ADVERTISEMENT

ಕೊಹ್ಲಿ ಬಳಗಕ್ಕೆ ‘ಅಂತರ ತಂಡ’ ಪಂದ್ಯಗಳಿಗಷ್ಟೇ ಅವಕಾಶ

ಪಿಟಿಐ
Published 25 ಜೂನ್ 2021, 15:53 IST
Last Updated 25 ಜೂನ್ 2021, 15:53 IST
ವಿರಾಟ್ ಕೊಹ್ಲಿ –ಪಿಟಿಐ ಚಿತ್ರ
ವಿರಾಟ್ ಕೊಹ್ಲಿ –ಪಿಟಿಐ ಚಿತ್ರ   

ನವದೆಹಲಿ: ಆತಿಥೇಯ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮೊದಲು ವಿರಾಟ್ ಕೊಹ್ಲಿ ಬಳಗದಲ್ಲಿ ಎರಡು ತಂಡಗಳನ್ನಾಗಿ ಮಾಡಿ ಅಭ್ಯಾಸಕ್ಕೆ ಅವಕಾಶ ನೀಡಾಗಿದೆ. ಡುರ್ಹಾಮ್‌ನಲ್ಲಿರುವ ರಿವರ್ ಸೈಡ್ ಮೈದಾನದಲ್ಲಿ ಎರಡು ‍ಪಂದ್ಯಗಳು ನಡೆಯಲಿವೆ. ಆದರೆ ಅಲ್ಲಿಗೆ ಆಯ್ಕೆ ಸಮಿತಿಯವರಿಗೆ ಅವಕಾಶ ಇಲ್ಲ.

ಆಗಸ್ಟ್ ನಾಲ್ಕರಂದು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿ ಆರಂಭವಾಗಲಿದೆ. ಇದಕ್ಕೂ ಮೊದಲು ಕೌಂಟಿ ತಂಡಗಳ ಜೊತೆ ಅಭ್ಯಾಸ ಪಂದ್ಯಗಳನ್ನು ಏರ್ಪಡಿಸದೇ ಇರುವುದಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಗುರುವಾರ ಅಸಮಾಧಾನ ವ್ಯಕ್ತಪಡಿಸಿದ್ದರು. ಸುದೀರ್ಘ ಕಾಲ ಕೊಠಡಿಯೊಳಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಬಯೊಬಬಲ್ ತೊರೆದು ಆಟಗಾರರು ಹೊರಬಂದಿದ್ದರು.

ಪ್ರಥಮ ದರ್ಜೆ ಪಂದ್ಯಗಳನ್ನು ಆಡುವ ತಂಡಗಳ ಜೊತೆ ಪಂದ್ಯಗಳನ್ನು ಏರ್ಪಡಿಸಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ ಶುಕ್ರವಾರ ಸ್ಪಷ್ಟಪಡಿಸಿದ್ದು ಎರಡು ತಂಡಗಳನ್ನು ಮಾಡಿ ನಾಲ್ಕು ದಿನಗಳ ಎರಡು ಪಂದ್ಯಗಳನ್ನು ಆಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ. ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಡಳಿ ವಕ್ತಾರರು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.