ADVERTISEMENT

ಐಪಿಎಲ್‌ನಿಂದ ಹೊರಬಿದ್ದ ಫರ್ಗ್ಯುಸನ್

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 21:15 IST
Last Updated 14 ಏಪ್ರಿಲ್ 2025, 21:15 IST
 ಲಾಕಿ ಫರ್ಗ್ಯುಸನ್
 ಲಾಕಿ ಫರ್ಗ್ಯುಸನ್   

ಮುಲ್ಲನಪುರ (ಪಿಟಿಐ): ಗಾಯಾಳಾಗಿರುವ ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲರ್‌, ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯುಸನ್ ಅವರು ಐಪಿಎಲ್‌ನ ಈ ಆವೃತ್ತಿಯಿಂದ ಹೊರಗುಳಿದಿದ್ದಾರೆ. 

ಕಳೆದ ವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ವೇಳೆ ಎರಡು ಎಸೆತ ಬೌಲಿಂಗ್‌ ಮಾಡಿದ ನಂತರ ಫರ್ಗ್ಯುಸನ್ ಎಡಗಾಲಿನಲ್ಲಿ ನೋವು ಕಾಣಿಸಿಕೊಂಡಿದ್ದು, ಮೈದಾನದಿಂದ ಹೊರನಡೆದಿದ್ದರು.

‘ಫರ್ಗ್ಯುಸನ್ ಯಾವಾಗ ತಂಡಕ್ಕೆ ಮರಳುತ್ತಾರೆ ಎಂದು ಹೇಳುವುದು ಕಷ್ಟ. ಈ ಬಾರಿ ಮರಳುವ ಸಾಧ್ಯತೆ ಕಡಿಮೆ’ ಎಂದು ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.