ಕೋಲ್ಕತ್ತ: ಭಾರತದ ಕ್ರಿಕೆಟ್ ತಂಡದ ಪ್ರಮುಖ ಬೌಲರ್‌ಗಳಾದ ಮೊಹಮ್ಮದ್ ಶಮಿ, ಆಕಾಶ್ ದೀಪ್ ಹಾಗೂ ಮುಕೇಶ್ ಕುಮಾರ್ ಅವರು ಮುಂಬರುವ ದೇಶಿ ಟೂರ್ನಿಗೆ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಬಿಡುಗಡೆ ಮಾಡಿರುವ ಸಂಭಾವ್ಯ 50ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಹಿರಿಯ ಬ್ಯಾಟರ್ ಅನುಸ್ತುಪ್ ಮಜುಂದಾರ್ ಅವರು ಈ ಬಾರಿಯೂ ಬಂಗಾಳ ತಂಡವನ್ನು ಮುನ್ನಡಸಲಿದ್ದಾರೆ.
ಬಂಗಾಳ ಪ್ರೋ ಲೀಗ್ ಟಿ–20ಯಲ್ಲಿ ಗಾಯಗೊಂಡಿದ್ದ ಆಲ್‌ರೌಂಡರ್ ಶಹಬಾಜ್ ಅಹ್ಮದ, ವಿಕೆಟ್ ಕೀಪರ್ ಅಭಿಷೇಕ್ ಪೋರೆಲ್ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿರುವ ಅಭಿಮನ್ಯು ಈಶ್ವರನ್ ಕೂಡ ಬಂಗಾಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಐಪಿಎಲ್–2025 ನಂತರ ಕ್ರಿಕೆಟ್‌ನಿಂದ ದೂರ ಉಳಿದಿರುವ ವೇಗಿ ಶಮಿ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಗೂ ಕೂಡ ತಂಡದಿಂದ ಕೈಬಿಡಲಾಗಿತ್ತು.
ಆ.28ರಿಂದ ಆರಂಭವಾಗಲಿರುವ ದುಲಿಪ್ ಟ್ರೋಪಿಯಲ್ಲಿ ಪೂರ್ವ ವಲಯ ತಂಡವನ್ನು ಶಮಿ ಅವರು ಪ್ರತಿನಿಧಿಸುತ್ತಿದ್ದಾರೆ. ಭಾರತ ತಂಡದ ಪರ ಚಾಂಪಿಯನ್ಸ್ ಟ್ರೋಪಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.