ADVERTISEMENT

IPL 2021 | DC vs KKR: ಹಳಿ ತಪ್ಪಿದ ಡೆಲ್ಲಿ; ಕೋಲ್ಕತ್ತ ಫೈನಲ್‌ಗೆ ಲಗ್ಗೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಶಾರ್ಜಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಎರಡನೇ ಕ್ವಾಲಿಫೈಯರ್ ಹಣಾಹಣಿಯಲ್ಲಿ ಮೂರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಕೋಲ್ಕತ್ತ ನೈಟ್ ರೈಡರ್ಸ್ ಫೈನಲ್‌ಗೆ ಲಗ್ಗೆಯಿಟ್ಟಿದೆ.

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 18:27 IST
Last Updated 13 ಅಕ್ಟೋಬರ್ 2021, 18:27 IST

ನಾಟಕೀಯ ತಿರುವು, ಕೆಕೆಆರ್‌ಗೆ ಥ್ರಿಲ್ಲಿಂಗ್ ಗೆಲುವು, ಸಂಪೂರ್ಣ ವರದಿ ಓದಿ

ಕೆಕೆಆರ್ ಗೆಲುವಿನ ರೋಚಕ ಕ್ಷಣ

ಕೋಲ್ಕತ್ತಗೆ ಗೆಲುವಿನ ಸಿಹಿ, ಡೆಲ್ಲಿಗೆ ಸೋಲಿನ ಕಹಿ

ತ್ರಿಪಾಠಿ ಸಿಕ್ಸರ್, ಫೈನಲ್‌ಗೆ ಕೋಲ್ಕತ್ತ ಲಗ್ಗೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಶಾರ್ಜಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಎರಡನೇ ಕ್ವಾಲಿಫೈಯರ್ ಹಣಾಹಣಿಯಲ್ಲಿ ಮೂರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಕೋಲ್ಕತ್ತ ನೈಟ್ ರೈಡರ್ಸ್ ಫೈನಲ್‌ಗೆ ಲಗ್ಗೆಯಿಟ್ಟಿದೆ. 

ಅಂತಿಮ ಹಂತದಲ್ಲಿ ಹಲವಾರು ನಾಟಕೀಯ ತಿರುವುಗಳನ್ನು ಪಡೆದ ಪಂದ್ಯದಲ್ಲಿ ಕೊನೆಗೂ ಇನ್ನು ಒಂದು ಎಸೆತ ಬಾಕಿ ಉಳಿದಿರುವಂತೆಯೇ ಗೆಲುವು ದಾಖಲಿಸಿರುವ ಕೋಲ್ಕತ್ತ, ರೋಚಕ ಗೆಲುವು ದಾಖಲಿಸಿದೆ. 

ADVERTISEMENT

ಇದೀಗ ಅಕ್ಟೋಬರ್ 15 ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ. ಭಾನುವಾರ ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ತಂಡವನ್ನು ಮಣಿಸಿದ್ದ ಸಿಎಸ್‌ಕೆ ಫೈನಲ್‌ಗೆ ಪ್ರವೇಶಿಸಿತ್ತು. 

ಅತ್ತ ಏಯಾನ್ ಮಾರ್ಗನ್ ಪಡೆಯು ಎಲಿಮಿನೇಟರ್‌‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ದಾಖಲಿಸಿತ್ತು. ಈಗ ಎರಡನೇ ಕ್ವಾಲಿಫೈಯರ್‌ನಲ್ಲಿ ಗುಂಪಿನ ಅಗ್ರಸ್ಥಾನಿ ಡೆಲ್ಲಿ ತಂಡಕ್ಕೆ ಸೋಲಿನ ರುಚಿ ತೋರಿಸಿದೆ. ಇದರೊಂದಿಗೆ ಡೆಲ್ಲಿ ತಂಡದ ಚೊಚ್ಚಲ ಐಪಿಎಲ್ ಕನಸು ಭಗ್ನಗೊಂಡಿದೆ. 

ವರುಣ್ ಚಕ್ರವರ್ತಿ (26ಕ್ಕೆ 2 ವಿಕೆಟ್) ಸೇರಿದಂತೆ ಕೆಕೆಆರ್ ಬೌಲರ್‌ಗಳ ಪ್ರಭಾವಿ ದಾಳಿಗೆ ಸಿಲುಕಿದ ಡೆಲ್ಲಿ ತಂಡವು ಐದು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಿಧಾನಗತಿಯ ಆಟವಾಡಿದ ಡೆಲ್ಲಿ ಬ್ಯಾಟರ್‌ಗಳು ತಮ್ಮದೇ ತಪ್ಪಿಗಾಗಿ ದೊಡ್ಡ ಬೆಲೆ ತೆರಬೇಕಾಯಿತು. 

ಬಳಿಕ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡಕ್ಕೆ ವೆಂಕಟೇಶ್ ಅಯ್ಯರ್ ಹಾಗೂ ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ಕಟ್ಟುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 

ಆದರೆ ಕೊನೆಯ ಹಂತದಲ್ಲಿ ಕುಸಿತ ಕಂಡು ಸೋಲಿನ ಭೀತಿಗೊಳಗಾಗಿತ್ತು. ಆದರೆ ಅಂತಿಮ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ರಾಹುಲ್ ತ್ರಿಪಾಠಿ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. 

ಡೆಲ್ಲಿ ತಿರುಗೇಟು, ರೋಚಕ ಹಂತದಲ್ಲಿ ಪಂದ್ಯ

ಕೊನೆಯ ಓವರ್‌ನಲ್ಲಿ ಕೋಲ್ಕತ್ತ ಗೆಲುವಿಗೆ ಬೇಕು 7 ರನ್

ಡೆಲ್ಲಿ ಹೋರಾಟ

ಕೊನೆಗೂ ಜೊತೆಯಾಟ ಮುರಿದ ಡೆಲ್ಲಿ

38 ಎಸೆತಗಳಲ್ಲಿ ಅಯ್ಯರ್ ಅರ್ಧಶತಕ ಸಾಧನೆ

10 ಓವರ್ ಅಂತ್ಯಕ್ಕೆ ಕೆಕೆಆರ್ 76/0

10 ಓವರ್ ಅಂತ್ಯಕ್ಕೆ ಕೋಲ್ಕತ್ತ ವಿಕೆಟ್ ನಷ್ಟವಿಲ್ಲದೆ 76 ರನ್ ಗಳಿಸಿದೆ. ಓಪನರ್‌ಗಳಾದ ವೆಂಕಟೇಶ್ ಅಯ್ಯರ್ (27*) ಹಾಗೂ ಶುಭಮನ್ ಗಿಲ್ (44*) ಕ್ರೀಸಿನಲ್ಲಿದ್ದಾರೆ. ಅಂತಿಮ 60 ಎಸೆತಗಳಲ್ಲಿ ಎಸೆತಕ್ಕೆ ಒಂದರಂತೆ ಗೆಲುವಿಗೆ 60 ರನ್ ಬೇಕಿದೆ. 

ಕೋಲ್ಕತ್ತ ಪವರ್ ಪ್ಲೇ ಅಂತ್ಯಕ್ಕೆ 51/0

ಅಯ್ಯರ್-ಗಿಲ್ ಫಿಫ್ಟಿ ಜೊತೆಯಾಟ

ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡಕ್ಕೆ ವೆಂಕಟೇಶ್ ಅಯ್ಯರ್ ಹಾಗೂ ಶುಭಮನ್ ಗಿಲ್ ಬಿರುಸಿನ ಆರಂಭವೊದಗಿಸಿದರು. ಪರಿಣಾಮ 5.4 ಓವರ್‌ಗಳಲ್ಲೇ ತಂಡದ ಮೊತ್ತ 50ರ ಗಡಿ ದಾಟಿತು. 

ಪವರ್ ಪ್ಲೇ ಅಂತ್ಯಕ್ಕೆ ಕೆಕೆಆರ್ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿದೆ. 

ಡೆಲ್ಲಿ 135/5

ವರುಣ್ ಚಕ್ರವರ್ತಿ (26ಕ್ಕೆ 2 ವಿಕೆಟ್) ಸೇರಿದಂತೆ ಕೋಲ್ಕತ್ತ ನೈಟ್ ರೈಡರ್ಸ್ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿರುವ ಡೆಲ್ಲಿ ಕ್ಯಾಪಿಟಲ್ಸ್, ಶಾರ್ಜಾದಲ್ಲಿ ನಡೆಯುತ್ತಿರುವ ಐಪಿಎಲ್ ಎರಡನೇ ಕ್ವಾಲಿಫೈಯರ್‌ನಲ್ಲಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

ಡೆಲ್ಲಿ ಪರ ಶಿಖರ್ ಧವನ್ ಗರಿಷ್ಠ 36 ರನ್ ಗಳಿಸಿದರು. ಕೊನೆಯ ಹಂತದಲ್ಲಿ ಶ್ರೇಯಸ್ ಅಯ್ಯರ್ ಅಜೇಯ 30 ರನ್ ಹಾಗೂ ಶಿಮ್ರೊನ್ ಹೆಟ್ಮೆಯರ್ ಕೇವಲ 10 ಎಸೆತದಲ್ಲಿ ಎರಡು ಸಿಕ್ಸರ್ ನೆರವಿನಿಂದ 17 ರನ್ ಗಳಿಸಿದರು. 

ಪಂತ್ ವೈಫಲ್ಯ, ಫರ್ಗ್ಯುಸನ್‌ಗೆ ಯಶಸ್ಸು

ಚಕ್ರವರ್ತಿ ಸ್ಪಿನ್ ಮೋಡಿ, ಸಂಕಷ್ಟದಲ್ಲಿ ಡೆಲ್ಲಿ

ಸ್ಟೋಯಿನಿಸ್ ಕ್ಲೀನ್ ಬೌಲ್ಡ್ ಮಾಡಿದ ಶಿವಂ ಮಾವಿ

10 ಓವರ್ ಅಂತ್ಯಕ್ಕೆ ಡೆಲ್ಲಿ 65/1

10 ಓವರ್ ಅಂತ್ಯಕ್ಕೆ ಡೆಲ್ಲಿ ಒಂದು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ. ಶಿಖರ್ ಧವನ್ (29*) ಹಾಗೂ ಮಾರ್ಕಸ್ ಸ್ಟೋಯಿನಿಸ್ (15*) ಕ್ರೀಸಿನಲ್ಲಿದ್ದಾರೆ.  

ವರುಣ್ ಬಲೆಗೆ ಬಿದ್ದ ಪೃಥ್ವಿ ಶಾ

ಪವರ್ ಪ್ಲೇ ಅಂತ್ಯಕ್ಕೆ ಡೆಲ್ಲಿ 38/1

ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 4.1 ಓವರ್‌ಗಳಲ್ಲಿ 31 ರನ್ ಪೇರಿಸಿದರು. ಈ ಸಂದರ್ಭದಲ್ಲಿ ದಾಳಿಗಿಳಿದ ವರುಣ್ ಚಕ್ರವರ್ತಿ, ಅಪಾಯಕಾರಿ ಪೃಥ್ವಿ ಶಾ (18) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಪವರ್ ಪ್ಲೇ ಅಂತ್ಯಕ್ಕೆ ಡೆಲ್ಲಿ ಒಂದು ವಿಕೆಟ್ ನಷ್ಟಕ್ಕೆ  38 ರನ್ ಗಳಿಸಿದೆ. ಶಿಖರ್ ಧವನ್ (17*) ಹಾಗೂ ಮಾರ್ಕಸ್ ಸ್ಟೋಯಿನಿಸ್ (3*) ಕ್ರೀಸಿನಲ್ಲಿದ್ದಾರೆ. 

ಪೃಥ್ವಿ-ಧವನ್ ಉತ್ತಮ ಆಟ

ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಆರಂಭವೊದಗಿಸಿದರು. 4 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 32 ರನ್ ಗಳಿಸಿದೆ. 

ಪ್ಲೇಯಿಂಗ್-ಇಲೆವೆನ್

ಟಾಸ್ ಝಲಕ್

ಟಾಸ್ ಗೆದ್ದ ಮಾರ್ಗನ್ ಫೀಲ್ಡಿಂಗ್ ಆಯ್ಕೆ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕೋಲ್ಕತ್ತ ನೈಟ್ ರೈಡರ್ಸ್ ನಾಯಕ ಏಯಾನ್ ಮಾರ್ಗನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಏಯಾನ್ ಮಾರ್ಗನ್

ಪಿಚ್ ಪರಿಶೀಲಿಸುತ್ತಿರುವ ಪಂತ್

ಕ್ವಾಲಿಫೈಯರ್ 2

ಡೆಲ್ಲಿ vs ಕೋಲ್ಕತ್ತ

ಪಂತ್ vs ಮಾರ್ಗನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.