ADVERTISEMENT

ಮಹಿಳಾ ಟಿ20 ಕ್ರಿಕೆಟ್: ಕಿವೀಸ್‌ ಬಳಗಕ್ಕೆ ಶರಣಾದ ಹರ್ಮನ್‌ ಪಡೆ

ಪೂಜಾ, ದೀಪ್ತಿಗೆ ತಲಾ ಎರಡು ವಿಕೆಟ್

ಪಿಟಿಐ
Published 9 ಫೆಬ್ರುವರಿ 2022, 11:03 IST
Last Updated 9 ಫೆಬ್ರುವರಿ 2022, 11:03 IST
ದೀಪ್ತಿ ಶರ್ಮಾ 
ದೀಪ್ತಿ ಶರ್ಮಾ    

ಕ್ವೀನ್ಸ್‌ಟನ್: ಜೆಸ್ ಕೆರ್ ಮತ್ತು ಅಮೆಲಿಯಾ ಕೆರ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ಮಹಿಳಾ ತಂಡವು ಭಾರತದ ಎದುರಿನ ಏಕೈಕ ಟಿ20 ಕ್ರಿಕೆಟ್ ಪಂದ್ಯವನ್ನು ಗೆದ್ದುಕೊಂಡಿತು.

ಬುಧವಾರ ನಡೆದ ಪಂದ್ಯದಲ್ಲಿ ಕಿವೀಸ್ ಬಳಗವು 18 ರನ್‌ಗಳಿಂದ ಭಾರತ ತಂಡವನ್ನು ಪರಾಭವಗೊಳಿಸಿತು.

ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಸೂಜಿ ಬೇಟ್ಸ್‌ (36;34ಎ) ಮತ್ತು ನಾಯಕಿ ಸೂಫಿ ಡಿವೈನ್ (31; 23ಎ) ಅವರು ಆತಿಥೇಯ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅದರ ಅಡಿಪಾಯದ ಮೇಲೆ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 155 ರನ್ ಗಳಿಸಿತು. ಭಾರತದ ಪೂಜಾ ವಸ್ತ್ರಕರ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಗಳಿಸಿದರು.ಕರ್ನಾಟಕದ ರಾಜೇಶ್ವರಿ ಗಾಯಕವಾಡ್ ಒಂದು ವಿಕೆಟ್ ಪಡೆದರು.

ADVERTISEMENT

ಗುರಿ ಬನ್ನೆಟ್ಟಿದ ಭಾರತ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 137 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಯಸ್ಟಿಕಾ ಭಾಟಿಯಾ (26; 26ಎ) ಮತ್ತು ಶೆಫಾಲಿ ವರ್ಮಾ ಉತ್ತಮ ಆರಂಭ ನೀಡಿದರು. ಆದರೆ, ಅಮೆಲಿಯಾ ಮತ್ತು ಜೆಸ್ ಅವರ ದಾಳಿಯ ಮುಂದೆ ಪ್ರವಾಸಿ ತಂಡದ ಬ್ಯಾಟಿಂಗ್ ಪಡೆ ಕುಸಿಯಿತು. ನಾಯಕಿ ಹರ್ಮನ್‌ಪ್ರೀತ್ ಲಯಕ್ಕೆ ಮರಳುವಲ್ಲಿ ವಿಫಲರಾದರು.

ಆದರೆ ಮಧ್ಯಮ ಕ್ರಮಾಂಕದಲ್ಲಿ ಸಬ್ಬಿನೇನಿ ಮೇಘನಾ (37; 30) ಅವರ ಹೋರಾಟ ಗಮನ ಸೆಳೆಯಿತು. ಅವರಿಗೆ ಇನ್ನೊಂದು ಕಡೆಯಿಂದ ತಕ್ಕ ಬೆಂಬಲ ಸಿಗಲಿಲ್ಲ. ಅದರಿಂದಾಗಿ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಸ್ಕೋರ್

ನ್ಯೂಜಿಲೆಂಡ್

5ಕ್ಕೆ155 (20 ಓವರ್‌ಗಳಲ್ಲಿ)

ಬೇಟ್ಸ್‌ ಬಿ ಗಾಯಕವಾಡ್ 36 (34ಎ, 4X2), ಡಿವೈನ್ ಸಿ ರಾಣಾ ಬಿ ದೀಪ್ತಿ 31 (23ಎ, 4X2, 6X2), ಅಮೆಲಿಯಾ ಸಿ ಶೆಫಾಲಿ ಬಿ ಪೂಜಾ 17 (20ಎ, 4X1), ಮ್ಯಾಡಿ ಸಿ ಪೂನಂ ಬಿ ದೀಪ್ತಿ 26 (20ಎ, 4X3), ತಹುಹು ಸಿ ಶೆಫಾಲಿ ಬಿ ಪೂಜಾ 27 (14ಎ, 4X4, 6X1), ಹಾಲಿಡೇ ಔಟಾಗದೆ 7 (6ಎ), ಕೇಟಿ ಔಟಾಗದೆ 9 (3ಎ, 4X2)

ಇತರೆ: 2 (ಲೆಗ್‌ಬೈ 2)

ವಿಕೆಟ್ ಪತನ: 1–60 (ಡಿವೈನ್; 7.5), 2–80 (ಬೇಟ್ಸ್; 11.2), 3–102 (ಅಮೆಲಿಯಾ;14.4), 4–123 (ಮ್ಯಾಡಿ; 17.3), 5–140 (ತಹುಹು; 18.4).

ಬೌಲರ್

ಪೂಜಾ ವಸ್ತ್ರಕರ್ 4–1–16–2, ಸಿಮ್ರನ್ ಬಹಾದ್ದೂರ್ 2–0–26–0, ರಾಜೇಶ್ವರಿ ಗಾಯಕವಾಡ 4–0–39–1, ಪೂನಂ ಯಾದವ್ 4–0–34–0, ದೀಪ್ತಿ ಶರ್ಮಾ 4–0–26–2, ಸ್ನೇಹ್ ರಾಣಾ 2–0–12–0.

ಭಾರತ

8ಕ್ಕೆ 137 (20 ಓವರ್‌ಗಳಲ್ಲಿ)

ಯಸ್ಟಿಕಾ ಬಿ ಅಮೆಲಿಯಾ 26 (26ಎ, 4X2, 6X1), ಶೆಫಾಲಿ ಸಿ ಮ್ಯಾಡಿ ಬಿ ಅಮೆಲಿಯಾ 13 (14ಎ, 4X2), ಹರ್ಮನ್‌ಪ್ರೀತ್ ಬಿ ಜೆಸ್ 12 (13ಎ), ಮೇಘನಾ ಸಿ ಬೇಟ್ಸ್‌ ಬಿ ತಹುಹು 37 (30ಎ, 4X6), ರಿಚಾ ಬಿ ಡಿವೈನ್ 12 (9ಎ, 4X2), ಪೂಜಾ ಸಿ ಬೇಟ್ಸ್‌ ಬಿ ಜೆನ್ಸೆನ್ 10 (9ಎ, 4X1), ಸ್ನೇಹಾ ಸಿ ಕೇಟಿ ಬಿ ಜೆನ್ಸೆನ್ 6 (9ಎ), ದೀಪ್ತಿ ಔಟಾಗದೆ 3 (3ಎ), ಸಿಮ್ರನ್ ಬಿ ಜೆಸ್ 10 (6ಎ, 4X2), ಪೂನಂ ಔಟಾಗದೆ 1 (1ಎ)

ಇತರೆ: 7 (ಲೆಗ್‌ಬೈ 1, ವೈಡ್ 6)

ವಿಕೆಟ್ ಪತನ: 1–41 (ಯಸ್ಟಿಕಾ ಭಾಟಿಯಾ; 6.3), 2–42 (ಶೆಫಾಲಿ ವರ್ಮಾ; 6.5), 3–67 (ಹರ್ಮನ್‌ಪ್ರೀತ್ ಕೌರ್; 10.5), 4–101 (ಮೇಘನಾ; 14.5), 5–107 (ರಿಚಾ ಘೋಷ್; 15.5), 6–120 (ಸ್ನೇಹಾ ರಾಣಾ; 18.1), 7–122 (ಪೂಜಾ ವಸ್ತ್ರಕರ್; 18.3), 8–136 (ಸಿಮ್ರನ್ ಬಹಾದ್ದೂರ್; 19.5).

ಬೌಲರ್

ಜೆಸ್ ಕೆರ್ 4–0–20–2, ಹನ್ನಾ ರೋವ್ 2–0–18–0, ಲೀ ತಹುಹು 4–0–27–1, ಅಮೆಲಿಯಾ ಕೆರ್ 4–0–25–2, ಸೋಫಿ ಡಿವೈನ್ 3–0–21–1, ಹೈಲಿ ಜೆನ್ಸನ್ 3–0–25–2

ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 18 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.