ADVERTISEMENT

ಐಪಿಎಲ್ ಗುಂಗು: ಸ್ನೇಹಕ್ಕೇ ತರದಿರಲಿ ಕುತ್ತು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 20:15 IST
Last Updated 9 ಏಪ್ರಿಲ್ 2019, 20:15 IST
ಮೈದಾನದಲ್ಲಿ ಆರ್‌ಸಿಬಿ ಆಟಗಾರರ ಸಂತಸ ಕ್ಷಣ
ಮೈದಾನದಲ್ಲಿ ಆರ್‌ಸಿಬಿ ಆಟಗಾರರ ಸಂತಸ ಕ್ಷಣ   

ಲ್ಲೋ ಯಾವುದೋ ಒಂದು ಊರಲ್ಲಿ ಹುಟ್ಟಿ ಬೆಳೆದು ಮುಂದೆ ಶಾಲೆ-ಕಾಲೇಜು ಅಂತಾ ಸೇರಿಕೊಂಡಾಗ ಪರಿಚಯವಾಗುವ, ನಂತರ ಬಿಡಿಸಲಾಗದ ಬಂಧ ಸ್ನೇಹ. ಮೊದಮೊದಲು ನೀವು, ನೀವು ಅಂತಾ ಪರಿಚಯವಾಗಿ ಬರ್‍ತಾ ಬರ್‍ತಾ ಲೇ, ಲೋ ಎನ್ನುವ ಹಂತದಲ್ಲಿ ಬರುವ ಒಂದು ಬಂಧವೇಸ್ನೇಹ.

ಇಲ್ಲಿ ನಾನಾ ರೀತಿ ಜಗಳ, ಮನಸ್ತಾಪವಾದರೂಕ್ಷಣಕ್ಕೆ ಅದನ್ನು ಮರೆತು ಮತ್ತೆ ಗೆಳೆಯನ ಹೆಗಲ ಮೇಲೆ ಕೈಹಾಕಿ ನಡೆಯುವ ಒಂದು ಮುಗ್ಧತೆಯೇ ಸ್ನೇಹ. ಇಲ್ಲಿ ಜಾತಿ, ಭೇದ–ಭಾವಗಳಿಗೆ ಜಾಗವಿಲ್ಲ. ಒಂದೇ ತಾಯಿಯ ಮಕ್ಕಳಂತೆ ಇರುವವರು ಸ್ವಂತ ಅಣ್ಣ-ತಮ್ಮರಿಗಿಂತ ಹೆಚ್ಚೇ.

ಸಣ್ಣ-ಪುಟ್ಟ ಮುನಿಸು ಮರೆತು ಗೆಳೆಯ/ಗೆಳತಿಯ ನೋವಿಗೆ ಸ್ಪಂದಿಸಿ. ಕಷ್ಟಕ್ಕೆ ಸಹಾಯ ಮಾಡುವ ಒಂದು ನಿಸ್ವಾರ್ಥ ಪ್ರೀತಿಯೇಸ್ನೇಹ. ಆದರೆ ಇಂದಿನ ದಿನಮಾನಗಳಲ್ಲಿ ಸ್ನೇಹವಷ್ಟೆ ಅಲ್ಲ ಇನ್ನು ಹಲವಾರು ಸಂಬಂಧಗಳು ತಮ್ಮ ಅಸ್ತಿತ್ವಕಳೆದುಕೊಳ್ಳುತ್ತಿವೆ ಎಂದರೆ ತಪ್ಪಾಗಲಿಕ್ಕಿಲ್ಲ.

ADVERTISEMENT

ಇಂದಿನ ಸ್ನೇಹದ ಅಭದ್ರತೆಗೆ ಕಾರಣ ಹುಡುಕುತ್ತ ಹೊರಟರೆ ನಮಗೆ ಎದುರಾಗುವ ಹಲವಾರುದಾರಿಯಲ್ಲಿ ಇದೀಗ ಕಾಣುವ ಮಾರ್ಗವೆಂದರೇ ಐಪಿಎಲ್. ಇಲ್ಲಿ ಹಲವಾರು ತಂಡಗಳಿದ್ದು ಅವು ಅದರದೇ ಆದ ಅಭಿಮಾನಿಗಳ ಸಂಖ್ಯೆಯನ್ನು ಹೊಂದಿವೆ. ದೇಶ ಅಂತಾ ಬಂದರೆ ಭಾತರ ತಂಡವನ್ನೇಪ್ರೀತಿಸುವ ನಾವು,ಐಪಿಎಲ್ ಎಂದಾಕ್ಷಣ ಪ್ರತ್ಯೇಕ ತಂಡಗಳ ಮೇಲೆ ಒಲವು ತೋರುತ್ತೇವೆ.

ಅಭಿಮಾನ ಇರಲಿ, ಬೇಡ ಎಂದವರು ಯಾರು..? ಆದರೆ ಗೆಳೆತನಕ್ಕೆ ಇದು ಮಾರಕವಾಗಬಾರದು. ಸ್ನೇಹಿತರಿಬ್ಬರ ಆಯ್ಕೆಯ ತಂಡಗಳು ವಿಭಿನ್ನವಾಗಿರುತ್ತವೆ. ಹಾಗಾಗಿ ಅವರ ತಂಡಗಳೆದುರಾದಾಗ ಅವರಿಬ್ಬರಲ್ಲಿ ನಮ್ಮ ತಂಡ ಉತ್ತಮ, ನಮ್ಮ ತಂಡ ಉತ್ತಮ ಎಂದು ಮಾತಿನ ಚಕಮಕಿಯಾಗುತ್ತದೆ. ಇದು ತೀರಾ ಜಗಳದ ಮಟ್ಟಿಗೂ ಹೋಗಿ, ಮಾತು ಬಿಡುವ ಪ್ರಸಂಗಗಳೂ ಹೆಚ್ಚಾಗುತ್ತಿವೆ.

ಕ್ರಿಕೆಟ್‌ನಲ್ಲಿ ಎರಡು ತಂಡಗಳ ಎದುರಾಳಿಗಳು ಸೆಣಸಾಡುವರು. ತದನಂತರ ಅವರು ಮತ್ತೆ ಒಂದಾಗುವರು. ಅದನ್ನು ಗಮನಿಸದ ನಾವುಗಳು ನಮ್ಮ ನಮ್ಮ ತಂಡಗಳಿಗೆ ಸಪೋರ್ಟ್ ಮಾಡುವ ಭರದಲ್ಲಿ ನಮ್ಮ ಎದುರಿನನಮ್ಮ ಸ್ನೇಹಿತ ಎಂದು ಮರೆತು ಅವನೊಂದಿಗೆ ವಾಗ್ವಾದ ಮಾಡುತ್ತ ಅವನನ್ನು ಹೀಯಾಳಿಸುತ್ತೇವೆ.ಇದರಿಂದ ಇಬ್ಬರ ಮನಸ್ಸಿನ ಮೇಲಾಗುವ ಪರಿಣಾಮವನ್ನು ಇಬ್ಬರೂ ಮರೆತುಬಿಡುತ್ತಾರೆ.

ಅದೇನೆ ಆಗಲಿ, ಐಪಿಎಲ್ ಒಂದು ಆಟ ಮಾತ್ರ. ಅದಕ್ಕಾಗಿ ನಮ್ಮ ಅಮೂಲ್ಯ ಸ್ನೇಹಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.ಯಾವ ಟೀಮ್ ಗೆದ್ದರೂ ಏನಂತೆ? ನಮಗೆ ನಮ್ಮ ಸ್ನೇಹ ಮುಖ್ಯ ಎಂಬುದು ಮರೆಯದಿರೋಣ. ಆ ಟೂರ್ನಿಯನ್ನು ಎಲ್ಲರೂ ಸೇರಿ ನೋಡಿ ಸಂಭ್ರಮಿಸೋಣ. ಒಂದೆರಡು ತಿಂಗಳ ಟೂರ್ನಿಗಾಗಿ ವರ್ಷಗಳ ಗಾಢಸ್ನೇಹಹಾಳಾಗದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.