ADVERTISEMENT

IPL 2021 | KKR vs SRH: ಸನ್‌ರೈಸರ್ಸ್ ವಿರುದ್ಧ ಕೆಕೆಆರ್‌ಗೆ 6 ವಿಕೆಟ್ ಅಂತರದ ಜಯ

ಐಪಿಎಲ್‌ನಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಪ್ಲೇ-ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ.

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 17:50 IST
Last Updated 3 ಅಕ್ಟೋಬರ್ 2021, 17:50 IST

ಗೆಲುವಿನ ಕ್ಷಣ

ಗ್ಯಾಲರಿಯಲ್ಲಿ ವಾರ್ನರ್

ದಿನೇಶ್ ಕಾರ್ತಿಕ್ ಮೈಲಿಗಲ್ಲು

ಕೆಕೆಆರ್ ಪ್ಲೇ-ಆಫ್ ಕನಸು ಜೀವಂತ.

ಕೆಕೆಆರ್‌ಗೆ ಅರ್ಹ ಗೆಲುವು

ಕೆಕೆಆರ್‌ಗೆ ಆರು ವಿಕೆಟ್ ಅಂತರದ ಗೆಲುವು

ಬೌಲರ್‌ಗಳ ಸಾಂಘಿಕ ದಾಳಿ ಹಾಗೂ ಶುಭಮನ್ ಗಿಲ್ ಸಮಯೋಚಿತ ಅರ್ಧಶತಕದ (57) ನೆರವಿನೊಂದಿಗೆ ಕೋಲ್ಕತ್ತ ನೈಟ್ ರೈಡರ್ಸ್, ಭಾನುವಾರ ದುಬೈಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. 

ಇದರೊಂದಿಗೆ ಪ್ಲೇ-ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ. 

ADVERTISEMENT

ಅತ್ತ ಆಗಲೇ ಪ್ಲೇ-ಆಫ್ ಆಸೆ ಭಗ್ನಗೊಂಡಿರುವ ಹೈದರಾಬಾದ್ ತಂಡವು ಎಂಟು ವಿಕೆಟ್ ನಷ್ಟಕ್ಕೆ 115 ರನ್ ಗಳಿಸಲಷ್ಟೇ ಸಮರ್ಥವಾಯಿತು. ಬಳಿಕ ಗುರಿ ಬೆನ್ನತ್ತಿದ ಕೆಕೆಆರ್, ಗಿಲ್ ಎಚ್ಚರಿಕೆಯ ಆಟದ ನೆರವಿನಿಂದ 19.4 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

ಗಿಲ್ ಆಕರ್ಷಕ ಅರ್ಧಶತಕ

ಅತ್ತ ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ಶುಭಮನ್ ಗಿಲ್, ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. 

ಹೈದರಾಬಾದ್ ಬೌಲರ್‌ಗಳ ತಿರುಗೇಟು

10 ಓವರ್ ಅಂತ್ಯಕ್ಕೆ ಕೆಕೆಆರ್ ಎರಡು ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿತ್ತು. 

ಗಂಟೆಗೆ 150 ಕಿ.ಮೀ. ವೇಗದಲ್ಲಿ ದಾಳಿ ಮಾಡಿದ ಉಮ್ರನ್ ಮಲಿಕ್

ರಾಹುಲ್ ತ್ರಿಪಾಠಿ ನಿರ್ಗಮನ

ವೆಂಕಟೇಶ್ ಅಯ್ಯರ್ ವಿಕೆಟ್ ಪತನ

ಸುಲಭ ಗುರಿ ಬೆನ್ನತ್ತಿದ ಕೆಕೆಆರ್ ನಿಧಾನಗತಿಯ ಆರಂಭ ಪಡೆದಿದೆ. ಪವರ್ ಪ್ಲೇ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿತ್ತು. 

ಭುವನೇಶ್ವರ್ ಕುಮಾರ್ ಮೈಲಿಗಲ್ಲು

ಹೈದರಾಬಾದ್ ವೈಫಲ್ಯ 115/8

ಕೋಲ್ಕತ್ತ ನೈಟ್ ರೈಡರ್ಸ್ ಬೌಲರ್‌ಗಳ ಸಾಂಘಿಕ ದಾಳಿಗೆ ತತ್ತರಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಎಂಟು ವಿಕೆಟ್ ನಷ್ಟಕ್ಕೆ 115 ರನ್ ಗಳಿಸಲಷ್ಟೇ ಸಮರ್ಥವಾಯಿತು. 

ನಾಯಕ ಕೇನ್ ವಿಲಿಯಮ್ಸನ್ (26), ಪ್ರಿಯಂ ಗಾರ್ಗ್ (21) ಹಾಗೂ ಅಬ್ದುಲ್ ಸಮದ್ (25) ಉತ್ತಮ ಆರಂಭ ಪಡೆದರೂ ಅದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗಲಿಲ್ಲ. 

ಕೆಕೆಆರ್ ಪರ ಟಿಮ್ ಸೌಥಿ, ವರುಣ್ ಚಕ್ರವರ್ತಿ ಹಾಗೂ ಶಿವಂ ಮಾವಿ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು. 

ಹೈದರಾಬಾದ್ 5ನೇ ವಿಕೆಟ್ ಪತನ

ಕೆಕೆಆರ್ ಬೌಲರ್‌ಗಳ ಮೋಡಿ

ವಿಲಿಯಮ್ಸನ್ ರನೌಟ್

ಹೈದರಾಬಾದ್ ಆರಂಭಿಕರ ಪತನ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಆರಂಭ ಉತ್ತಮವಾಗಿರಲಿಲ್ಲ. ವೃದ್ಧಿಮಾನ್ ಸಹಾ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಮರಳಿದರು. ಜೇಸನ್ ರಾಯ್ (10) ಕೂಡ ಸದ್ದು ಮಾಡಲಿಲ್ಲ. ಪವರ್ ಪ್ಲೇ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತ್ತು. 

ಜೇಸನ್ ರಾಯ್ ಔಟ್

ಹೈದರಾಬಾದ್ ಕಳಪೆ ಆರಂಭ

ಆಡುವ ಬಳಗ ಇಂತಿದೆ:

ಟಾಸ್ ಝಲಕ್

ಹೈದರಾಬಾದ್ ಬ್ಯಾಟಿಂಗ್

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. 

ಕೋಲ್ಕತ್ತಗೆ ಮಹತ್ವದ ಪಂದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.