ಚಿತ್ರ
ಕ್ಲೇರ್ ಪೊಲೊಸಾಕ್  –ಟ್ವಿಟರ್ ಚಿತ್ರ   

ಸಿಡ್ನಿ: ಆಸ್ಟ್ರೇಲಿಯಾದ ಕ್ಲೇರ್ ಪೊಲೊಸಾಕ್ ಗುರುವಾರ ಆರಂಭವಾಗುವ ಟೆಸ್ಟ್‌ ಪಂದ್ಯದಲ್ಲಿ ನಾಲ್ಕನೇ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಪುರುಷರ ಟೆಸ್ಟ್‌ ಪಂದ್ಯದಲ್ಲಿ ಕಾರ್ಯನಿರ್ವಹಿಸಲಿರುವ ಮೊದಲ ಮಹಿಳಾ ಅಂಪೈರ್ ಆಗಿದ್ದಾರೆ. 32 ವರ್ಷದ ಕ್ಲೇರ್ ನ್ಯೂ ಸೌತ್‌ವೇಲ್ಸ್‌ನವರು.

2019ರಲ್ಲಿ ನಮಿಬಿಯಾ ಮತ್ತು ಓಮನ್ ನಡುವಣ ನಡೆದಿದ್ದ ಐಸಿಸಿ ಡಿವಿಷನ್ 2 ಲೀಗ್ ಪುರುಷರ ಏಕದಿನ ಪಂದ್ಯದಲ್ಲಿ ಆನ್‌ಫೀಲ್ಡ್ ಅಂಪೈರ್ ಆಗಿ ಕ್ಲೇರ್ ಕಾರ್ಯನಿರ್ವಹಿಸಿದ್ದರು.

ಸಿಡ್ನಿ ಟೆಸ್ಟ್‌ನಲ್ಲಿ ಪಾಲ್ ರೀಫೆಲ್ ಮತ್ತು ಪಾಲ್ ವಿಲ್ಸನ್ ಆನ್‌ಫೀಲ್ಡ್‌ ಆಂಪೈರ್‌ಗಳಾಗಿದ್ದಾರೆ. ಬ್ರೂಸ್ ಆಕ್ಸೆನ್‌ಫೋರ್ಡ್‌ ಟಿವಿ ಅಂಪೈರ್ ಆಗಿದ್ದಾರೆ. ಮ್ಯಾಚ್‌ ರೆಫರಿಯಾಗಿ ಡೇವಿಡ್ ಬೂನ್ ನೇಮಕವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.