ADVERTISEMENT

IPL 2021 | PBKS vs RCB: ಹರಪ್ರೀತ್ ಭಲ್ಲೇ..ಭಲ್ಲೇ; ಆರ್‌ಸಿಬಿ ಸದ್ದಡಗಿಸಿದ ರಾಹುಲ್ ಬಾಯ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 34 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ನಾಯಕ ಕೆ.ಎಲ್. ರಾಹುಲ್ (91*) ಹಾಗೂ ಯುವ ಆಲ್‌ರೌಂಡರ್ ಹರಪ್ರೀತ್ ಬ್ರಾರ್ (ಅಜೇಯ 25 ರನ್ ಹಾಗೂ 3 ವಿಕೆಟ್) ಗೆಲುವಿನ ರೂವಾರಿಯೆನಿಸಿದರು.

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 17:59 IST
Last Updated 30 ಏಪ್ರಿಲ್ 2021, 17:59 IST

ಗೆಲುವಿನ ಹಾದಿಗೆ ಮರಳಿದ ಪಂಜಾಬ್

ಪ್ರೀತಿಯ ಪಂಜಾಬ್ ವಿರುದ್ಧ ಮುಗ್ಗರಿಸಿದ ಆರ್‌ಸಿಬಿ

ಪಂಜಾಬ್‌ಗೆ 34 ರನ್ ಅಂತರದ ಭರ್ಜರಿ ಗೆಲುವು

ನಾಯಕ ಕೆ.ಎಲ್. ರಾಹುಲ್ ಸ್ಪೋಟಕ ಬ್ಯಾಟಿಂಗ್ (91*) ಹಾಗೂ ಹರಪ್ರೀತ್ ಬ್ರಾರ್ ಆಲ್‌ರೌಂಡರ್ ಪ್ರದರ್ಶನದ (ಅಜೇಯ 25 ರನ್ ಹಾಗೂ 3 ವಿಕೆಟ್) ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 34 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಕೆ.ಎಲ್. ರಾಹುಲ್ ಅಮೋಘ ಅರ್ಧಶತಕ (91*) ಹಾಗೂ ಕ್ರಿಸ್ ಗೇಲ್ (46) ಸ್ಫೋಟಕ ಆಟದ ನೆರವಿನಿಂದ ಪಂಜಾಬ್ ತಂಡವು 179 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಕಿಂಗ್ಸ್ ದಾಳಿಗೆ ತತ್ತರಿಸಿದ ಬೆಂಗಳೂರು ಎಂಟು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಗಿತ್ತು. 

ಮೊದಲು ಬ್ಯಾಟಿಂಗ್‌ನಲ್ಲಿ 25 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಸೇರಿದಂತೆ ನಾಯಕ ರಾಹುಲ್ ಜೊತೆಗೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದ ಬ್ರಾರ್ ಬಳಿಕ ಬೌಲಿಂಗ್‌ನಲ್ಲಿ, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿ ವಿಲಿಯರ್ಸ್ ವಿಕೆಟ್‌ಗಳನ್ನು ಕಬಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯ ಪಾತ್ರ ವಹಿಸಿದರು. 

ADVERTISEMENT

ಆರ್‌ಸಿಬಿ ಪರ ನಾಯಕ ವಿರಾಟ್ ಕೊಹ್ಲಿ (35), ರಜತ್ ಪಾಟೀದಾರ್ (31), ಹರ್ಷಲ್ ಪಟೇಲ್, ಕೈಲ್ ಜೇಮಿಸನ್ (16*), ದೇವದತ್ತ ಪಡಿಕ್ಕಲ್ (7), ಗ್ಲೆನ್ ಮ್ಯಾಕ್ಸ್‌ವೆಲ್ (0), ಎಬಿ ಡಿ ವಿಲಿಯರ್ಸ್ (3), ಶಹಬಾಜ್ ಅಹಮ್ಮದ್ (8), ಡ್ಯಾನಿಯನ್ ಸ್ಯಾಮ್ಸ್ (3) ನಿರಾಸೆ ಮೂಡಿಸಿದರು. ಎಂಟನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟ ಕಟ್ಟಿದ ಹರ್ಷಲ್ ಹಾಗೂ ಜೆಮಿಸನ್, ಪಂಜಾಬ್ ಗೆಲುವನ್ನು ಅಲ್ಪ ವಿಳಂಬಗೊಳಿಸಿದರು.

ಕೊಹ್ಲಿ ಹಾಗೂ ಮ್ಯಾಕ್ಸ್‌ವೆಲ್ ಅವರನ್ನು ಸತತವಾದ ಎಸೆತಗಳಲ್ಲಿ ಕ್ಲೀನ್ ಬೌಲ್ಡ್ ಮಾಡಿದ ಬ್ರಾರ್, ಉಜ್ವಲ ಭವಿಷ್ಯವನ್ನು ಸಾರಿದರು. ಬಳಿಕ ಎಬಿ ಡಿ ಅವರಿಗೂ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಕೈಚಳಕ ಮೆರೆದರು. ಐಪಿಎಲ್‌ನಲ್ಲಿ ಬ್ರಾರ್ ಗಳಿಸಿದ ಮೊದಲ ಮೂರು ವಿಕೆಟ್ ಇದಾಗಿದೆ. 

ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಒಂದು ಮೇಡನ್ ಸೇರಿದಂತೆ ಕೇವಲ 19 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಇನ್ನುಳಿದಂತೆ ರವಿ ಬಿಷ್ಣೋಯಿ ಎರಡು ಮತ್ತು ರಿಲೇ ಮೆರೆಡಿತ್ ಹಾಗೂ ಕ್ರಿಸ್ ಜಾರ್ಡನ್ ತಲಾ ಒಂದು ವಿಕೆ್ಟ್ ಕಿತ್ತು ಮಿಂಚಿದರು.   

ಹರಪ್ರೀತ್ ಬ್ರಾರ್ ಮೋಡಿ

ರವಿ ಬಿಷ್ಣೋಯಿಗೆ ಎರಡು ವಿಕೆಟ್

ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯ

ಎಬಿ ಡಿ ಹೊರದಬ್ಬಿದ ಹರಪ್ರೀತ್

ಕೊಹ್ಲಿ, ಮ್ಯಾಕ್ಸ್‌ವೆಲ್ ಕ್ಲೀನ್ ಬೌಲ್ಡ್ ಮಾಡಿದ ಹರಪ್ರೀತ್ ಬ್ರಾರ್

ಡಬಲ್ ಆಘಾತ ನೀಡಿದ ಹರಪ್ರೀತ್ ಬ್ರಾರ್

ಮೊದಲು ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲೂ ಮಿಂಚಿದ ಹರಪ್ರೀತ್ ಬ್ರಾರ್‌, ಒಂದೇ ಓವರ್‌ನಲ್ಲಿ ಡಬಲ್ ಆಘಾತ ನೀಡುವ ಮೂಲಕ ತಿರುಗೇಟು ನೀಡಿದರು. ಸೆಟ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (35) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು (0) ಕ್ಲೀನ್ ಬೌಲ್ಡ್ ಮಾಡಿದರು. ಈ ವೇಳೆ ಆರ್‌ಸಿಬಿ 62 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 

ಪವರ್ ಪ್ಲೇಯಲ್ಲಿ ಪಂಜಾಬ್ ಮೇಲುಗೈ

Fair Play ಪಟ್ಟಿ ಇಂತಿದೆ

ಆರ್‌ಸಿಬಿಗೆ ಮೊದಲ ಆಘಾತ

ರಾಹುಲ್ ಬ್ಯಾಟಿಂಗ್ ವೈಭವ

ಪವರ್ ಪ್ಲೇಯಲ್ಲಿ ಆರ್‌ಸಿಬಿಗೆ ಹಿನ್ನಡೆ

ಸವಾಲಿನ ಮೊತ್ತ ಬೆನ್ನತ್ತಿದ್ದ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. ದೇವದತ್ತ ಪಡಿಕ್ಕಲ್ (7) ಬೇಗನೇ ನಿರ್ಗಮಿಸಿದರು. ನಾಯಕ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟೀದಾರ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರು. ಪರಿಣಾಮ ಪವರ್ ಪ್ಲೇಯಲ್ಲಿ ಒಂದು ವಿಕೆಟ್ ನಷ್ಟಕ್ಕೆ 36 ರನ್ ಅಷ್ಟೇ ಗಳಿಸಿತ್ತು. 

ನಿಕೋಲಸ್ ಪೂರನ್ 4ನೇ ಬಾರಿಗೆ ಶೂನ್ಯಕ್ಕೆ ಔಟ್

ಬ್ಯಾಟಿಂಗ್‌ನಲ್ಲಿ ಶೂನ್ಯ ಗಳಿಕೆಯಾದರೂ ಕೋವಿಡ್ ಹೋರಾಟದಲ್ಲಿ ಭಾರತಕ್ಕೆ ನೆರವಿನ ಹಸ್ತ ಚಾಚಿ ಹೃದಯ ಗೆದ್ದ ನಿಕೋಲಸ್ ಪೂರನ್

ಆರ್‌ಸಿಬಿ ಮೇಲೆ ಕನ್ನಡಿಗ ರಾಹುಲ್ ಪ್ರಹಾರ

ಆರ್‌ಸಿಬಿಗೆ 180 ರನ್ ಗೆಲುವಿನ ಗುರಿ ಒಡ್ಡಿದ ಪಂಜಾಬ್

ನಾಯಕ ಕೆ.ಎಲ್. ರಾಹುಲ್ ಅಮೋಘ ಅರ್ಧಶತಕ (91*) ಹಾಗೂ ಕ್ರಿಸ್ ಗೇಲ್ (46) ಸ್ಫೋಟಕ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಐದು ವಿಕೆಟ್ ನಷ್ಟಕ್ಕೆ 179 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. 

ರಾಹುಲ್ ಹಾಗೂ ಗೇಲ್ ಸ್ಫೋಟಕ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರೂ ಪಂದ್ಯದ ಮಧ್ಯಂತರ ಅವಧಿಯಲ್ಲಿ ನಿರಂತರ ಅಂತರಾಳದಲ್ಲಿ ವಿಕೆಟ್‌‌ಗಳನ್ನು ಕಬಳಿಸಿದ ಆರ್‌ಸಿಬಿ ಬೌಲರ್‌ಗಳು ಎದುರಾಳಿಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

ಪ್ರಭ್‌ಸಿಮ್ರಾನ್ ಸಿಂಗ್ (7) ರೂಪದಲ್ಲಿ ಪಂಜಾಬ್‌ಗೆ ಆರಂಭದಲ್ಲೇ ಆಘಾತ ಎದುರಾಗಿದ್ದರೂ ಕೌಂಟರ್ ಅಟ್ಯಾಕ್ ಇನ್ನಿಂಗ್ಸ್ ಕಟ್ಟಿದ ಗೇಲ್ ಪಂಜಾಬ್‌ಗೆ ನೆರವಾದರು. ಅಲ್ಲದೆ ಕೈಲ್ ಜೇಮಿಸನ್ ಒಂದೇ ಓವರ್‌ನಲ್ಲಿ ಐದು ಬೌಂಡರಿ ಸಿಡಿಸಿ ಅಬ್ಬರಿಸಿದರು. ಇವರಿಗೆ ನಾಯಕ ರಾಹುಲ್ ಉತ್ತಮ ಸಾಥ್ ನೀಡಿದರು. 

ಗೇಲ್ ಹಾಗೂ ರಾಹುಲ್ ಎರಡನೇ ವಿಕೆಟ್‌ಗೆ 80 ರನ್‌‌ಗಳ ಜೊತೆಯಾಟದಲ್ಲಿ ಭಾಗಿಯಾದರು. 24 ಎಸೆತಗಳನ್ನು ಎದುರಿಸಿದ ಗೇಲ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದರು. 

ಅತ್ತ ಆರಂಭದಲ್ಲಿ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ 35 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ನಡುವೆ ನಿಕೋಲಸ್ ಪೂರನ್ ಮಗದೊಮ್ಮೆ ಶೂನ್ಯಕ್ಕೆ ಬಲಿಯಾದರು. 

ಗೇಲ್ ಪತನದ ಬೆನ್ನಲ್ಲೇ ಪಂಜಾಬ್ ದಿಢೀರ್ ಪತನವನ್ನು ಕಂಡಿತ್ತು. ಒಂದು ಹಂತದಲ್ಲಿ ಒಂದು ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದ್ದ ಪಂಜಾಬ್ 118 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ದೀಪಕ್ ಹೂಡಾ (5), ಶಾರೂಕ್ ಖಾನ್ (0) ನಿರಾಸೆ ಮೂಡಿಸಿದರು. 

ಕೊನೆಯ ಹಂತದಲ್ಲಿ ಹರ್‌ಪ್ರೀತ್ ಜೊತೆಗೆ ಮುರಿಯದ ಆರನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟ ನೀಡಿದ ರಾಹುಲ್ ತಂಡವನ್ನು ಸವಾಲಿನ ಮೊತ್ತದತ್ತ ಮುನ್ನಡೆಸಿದರು. ಅಂತಿಮವಾಗಿ ಐದು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತ್ತು. 

57 ಎಸೆತಗಳನ್ನು ಎದುರಿಸಿದ ರಾಹುಲ್ ಏಳು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 91 ರನ್ ಗಳಿಸಿ ಅಜೇಯರಾಗುಳಿದರು. ಇವರಿಗೆ ತಕ್ಕ ಸಾಥ್ ನೀಡಿದ ಹರ್‌ಪ್ರೀತ್ ಕೇವಲ 17 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 25 ರನ್ ಗಳಿಸಿ ಔಟಾಗದೆ ಉಳಿದರು. 
ಇವರಿಬ್ಬರು ಪರ್ಪಲ್ ಕ್ಯಾಪ್ ಒಡೆಯ ಹರ್ಷಲ್ ಪಟೇಲ್ ಕೊನೆಯ ಓವರ್‌ನಲ್ಲಿ 22 ರನ್ ಸೊರೆಗೈದರು. ಅಲ್ಲದೆ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 53 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದರು. ಜೇಮಿಸನ್ ಎರಡು ಮತ್ತು ಡ್ಯಾನಿಯಲ್ ಸ್ಯಾಮ್ಸ್, ಯಜುವೇಂದ್ರ ಚಾಹಲ್ ಹಾಗೂ ಶಹಬಾಜ್ ಅಹಮ್ಮದ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು. 

ಗೇಲ್ ಸ್ಟ್ರೋಮ್ ಮಿಸ್ ಮಾಡದಿರಿ

ಆರ್‌ಸಿಬಿ ತಿರುಗೇಟು

ಜೆಮಿಸನ್ ನಿಖರ ದಾಳಿ

ಆರ್‌ಸಿಬಿ ವಿರುದ್ಧವೇ ಅಬ್ಬರಿಸಿದ ಗೇಲ್

ನಾಯಕನ ಆಟವಾಡಿದ ರಾಹುಲ್

ಗೇಲ್ ವಿಕೆಟ್ ಪತನ

ಗೇಲ್ ಔಟ್, ರಾಹುಲ್ ಫಿಫ್ಟಿ

ಈ ನಡುವೆ ಅತ್ಯುತ್ತಮವಾಗಿ ಆಡುತ್ತಿದ್ದ ಗೇಲ್ (43) ಅವರನ್ನು ಡ್ಯಾನಿಯಲ್ ಸ್ಯಾಮ್ಸ್ ಹೊರದಬ್ಬಿದರು. ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ರಾಹುಲ್ 35 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. 

10 ಓವರ್ ಅಂತ್ಯಕ್ಕೆ 90/1

ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಗೇಲ್‌ಗೆ ನಾಯಕ ರಾಹುಲ್ ಕೂಡಾ ಸಾಥ್ ನೀಡಿದರು. ಪರಿಣಾಮ 10 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. 

ಗೇಲ್-ರಾಹುಲ್ ಫಿಫ್ಟಿ ಜೊತೆಯಾಟ

ಬಾಸ್ ಆಡಿದ್ದೇ ಆಟ

ಗೇಲ್ ಬಿರುಸಿನ ಆಟ

ಇಲ್ಲಿಗೂ ಗೇಲ್ ಅಬ್ಬರ ನಿಲ್ಲಲಿಲ್ಲ. ನಂತರ ದಾಳಿಗಿಳಿದ ಯಜುವೇಂದ್ರ ಚಾಹಲ್ ಓವರ್‌ನಲ್ಲೂ ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ಅಲ್ಲದೆ ರಾಹುಲ್ ಜೊತೆಗೆ ಫಿಫ್ಟಿ ಜೊತೆಯಾಟದಲ್ಲಿ ಭಾಗಿಯಾದರು. 

ಮೊದಲ ವಿಕೆಟ್ ಪಡೆದ ಜೇಮಿಸನ್

ಪವರ್ ಪ್ಲೇನಲ್ಲಿ ಸಮಬಲದ ಹೋರಾಟ

4,4,4,4,0,4 - ಗೇಲ್ ಅಬ್ಬರ

ಕೈಲ್ ಜೇಮಿಸನ್ ಒಂದೇ ಓವರ್‌ನಲ್ಲಿ ಐದು ಬೌಂಡರಿ ಬಾರಿಸಿದ ಕ್ರಿಸ್ ಗೇಲ್ ಅಬ್ಬರಿಸಿದರು. ಇದರಲ್ಲಿ ಸತತ ನಾಲ್ಕು ಬೌಂಡರಿಗಳು ಸೇರಿದ್ದವು. ಇದರಿಂದಾಗಿ ಸ್ವಲ್ಪದರಲ್ಲೇ ಎಲ್ಲ ಆರು ಎಸೆತಗಳನ್ನು ಬೌಂಡರಿಗಟ್ಟುವ ಅವಕಾಶದಿಂದ ವಂಚಿತರಾದರು. 

ಗೇಲ್, ರಾಹುಲ್ ಆಸರೆ

ಪವರ್ ಪ್ಲೇ ಅಂತ್ಯಕ್ಕೆ ಪಂಜಾಬ್ ಒಂದು ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತ್ತು. ನಾಯಕ ಕೆ.ಎಲ್. ರಾಹುಲ್ ಹಾಗೂ ಕ್ರಿಸ್ ಗೇಲ್ ಕ್ರೀಸಿನಲ್ಲಿದ್ದರು. 

ನಿರಾಸೆ ಮೂಡಿಸಿದ ಪ್ರಭ್‌ಸಿಮ್ರಾನ್

ಮಯಂಕ್ ಅಗರವಾಲ್ ಸ್ಥಾನದಲ್ಲಿ ಕಾಣಿಸಿಕೊಂಡ ಪಂಜಾಬ್ ಓಪನರ್ ಪ್ರಭ್‌ಸಿಮ್ರಾನ್ ಸಿಂಗ್ (7) ಅವರನ್ನು ಹೊರದಬ್ಬಿದ ಕೈಲ್ ಜೇಮಿಸನ್ ಮೊದಲ ಆಘಾತ ನೀಡಿದರು. 

ರೋಚಕ ಕದನ ಆರಂಭ

ಟಾಸ್ ಝಲಕ್

ಕೊಹ್ಲಿ ಸಂದೇಶ

ಹದ್ದು ನೋಟ

ಟಾಸ್ ಗೆದ್ದ ಆರ್‌ಸಿಬಿ ಕ್ಯಾಪ್ಟನ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20  ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಯೂನಿವರ್ಸ್ ಬಾಸ್

ಪಂಜಾಬ್ ತಯಾರಿ

ಎಬಿ ಡಿ ವಿಲಿಯರ್ಸ್

ಮಿಸ್ಟರ್ 360 ಡಿಗ್ರಿ

ಇಂದು ಗೆಲುವು ಯಾರಿಗೆ?

ಕಿಂಗ್ ಕೊಹ್ಲಿ

ಕದನಕ್ಕೂ ಮೊದಲು ಭಾಯ್ ಭಾಯ್...

ಕೊಹ್ಲಿ vs ರಾಹುಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.