ADVERTISEMENT

ಐಸಿಸಿ ಮಹಿಳಾ ಚಾಂಪಿಯನ್‌ಷಿಪ್‌: ವಿಂಡೀಸ್‌ ವಿರುದ್ಧ ಭಾರತಕ್ಕೆ ವೀರೋಚಿತ ಸೋಲು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 19:45 IST
Last Updated 2 ನವೆಂಬರ್ 2019, 19:45 IST
ಪ್ರಿಯಾ ಪುನಿಯಾ
ಪ್ರಿಯಾ ಪುನಿಯಾ   

ನಾರ್ತ್‌ ಸೌಂಡ್‌, ವೆಸ್ಟ್‌ ಇಂಡೀಸ್‌: ಪ್ರಿಯಾ ಪುನಿಯಾ ಗಳಿಸಿದ ಅರ್ಧಶತಕ (75 ರನ್‌) ವ್ಯರ್ಥವಾಯಿತು. ಭಾರತ ತಂಡ ಐಸಿಸಿ ಮಹಿಳಾ ಚಾಂಪಿಯನ್‌ಷಿಪ್‌ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಎದುರು ಒಂದು ರನ್‌ನ ಸೋಲು ಕಂಡಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕೆರಿಬಿಯನ್‌ ನಾಡಿನ ತಂಡ, 50 ಓವರ್‌ಗಳಲ್ಲಿ 7 ವಿಕೆಟ್‌ಗೆ 225 ರನ್‌ ಗಳಿಸಿತ್ತು. ನಾಯಕಿ ಸ್ಟೆಫಾನಿ ಟೇಲರ್‌(94 ರನ್‌)ಶತಕ ವಂಚಿತರಾಗಿದ್ದರು. ಗುರಿ ಬೆನ್ನತ್ತಿದ ಭಾರತ 224 ರನ್‌ಗಳಿಗೆ ಆಲ್‌ ಔಟ್‌ ಆಯಿತು.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ ಇಂಡೀಸ್‌ ಮಹಿಳೆಯರು: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 225 (ಸ್ಟೆಫಾನಿ ಟೇಲರ್ 94, ನತಾಶಾ ಮೆಕ್‌ಲೀನ್‌ 51; ಶಿಖಾ ಪಾಂಡೆ 38ಕ್ಕೆ 2) ಭಾರತ ಮಹಿಳೆಯರು: 50 ಓವರ್‌ಗಳಲ್ಲಿ 224 (ಪ್ರಿಯಾ ಪುನಿಯಾ 75, ಜೆಮಿಮಾ ರೋಡ್ರಿಗಸ್‌ 41; ಅನೀಸಾ ಮೊಹಮ್ಮದ್‌ 46ಕ್ಕೆ 5) ಫಲಿತಾಂಶ: ವೆಸ್ಟ್ ಇಂಡೀಸ್‌ಗೆ ಒಂದು ರನ್‌ ಜಯ.

ADVERTISEMENT

ತಂಡಕ್ಕೆ ಮಂದಾನ: ಕಾಲ್ಬೆರಳಿನ ಗಾಯದ ಕಾರಣ ಹೊರಗುಳಿದಿದ್ದ ಭಾರತದ ಸ್ಮೃತಿ ಮಂದಾನ ಗುಣಮುಖರಾಗಿದ್ದು ಭಾನುವಾರ ತಂಡ ಸೇರಿಕೊಳ್ಳಲಿದ್ದಾರೆ. ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.