ADVERTISEMENT

IPL 2021 | MI vs CSK: ಪೊಲಾರ್ಡ್ ಪಂಚ್; ಚೆನ್ನೈ ಅಜೇಯ ಓಟಕ್ಕೆ ಬ್ರೇಕ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ಬಾರಿಸಿದೆ. ಕೇವಲ 34 ಎಸೆತಗಳಲ್ಲಿ ಅಜೇಯ 84 ರನ್ ಚಚ್ಚಿದ ಪೊಲಾರ್ಡ್ ಗೆಲುವಿನ ರೂವಾರಿ ಎನಿಸಿದರು. ಬೌಲಿಂಗ್‌ನಲ್ಲೂ ಮಿಂಚಿದ ಪೊಲಾರ್ಡ್ ಎರಡು ವಿಕೆಟ್ ಪಡೆದಿದ್ದರು.

​ಪ್ರಜಾವಾಣಿ ವಾರ್ತೆ
Published 1 ಮೇ 2021, 18:34 IST
Last Updated 1 ಮೇ 2021, 18:34 IST

ರೋಚಕ ಕದನದ ಬಳಿಕ...

ಚೆನ್ನೈಗೆ ಲಾಸ್ಟ್ ಬಾಲ್ ವಿಕ್ಟರಿ

ಪೊಲಾರ್ಡ್ ಆರ್ಭಟ; ಚೆನ್ನೈ ಧೂಳೀಪಟ

ಮುಂಬೈಗೆ ಸ್ಮರಣೀಯ ಗೆಲುವು

ಮುಂಬೈಗೆ ನಾಲ್ಕು ವಿಕೆಟ್ ಅಂತರದ ಗೆಲುವು

ಕೀರಾನ್ ಪೊಲಾರ್ಡ್ ಬ್ಯಾಟಿಂಗ್ ಅಬ್ಬರದ (87*) ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಲ್ಕು  ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಬೃಹತ್ ಗುರಿ ಬೆನ್ನತ್ತಿದ ಮುಂಬೈಗೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 71 ರನ್‌ಗಳ ಜೊತೆಯಾಟ ನೀಡಿದರು. ಆದರೆ ಇವರಿಬ್ಬರ ಪತನದ ಬೆನ್ನಲ್ಲೇ  9.4 ಓವರ್‌ಗಳಲ್ಲಿ 81 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಕ್ರೀಸಿಗಿಳಿದ ವಿಂಡೀಸ್ ದೈತ್ಯ ಪೊಲಾರ್ಡ್, ಮೈದಾನದಲ್ಲಿ ಸಿಕ್ಸರ್‌‌ಗಳ ಸುರಿಮಳೆಗೈದರು. ಪೊಲಾರ್ಡ್ ಅಬ್ಬರಕ್ಕೆ ಚೆನ್ನೈ ಬೌಲರ್‌‌ಗಳ ಬಳಿ ಉತ್ತರವೇ ಇರಲಿಲ್ಲ.

ADVERTISEMENT

ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಪೊಲಾರ್ಡ್, ಕೃಣಾಲ್ ಪಾಂಡ್ಯ ಜೊತೆಗೆ 89 ರನ್‌‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಇಲ್ಲಿಗೂ ಪೊಲಾರ್ಡ್ ಆರ್ಭಟ ನಿಲ್ಲನಿಲ್ಲ. ಅಂತಿಮವಾಗಿ ಭರ್ತಿ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.

ಪೊಲಾರ್ಡ್‌ಗೆ ತಕ್ಕ ಸಾಥ್ ನೀಡಿದ ಪಾಂಡ್ಯ ಸೋದರರಾದ ಕೃಣಾಲ್ (32) ಹಾಗೂ ಹಾರ್ದಿಕ್ (16) ರನ್ ಗಳಿಸಿದರು.

ಸ್ಯಾಮ್ ಕರನ್‌ಗೆ ಮೂರು ವಿಕೆಟ್

ಪೊಲಾರ್ಡ್ ಪವರ್‌ಫುಲ್ ಹಿಟ್ಟಿಂಗ್

ಮ್ಯಾಚ್ ಈಸ್ ಆನ್

ಈ ಹಂತದಲ್ಲಿ ಕ್ರೀಸಿಗಿಳಿದ ಕೀರನ್ ಪೊಲಾರ್ಡ್, ಬೌಂಡರಿ ಸಿಕ್ಸರ್‌ ಗಳ ಸುರಿಮಳೆಗೈದರು. ಈ ಮೂಲಕ ಪಂದ್ಯದಲ್ಲಿ ಮುಂಬೈ ತಿರುಗೇಟು ನೀಡಲು ನೆರವಾದರು. ಅಲ್ಲದೆ ಕೃಣಾಲ್ ಜೊತೆಗೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಪೊಲಾರ್ಡ್ ಆರ್ಭಟ

ಮುಂಬೈ ಹೋರಾಟಕ್ಕೆ ಪೊಲಾರ್ಡ್ ಸಿಕ್ಸರ್ ಬಲ

ಬೌಲಿಂಗ್‌ನಲ್ಲೂ ಮೊಯಿನ್ ಮಿಂಚು

ಸೂರ್ಯ ಹೊರದಬ್ಬಿದ ಜಡ್ಡು

ರೋಹಿತ್ ಬೆನ್ನಲ್ಲೇ ಅಸ್ತಮಿಸಿದ ಸೂರ್ಯ

ಬೃಹತ್ ಗುರಿ ಬೆನ್ನತ್ತಿದ ಮುಂಬೈಗೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 71 ರನ್‌ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಅವರನ್ನು ಶಾರ್ದೂಲ್ ಠಾಕೂರ್ ಹೊರದಬ್ಬಿದರು.

ಇದಾದ ಬೆನ್ನಲ್ಲೇ ಇನ್ ಫಾರ್ಮ್ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್ (3) ಅವರಿಗೆ ರವೀಂದ್ರ ಜಡೇಜ ಪೆವಿಲಿಯನ್ ಹಾದಿ ತೋರಿಸಿದರು.

ರೋಹಿತ್ ಹೊರದಬ್ಬಿದ ಶಾರ್ದೂಲ್

ಚೆನ್ನೈ ಇನ್ನಿಂಗ್ಸ್ ಸಂಪೂರ್ಣ ವರದಿ ಓದಿ

ಪವರ್ ಪ್ಲೇ ಅಂತ್ಯಕ್ಕೆ 58/0

ರೋಹಿತ್, ಡಿ ಕಾಕ್ ಫಿಫ್ಟಿ ಜೊತೆಯಾಟ

ಬೃಹತ್ ಮೊತ್ತ ಬೆನ್ನತ್ತಿದ ಮುಂಬೈ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಬಿರುಸಿನ ಆರಂಭವೊದಗಿಸಿದರು. ಪರಿಣಾಮ 5.1 ಓವರ್‌ಗಳಲ್ಲೇ ತಂಡದ ಮೊತ್ತ 50 ತಲುಪಿತ್ತು.

ರಾಯುಡು ಮಿಂಚಿನ ಬ್ಯಾಟಿಂಗ್

ರಾಯುಡು, ಫಫ್, ಮೊಯಿನ್ ಅಬ್ಬರ

ಮುಂಬೈಗೆ 219 ರನ್ ಗೆಲುವಿನ ಗುರಿ ಒಡ್ಡಿದ ಚೆನ್ನೈ

ಅಂಬಟಿ ರಾಯುಡು (72*), ಮೊಯಿನ್ ಅಲಿ (58) ಹಾಗೂ ಫಫ್ ಡುಪ್ಲೆಸಿ (50) ಸ್ಫೋಟಕ ಅರ್ಧಶತಕಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಓವರ್‌ಗಳಲ್ಲಿ ವಿಕೆಟ್ ನಷ್ಟಕ್ಕೆ ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ಕಳೆದ ಪಂದ್ಯ ಹೀರೊ ಋತುರಾಜ್ ಗಾಯಕವಾಡ್ (4) ಅವರನ್ನು ಟ್ರೆಂಟ್ ಬೌಲ್ಟ್ ಹೊರದಬ್ಬಿದರು. ಈ ಹಂತದಲ್ಲಿ ಧನಾತ್ಮಕ ಚಿಂತನೆಯೊಂದಿಗೆ ಬ್ಯಾಟ್ ಬೀಸಿದ ಫಫ್ ಡುಪ್ಲೆಸಿ ಹಾಗೂ ಮೊಯಿನ್ ಅಲಿ ತಂಡವನ್ನು ಮೇಲೆತ್ತಿದರು.

ಆಕರ್ಷಕ ಹೊಡೆತಗಳ ಮೂಲಕ ಮನರಂಜಿಸಿದ ಡುಪ್ಲೆಸಿ ಹಾಗೂ ಮೊಯಿನ್ ಚೆನ್ನೈ ತಂಡಕ್ಕೆ ಆಸರೆಯಾದರು. ಅತ್ತ ಮೊಯಿನ್ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದರು. ಅಲ್ಲದೆ ಫಫ್ ಜೊತೆಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಈ ನಡುವೆ ಫಿಫ್ಟಿ ಬೆನ್ನಲ್ಲೇ ಮೊಯಿನ್ ವಿಕೆಟ್ ಒಪ್ಪಿಸಿದರು. 36 ಎಸೆತಗಳನ್ನು ಎದುರಿಸಿದ ಮೊಯಿನ್ ತಲಾ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದರು.

ಇನ್ನೊಂದೆಡೆ ಫಫ್ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಕೀರನ್ ಪೊಲಾರ್ಡ್, ಒಂದೇ ಓವರ್‌ನಲ್ಲಿ ಸೆಟ್ ಬ್ಯಾಟ್ಸ್‌ಮನ್ ಫಫ್ ಜೊತೆಗೆ ಸುರೇಶ್ ರೈನಾ (2) ಹೊರದಬ್ಬುವ ಮೂಲಕ ಡಬಲ್ ಆಘಾತ ನೀಡಿದರು. 28 ಎಸೆತಗಳನ್ನು ಎದುರಿಸಿದ ಫಫ್ ಎರಡು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು.

ಕೊನೆಯ ಅಂತದಲ್ಲಿ ಕೌಂಟರ್ ಅಟ್ಯಾಕ್ ಇನ್ನಿಂಗ್ಸ್ ಕಟ್ಟಿದ ಅಂಬಟಿ ರಾಯುಡು, ಮುಂಬೈ ಬೌಲರ್‌ಗಳನ್ನು ಚೆಲ್ಲಾಟವಾಡಿದರು. ಅಲ್ಲದೆ ಕೇವಲ 20 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ತನ್ನ ಮಾಜಿ ತಂಡಕ್ಕೆ ತಕ್ಕ ಶಾಸ್ತಿ ಮಾಡಿದರು.

ರವೀಂದ್ರ ಜಡೇಜ ಜೊತೆಗೆ ಮುರಿಯದ ಐದನೇ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದ ರಾಯುಡು ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಅಂತಿಮವಾಗಿ ಚೆನ್ನೈ ನಾಲ್ಕು ವಿಕೆಟ್ ನಷ್ಟಕ್ಕೆ 218 ರನ್ ಪೇರಿಸಿತ್ತು.

ಕೇವಲ 27 ಎಸೆತಗಳನ್ನು ಎದುರಿಸಿದ ರಾಯುಡು ನಾಲ್ಕು ಬೌಂಡರಿ ಹಾಗೂ ಏಳು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 72 ರನ್ ಗಳಿಸಿ ಅಜೇಯರಾಗುಳಿದರು. ಇವರಿಗೆ ತಕ್ಕ ಸಾಥ್ ನೀಡಿದ ಜಡ್ಡು, ಎರಡು ಬೌಂಡರಿ ನೆರವಿನಿಂದ ಎಸೆತಕ್ಕೊಂದರಂತೆ 22 ರನ್ ಗಳಿಸಿ ಔಟಾಗದೆ ಉಳಿದರು.

ಮುಂಬೈ ಪರ ಒಂದು ವಿಕೆಟ್ ಪಡೆದರೂ 56 ರನ್ ಬಿಟ್ಟುಕೊಟ್ಟಿರುವ ಜಸ್‌ಪ್ರೀತ್ ಬೂಮ್ರಾ ದುಬಾರಿಯೆನಿಸಿದರು. ಇನ್ನೊಂದೆಡೆ ಪೊಲಾರ್ಡ್ 12 ರನ್ ತೆತ್ತು ಎರಡು ವಿಕೆಟ್ ಕಿತ್ತು ಮಿಂಚಿದರು.

ರಾಯುಡು 20 ಎಸೆತಗಳಲ್ಲಿ ಫಿಫ್ಟಿ ಸಾಧನೆ

ಜಡೇಜ-ರಾಯುಡು ಫಿಫ್ಟಿ ಜೊತೆಯಾಟ

ಡಬಲ್ ಆಘಾತ ನೀಡಿದ ಪೊಲಾರ್ಡ್

27 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಫಫ್

ಸಿಎಸ್‌ಕೆ ದಿಢೀರ್ ಪತನ

ಅತ್ತ ಮೊಯಿನ್‌ಗಿಂತಲೂ ವೇಗವಾಗಿ ಬ್ಯಾಟ್ ಬೀಸಿದ ಫಫ್ 27 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಆದರೆ ಇವರಿಬ್ಬರ ಪತನದ ಬೆನ್ನಲ್ಲೇ ಚೆನ್ನೈ ದಿಢೀರ್ ಕುಸಿತವನ್ನು ಅನುಭವಿಸಿತ್ತು. ಪರಿಣಾಮ 116 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಒಂದೇ ಓವರ್‌ನಲ್ಲಿ ಫಫ್ ಬೆನ್ನಲ್ಲೇ ಸುರೇಶ್ ರೈನಾ ಅವರನ್ನು ಕೀರನ್ ಪೊಲಾರ್ಡ್ ಹೊರದಬ್ಬಿದರು.

ವಿರಾಟ್‌ಗಿಂತಲೂ ವೇಗವಾಗಿ ಐಪಿಎಲ್‌ನಲ್ಲಿ ಈ ಮೈಲಿಗಲ್ಲು ತಲುಪಿದ ರೈನಾ

ಫಫ್-ಮೊಯಿನ್ ಫಿಫ್ಟಿ ಜೊತೆಯಾಟ

ಬೂಮ್ರಾ ದಾಳಿಯಲ್ಲಿ ಮೊಯಿನ್ ಸಿಕ್ಸರ್

ಮೊಯಿನ್ ಬಿರುಸಿನ ಫಿಫ್ಟಿ ಸಾಧನೆ

ಪವರ್ ಪ್ಲೇ ಅಂತ್ಯಕ್ಕೆ 49/1

ಚೆನ್ನೈಗೆ ಡುಪ್ಲೆಸಿ, ಮೊಯಿನ್ ಆಸರೆ

ಪವರ್ ಪ್ಲೇ ಅಂತ್ಯಕ್ಕೆ ಚೆನ್ನೈ ಒಂದು ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತ್ತು.

ಮೊದಲ ಆಘಾತ ನೀಡಿದ ಬೌಲ್ಟ್

ಸುರೇಶ್ ರೈನಾ ಮೈಲಿಗಲ್ಲು- 200ನೇ ಐಪಿಎಲ್ ಪಂದ್ಯ

ನಿರಾಸೆ ಮೂಡಿಸಿದ ಗಾಯಕವಾಡ್

ಚೆನ್ನೈ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಇನ್ ಫಾರ್ಮ್ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್ (4) ಅವರನ್ನು ಟ್ರೆಂಟ್ ಬೌಲ್ಡ್ ಹೊರದಬ್ಬಿದರು. ಈ ಹಂತದಲ್ಲಿ ಜೊತೆಗೂಡಿದ ಫಫ್ ಡುಪ್ಲೆಸಿ ಹಾಗೂ ಮೊಯಿನ್ ಅಲಿ ಧನಾತ್ಮಕ ಚಿಂತನೆಯೊಂದಿಗೆ ಬ್ಯಾಟ್ ಬೀಸಿದರು.

ಬಲಿಷ್ಠ ನಾಯಕರ ಕದನ

ಚೆನ್ನೈ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲ

ಟಾಸ್ ಝಲಕ್

ಮುಂಬೈ ಪರ ಕಿವೀಸ್ ಆಲ್‌ರೌಂಡರ್ ನೀಶಮ್ ಪದಾರ್ಪಣೆ

ಮುಂಬೈ ನಾಯಕ ರೋಹಿತ್ ಫೀಲ್ಡಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಜಸ್‌ಪ್ರೀತ್ ಬೂಮ್ರಾ

ಜಹೀರ್ ಖಾನ್ ಸಂದೇಶ

ಹಾರ್ದಿಕ್ ಪಾಂಡ್ಯ ರೆಡಿ

ಚೆನ್ನೈ ತಂಡದ ತಯಾರಿ

ಎಲ್ಲರ ಕಣ್ಣು ಧೋನಿ ಮೇಲೆ ನೆಟ್ಟಿದೆ

ಸಕತ್ ಫಾರ್ಮ್‌ನಲ್ಲಿ ಧೋನಿ ಪಡೆ

Match Day is upon us!

Set your Whistle alarms for
7️⃣ : 3️⃣0️⃣ PM#MIvCSK #WhistleFromHome #WhistlePodu #Yellove 🦁💛 pic.twitter.com/ERjAmYrDNu
— Chennai Super Kings - Mask P😷du Whistle P🥳du! (@ChennaiIPL) May 1, 2021

ರೋಚಕ ಕದನಕ್ಕೆ ವೇದಿಕೆ ಸಜ್ಜು

ಧೋನಿ vs ರೋಹಿತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.