ADVERTISEMENT

IPL 2021 | RCB vs RR: ಮ್ಯಾಕ್ಸ್‌ವೆಲ್ 30 ಬಾಲ್ ಫಿಫ್ಟಿ; ಆರ್‌ಸಿಬಿಗೆ 'ರಾಯಲ್' ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ದುಬೈಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಬೌಲರ್‌ಗಳ ನಿಖರ ದಾಳಿಯ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ (30 ಎಸೆತಗಳಲ್ಲಿ ಅಜೇಯ ಅರ್ಧಶತಕ) ಹಾಗೂ ಶ್ರೀಕರ್ ಭರತ್ (44) ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 18:07 IST
Last Updated 29 ಸೆಪ್ಟೆಂಬರ್ 2021, 18:07 IST

14 ಅಂಕ ಗಳಿಸಿದ ಆರ್‌ಸಿಬಿ ಪ್ಲೇ-ಆಫ್‌ನತ್ತ ದಿಟ್ಟ ಹೆಜ್ಜೆ...

ಆರ್‌ಸಿಬಿಗೆ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು

ಬೌಲರ್‌ಗಳ ಸಾಂಘಿಕ ದಾಳಿಯ ಬಳಿಕ ಬ್ಯಾಟ್ಸ್‌ಮನ್‌ಗಳ ಸಮಯೋಚಿತ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಈ ಮೂಲಕ ಪ್ಲೇ-ಆಫ್ ಪ್ರವೇಶದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಆರ್‌ಸಿಬಿ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿದ ರಾಜಸ್ಥಾನ್, ಒಂಬತ್ತು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

ADVERTISEMENT

ಬಳಿಕ ಗುರಿ ಬೆನ್ನತ್ತಿದ ಆರ್‌ಸಿಬಿ 17.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಗ್ಲೆನ್ ಮ್ಯಾಕ್ಸ್‌ವೆಲ್ 30 ಎಸೆತಗಳಲ್ಲಿ ಅಜೇಯ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಶ್ರೀಕರ್ ಭರತ್ (44) ಸಹ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 

ಬೌಲಿಂಗ್‌ನಲ್ಲಿ ಹರ್ಷಲ್ ಪಟೇಲ್ ಮೂರು ಮತ್ತು ಯಜುವೇಂದ್ರ ಚಾಹಲ್ ಹಾಗೂ ಶಹಬಾಜ್ ಅಹ್ಮದ್ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು. 

44 ರನ್ ಗಳಿಸಿ ಔಟ್ ಆದ ಭರತ್

ಅದ್ಭುತ ಸೇವ್

ಭರತ್-ಮ್ಯಾಕ್ಸ್‌ವೆಲ್ ಫಿಫ್ಟಿ ಜೊತೆಯಾಟ

ವಿರಾಟ್ ಕೊಹ್ಲಿ ರನೌಟ್

ಕೊಹ್ಲಿ ರನೌಟ್, ಆರ್‌ಸಿಬಿಗೆ ಹಿನ್ನೆಡೆ

ಹರ್ಷಲ್ ಪಟೇಲ್‌ಗೆ ಒಂದೇ ಓವರ್‌ನಲ್ಲಿ 3 ವಿಕೆಟ್

ಕೊಹ್ಲಿ-ಪಡಿಕ್ಕಲ್ ಉತ್ತಮ ಆರಂಭ

ಸವಾಲಿನ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ತ ಪಡಿಕ್ಕಲ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 48 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಪಡಿಕ್ಕಲ್ (22) ವಿಕೆಟ್ ನಷ್ಟವಾಯಿತು. 

ಅಂತಿಮ ಓವರ್‌ನಲ್ಲಿ ಹರ್ಷಲ್‌ಗೆ ಮೂರು ವಿಕೆಟ್

ಬೆಂಗಳೂರು ಬೌಲರ್‌ಗಳ ಮಿಂಚು

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್‌ಗಳ ನಿಖರ ದಾಳಿಗೆ ಸಿಲುಕಿರುವ ರಾಜಸ್ಥಾನ್ ರಾಯಲ್ಸ್, ಎವಿನ್ ಲೂಯಿಸ್ (58) ಬಿರುಸಿನ ಅರ್ಧಶತಕದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಲಷ್ಟೇ ಸಮರ್ಥವಾಯಿತು. 

ಈ ಮೂಲಕ ಬೆಂಗಳೂರು ಗೆಲುವಿಗೆ ರನ್‌ಗಳ 150 ರನ್‌ಗಳ ಗುರಿ ಒಡ್ಡಿದೆ. ಆರ್‌ಸಿಬಿ ಪರ ಹರ್ಷಲ್ ಪಟೇಲ್ ಮೂರು ಮತ್ತು ಯಜುವೇಂದ್ರ ಚಾಹಲ್ ಹಾಗೂ ಶಹಬಾಜ್ ಅಹ್ಮದ್ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು. 

ಚಾಹಲ್ ಕೈಚಳಕ

ಆರ್‌ಸಿಬಿ ಸ್ಪಿನ್ನರ್‌ಗಳ ಮೋಡಿ

ಚಾಹಲ್ ಬಲೆಗೆ ಬಿದ್ದ ಲೊಮ್ರೊರ್

ಪದಾರ್ಪಣಾ ಪಂದ್ಯದಲ್ಲಿ ಚೊಚ್ಚಲ ಐಪಿಎಲ್ ವಿಕೆಟ್ ಪಡೆದ ಜಾರ್ಜ್ ಗಾರ್ಟನ್

ರಾಜಸ್ಥಾನ್ ಎರಡನೇ ವಿಕೆಟ್ ಪತನ

ಅರ್ಧಶತಕದ ಬೆನ್ನಲ್ಲೇ ಲೂಯಿಸ್ ವಿಕೆಟ್ ಪತನವಾಯಿತು. 37 ಎಸೆತಗಳನ್ನು ಎದುರಿಸಿದ ಲೂಯಿಸ್ ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದರು. 

ಎವಿನ್ ಲೂಯಿಸ್ 31 ಎಸೆತಗಳಲ್ಲಿ ಫಿಫ್ಟಿ ಸಾಧನೆ

ರಾಜಸ್ಥಾನ್ ಮೊದಲ ವಿಕೆಟ್ ಪತನ

ಎವಿನ್ ಲೂಯಿಸ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 77 ರನ್‌ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ 31 ರನ್ ಗಳಿಸಿದ ಜೈಸ್ವಾಲ್ ಅವರನ್ನು ಡ್ಯಾನ್ ಕ್ರಿಸ್ಟಿಯನ್ ಔಟ್ ಔಟ್ ಮಾಡಿದರು. 

ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ 56/0

ಎವಿನ್ ಲೂಯಿಸ್ (41*) ಹಾಗೂ ಯಶಸ್ವಿ ಜೈಸ್ವಾಲ್ (15*) ಕ್ರೀಸಿನಲ್ಲಿದ್ದಾರೆ. 

ರಾಜಸ್ಥಾನ್ ಆರಂಭಿಕರ ಅಬ್ಬರ

ಲೂಯಿಸ್-ಜೈಸ್ವಾಲ್ ಬಿರುಸಿನ ಆಟ

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಎವಿನ್ ಲೂಯಿಸ್ ಹಾಗೂ ಯಶಸ್ವಿ ಜೈಸ್ವಾಲ್ ಬಿರುಸಿನ ಆರಂಭವೊದಗಿಸಿದರು. ಪರಿಣಾಮ 4.5 ಓವರ್‌ಗಳಲ್ಲೇ 50ರ ಗಡಿ ದಾಟಿತು. 

ರೋಚಕ ಕದನ ಆರಂಭ

ಆರ್‌ಸಿಬಿ ಪರ ಜಾರ್ಜ್ ಗಾರ್ಟನ್ ಪದಾರ್ಪಣೆ

ಟಾಸ್ ಝಲಕ್

ರಾಜಸ್ಥಾನ್‌ಗೆ ಮಹತ್ವದ ಪಂದ್ಯ

ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ

ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಕೊಹ್ಲಿ vs ಸಂಜು

ಮೈದಾನ ಸಜ್ಜು

ಸವಾಲಿಗೆ ಸಜ್ಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.