ಬೆಂಗಳೂರು: ಭಾರತದ ಧ್ವಜವನ್ನು ಹೊಂದಿದ್ದ ಹೆಲ್ಮೆಟ್ ಅನ್ನು ಹೆಮ್ಮೆಯಿಂದ ಧರಿಸುತ್ತಿದ್ದೆ ಎಂದು ಮಾಜಿ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನದ ಪ್ರಯುಕ್ತ ದೇಶವಾಸಿಗಳಿಗೆ ಶುಭ ಕೋರಿ ಸಚಿನ್ ತೆಂಡೂಲ್ಕರ್ ಭಾನುವಾರ ಟ್ವೀಟ್ ಮಾಡಿದ್ದಾರೆ.
'ಭಾರತದ ಧ್ವಜವನ್ನು ಹೊಂದಿದ್ದ ಹೆಲ್ಮೆಟ್ ಅನ್ನು ಹೆಮ್ಮೆಯಿಂದ ಧರಿಸುತ್ತಿದ್ದೆ. ನಾನು ಏಕೆ ಮೈದಾನಕ್ಕೆ ಕಾಲಿಟ್ಟೆ ಎಂಬುದನ್ನು ಅದು ನನಗೆ ಯಾವಾಗಲೂ ನೆನಪಿಸುತ್ತಿತ್ತು' ಎಂದು ಅವರು ಹೇಳಿದ್ದಾರೆ.
'ಪ್ರಪಂಚದಾದ್ಯಂತ ಇರುವ ಎಲ್ಲಾ ಭಾರತೀಯರಿಗೆ 75ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು. ಜೈ ಹಿಂದ್' ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಕ್ರಿಕೆಟ್ ತಾರೆಗಳಾದ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ದೇವದತ್ತ ಪಡಿಕ್ಕಲ್ ಸೇರಿದಂತೆ ಇನ್ನೂ ಹಲವರು ಟ್ವೀಟ್ ಮೂಲಕ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.