ADVERTISEMENT

IPL 2021 | RCB vs RR: ಪಡಿಕ್ಕಲ್ ಚೊಚ್ಚಲ ಶತಕದ ಪಂಚ್; ರಾಜಸ್ಥಾನ್ ಪಲ್ಟಿ

ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಚೊಚ್ಚಲ ಶತಕ (101*) ಹಾಗೂ ನಾಯಕ ವಿರಾಟ್ ಕೊಹ್ಲಿ (72*) ಅಮೋಘ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 18:32 IST
Last Updated 22 ಏಪ್ರಿಲ್ 2021, 18:32 IST

ಕೋವಿಡ್‌ನಿಂದ ಗೆದ್ದು ಬಂದು ಐಪಿಎಲ್‌ನಲ್ಲಿ ಶತಕ ಚಚ್ಚಿದ ಪಡಿಕ್ಕಲ್

ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದ ಪಡಿಕ್ಕಲ್-ಕೊಹ್ಲಿ

ಪಡಿಕ್ಕಲ್, ಕೊಹ್ಲಿ ದಾಖಲೆ ವೀರರು

ಆರ್‌ಸಿಬಿ ಸತತ 4ನೇ ಗೆಲುವು

ಆರ್‌ಸಿಬಿ ನೋಲಾಸ್ ಗೆಲುವು

ಐಪಿಎಲ್‌ನಲ್ಲಿ ಕಿಂಗ್ ಕೊಹ್ಲಿ 6,000 ರನ್ ಮೈಲಿಗಲ್ಲು

ಐಪಿಎಲ್‌ನಲ್ಲಿ ಪಡಿಕ್ಕಲ್ ಚೊಚ್ಚಲ ಶತಕ

ಆರ್‌ಸಿಬಿಗೆ 10 ವಿಕೆಟ್ ಅಂತರದ ಭರ್ಜರಿ ಗೆಲುವು

ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಚೊಚ್ಚಲ ಶತಕ (101*) ಹಾಗೂ ನಾಯಕ ವಿರಾಟ್ ಕೊಹ್ಲಿ (72*) ಅಮೋಘ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಇದರೊಂದಿಗೆ ಸತತ ನಾಲ್ಕನೇ ಗೆಲುವು ಬಾರಿಸಿರುವ ಆರ್‌ಸಿಬಿ, ಒಟ್ಟು ಎಂಟು ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಮಗದೊಮ್ಮೆ ಅಗ್ರಸ್ಥಾನಕ್ಕೇರಿದೆ. ಅಲ್ಲದೆ 200ನೇ ಪಂದ್ಯದಲ್ಲಿ ಸ್ಮರಣೀಯ ಗೆಲುವು ದಾಖಲಿಸಿದೆ. 

178 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಬೆಂಗಳೂರು ತಂಡಕ್ಕೆ ಪಡಿಕ್ಕಲ್ ಹಾಗೂ ಕೊಹ್ಲಿ ಬಿರುಸಿನ ಆರಂಭವೊದರಿಸಿದರು. ಆರಂಭದಲ್ಲಿ ಕೊಹ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ಪಡಿಕ್ಕಲ್ ಎದುರಾಳಿ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದರು. ಅಲ್ಲದೆ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. 

ADVERTISEMENT

ಅರ್ಧಶತಕದ ಬಳಿಕ ಪಡಿಕ್ಕಲ್, ವಾಂಖೆಡೆ ಮೈದಾನದಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಗೈದರು. ಪರಿಣಾಮ 10 ಓವರ್‌ಗಳಲ್ಲಿ 107 ರನ್‌ಗಳು ಹರಿದು ಬಂದಿದ್ದವು. ಅತ್ತ ನಾಯಕನ ಆಟವಾಡಿದ ಕೊಹ್ಲಿ, ಸಹ ಗೇರ್ ಬದಲಿಸಿದರು. ಅಲ್ಲದೆ 34 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಸಂಭ್ರಮಿಸಿದರು. 

ಅಮೋಘ ಆಟವಾಡಿದ ಪಡಿಕ್ಕಲ್ ಕೇವಲ 51 ಎಸೆತಗಳಲ್ಲಿ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದರು. ಅಂತಿಮವಾಗಿ ಆರ್‌ಸಿಬಿ 16.3 ಓವರ್‌ಗಳಲ್ಲಿ ನೋಲಾಸ್ ಗೆಲುವು ಬಾರಿಸಿತ್ತು. 

52 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 11 ಬೌಂಡರಿ ಹಾಗೂ ಆರು ಭರ್ಜರಿ ಸಿಕ್ಸರ್ ನೆರವಿನಿಂದ 101 ರನ್ ಗಳಿಸಿ ಅಜೇಯರಾಗುಳಿದರು. ಅತ್ತ ನಾಯಕ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 72ರನ್ ಗಳಿಸಿ ಔಟಾಗದೆ ಉಳಿದರು. 

ಗೆಲುವಿನ ಸನಿಹದಲ್ಲಿ ಆರ್‌ಸಿಬಿ

ನಾಯಕನ ಆಟವಾಡಿದ ಕೊಹ್ಲಿ

ಕ್ರೀಡಾಸ್ಫೂರ್ತಿ ಮೆರೆದ ಜೋಸ್ ಬಟ್ಲರ್

ಶತಕದ ಜೊತೆಯಾಟ

ಪಡಿಕ್ಕಲ್-ಕೊಹ್ಲಿ ಶತಕದ ಜೊತೆಯಾಟ

9.4 ಓವರ್‌ಗಳಲ್ಲೇ ಆರ್‌ಸಿಬಿ ಸ್ಕೋರ್ 100ರ ಗಡಿ ದಾಟಿತು. ಅಲ್ಲದೆ 10 ಓವರ್‌ಗಳ ಅಂತ್ಯಕ್ಕೆ 107 ರನ್ ತಲುಪಿತ್ತು. 

ರಾಜಸ್ಥಾನ್ ಇನ್ನಿಂಗ್ಸ್ ವರದಿ

ಪಡಿಕ್ಕಲ್ ಶೋ

ಪವರ್ ಪ್ಲೇನಲ್ಲಿ ಆರ್‌ಸಿಬಿ 59/0

ಸವಾಲಿನ ಮೊತ್ತ ಬೆನ್ನತ್ತಿದ ಆರ್‌ಸಿಬಿ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಬಿರುಸಿನ ಆರಂಭವೊದಗಿಸಿದರು. ನಾಯಕ ಕೊಹ್ಲಿಗಿಂತಲೂ ಬಿರುಸಾಗಿ ಬ್ಯಾಟ್ ಬೀಸಿದ ಪಡಿಕ್ಕಲ್ ಎದುರಾಳಿ ಬೌಲರ್‌ಗಳನ್ನು ದಂಡಿಸಿದರು. ಪರಿಣಾಮ ಪವರ್ ಪ್ಲೇನಲ್ಲಿ 59 ರನ್‌ಗಳು ಹರಿದು ಬಂದಿದ್ದವು. 

ಕೊಹ್ಲಿ-ಪಡಿಕ್ಕಲ್ ಫಿಫ್ಟಿ ಜೊತೆಯಾಟ

ಸಿರಾಜ್ ಪರಿಣಾಮಕಾರಿ ಬೌಲಿಂಗ್

ಸ್ಪರ್ಧಾತ್ಮಕ ಮೊತ್ತ ಪೇರಿಸಿದ ರಾಜಸ್ಥಾನ್

ರಾಜಸ್ಥಾನ್ 177/9

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ  ಟಾಸ್ ಗೆದ್ದಿರುವ  ರಾಜಸ್ಥಾನ್ ರಾಯಲ್ಸ್, ಶಿವಂ ದುಬೆ (46) ಹಾಗೂ ರಾಹುಲ್ ತೆವಾಟಿಯಾ (40) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 177 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. 

ನಾಯಕ ಸಂಜು ಸ್ಯಾಮ್ಸನ್ (21), ರಿಯಾನ್ ಪರಾಗ್ (25) ಹಾಗೂ ಕ್ರಿಸ್ ಮೊರಿಸ್ (10) ಸಹ ನೆರವಾದರು. ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ತಲಾ ಮೂರು ವಿಕೆಟ್‌ಗಳನ್ನು ಕಿತ್ತು ಮಿಂಚಿದರು. 

ಕೇನ್ ಸಂಭ್ರಮ

ಅರ್ಧಶತಕ ವಂಚಿತ ದುಬೆ

ಅರ್ಧಶತಕದ ಅಂಚಿನಲ್ಲಿ ಶಿವಂ ದುಬೆ ವಿಕೆಟ್ ಪತನವಾಯಿತು. ಇದರೊಂದಿಗೆ 133 ರನ್ನಿಗೆ ರಾಜಸ್ಥಾನ್ ಆರನೇ ವಿಕೆಟ್ ಕಳೆದುಕೊಂಡಿತು. 32 ಎಸೆತಗಳನ್ನು ಎದುರಿಸಿದ ದುಬೆ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದರು. 

109ಕ್ಕೆ ರಾಜಸ್ಥಾನ್ 5ನೇ ವಿಕೆಟ್ ಪತನ

ಆಕ್ರಮಣಕಾರಿಯಾಗಿ ಆಡುತ್ತಿದ್ದ ರಿಯಾನ್ ಪರಾಗ್ ಅವರನ್ನು ಹರ್ಷಲ್ ಪಟೇಲ್ ಹೊರದಬ್ಬಿದರು. 16 ಎಸೆತಗಳನ್ನು ಎದುರಿಸಿದ ಪರಾಗ್ ನಾಲ್ಕು ಬೌಂಡರಿಗಳ ನೆರವಿನಿಂದ 25 ರನ್ ಗಳಿಸಿದರು. ಸ್ಕೂಪ್ ಮಾಡುವ ಪ್ರಯತ್ನದಲ್ಲಿ ಚಾಹಲ್ ಕೈಗೆ ಕ್ಯಾಚಿತ್ತು ಮರಳಿದರು. ಇದರೊಂದಿಗೆ ಶಿವಂ ದುಬೆ ಜೊತೆಗಿನ 66 ರನ್‌ಗಳ ಜೊತೆಯಾಟವು ಮುರಿದು ಬಿತ್ತು. 

ರಾಜಸ್ಥಾನ್ ಫೈಟ್ ಬ್ಯಾಕ್

ದುಬೆ-ಪರಾಗ್ ಜೊತೆಯಾಟ

ಈ ಹಂತದಲ್ಲಿ ಜೊತೆಗೂಡಿದ ಶಿವಂ ದುಬೆ ಹಾಗೂ ರಿಯಾನ್ ಪರಾಗ್ ಸಮಯೋಚಿತ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ತಿರುಗೇಟು ನೀಡಿದರು. 

ದುಬೆ ಹೋರಾಟ

ರಾಜಸ್ಥಾನ್‌ಗೆ ಶಿವಂ ದುಬೆ ಆಸರೆ

10 ಓವರ್‌ಗಳ ಅಂತ್ಯಕ್ಕೆ ರಾಜಸ್ಥಾನ್ ನಾಲ್ಕು ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಈ ನಡುವೆ ಯಜುವೇಂದ್ರ ಚಾಹಲ್ ದಾಳಿಯಲ್ಲಿ ಎರಡು ಸಿಕ್ಸರ್ ಬಾರಿಸಿದ ಶಿವಂ ದುಬೆ ಗಮನ ಸೆಳೆದರು. 

ಸಂಜುಗೆ ಗೇಟ್ ಪಾಸ್

ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ (18) ಅವರನ್ನು ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಹೊರದಬ್ಬಿದರು. ಇದರೊಂದಿಗೆ 43 ರನ್ನಿಗೆ ರಾಜಸ್ಥಾನ್ ನಾಲ್ಕನೇ ವಿಕೆಟ್ ಪತನವಾಯಿತು. 

ಆರ್‌ಸಿಬಿ ಬೌಲರ್‌ಗಳ ಮೇಲುಗೈ

ಪವರ್ ಪ್ಲೇನಲ್ಲಿ ಮೂರು ವಿಕೆಟ್ ಕಳೆದುಕೊಂಡ ರಾಜಸ್ಥಾನ್

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ನಾಯಕ ವಿರಾಟ್ ಕೊಹ್ಲಿ ನಿರ್ಧಾರ ಸರಿಯೆಂದು ಸಾಬೀತು ಮಾಡಿರುವ ಆರ್‌ಸಿಬಿ ಬೌಲರ್‌ಗಳು ಎದುರಾಳಿಗಳಿಗೆ ಆಘಾತ ನೀಡಿದರು. ಮೊಹಮ್ಮದ್ ಸಿರಾಜ್, ಇನ್ ಫಾರ್ಮ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ (8) ಅವರನ್ನು ಹೊರದಬ್ಬಿದರು. ಅತ್ತ ಮನನ್ ವೋಹ್ರಾ (7) ವಿಕೆಟ್ ಕೈಲ್ ಜೇಮಿಸನ್ ಪಾಲಾಯಿತು. 

ಡೇವಿಡ್ ಮಿಲ್ಲರ್ (0) ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದ ಸಿರಾಜ್ ಮಗದೊಂದು ಆಘಾತ ನೀಡಿದರು. ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ ಮೂರು ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿ ಸಂಕಷ್ಟದಲ್ಲಿತ್ತು.

ಸಿರಾಜ್ ಮಾರಕ ದಾಳಿ

ಡಬಲ್ ಆಘಾತ ನೀಡಿದ ಸಿರಾಜ್

ಡೇವಿಡ್ ಮಿಲ್ಲರ್ (0) ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದ ಮೊಹಮ್ಮದ್ ಸಿರಾಜ್ ಮಗದೊಂದು ಆಘಾತ ನೀಡಿದರು. 

ವಿಕೆಟ್ ಪಡೆದ ಸಂಭ್ರಮದಲ್ಲಿ ಮೊಹಮ್ಮದ್ ಸಿರಾಜ್

ರಾಜಸ್ಥಾನ್ 15ಕ್ಕೆ ಎರಡನೇ ವಿಕೆಟ್ ಪತನ

7 ರನ್ ಗಳಿಸಿದ ಮನನ್ ವೋಹ್ರಾ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಇವರ ವಿಕೆಟ್ ಕೈಲ್ ಜೇಮಿಸನ್ ಪಾಲಾಯಿತು. 

8 ರನ್ ಗಳಿಸಿ ಬಟ್ಲರ್ ಔಟ್

ರಾಜಸ್ಥಾನ್ ರಾಯಲ್ಸ್‌ಗೆ ಮೊಹಮ್ಮದ್ ಸಿರಾಜ್ ಆರಂಭದಲ್ಲಿ ಆಘಾತ ನೀಡಿದರು. 8 ರನ್ ಗಳಿಸಿದ ಜೋಸ್ ಬಟ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. 

ಟಾಸ್ ವೇಳೆ ಸಂಭವಿಸಿದ ಘಟನೆಯಿಂದ ತಲೆಗೆ ಕೈಯಿಟ್ಟ ವಿರಾಟ್ ಕೊಹ್ಲಿ

ಕದನ ಆರಂಭ

ವಿರಾಟ್‌ಗೆ ಟಾಸ್ ಗೆದ್ದ ಪರಿಜ್ಞಾನವೇ ಇರಲಿಲ್ಲ

ರಾಜಸ್ಥಾನ್ ತಂಡದಲ್ಲಿ ಉನದ್ಕಟ್ ಸ್ಥಾನಕ್ಕೆ ಶ್ರೇಯಸ್ ಗೋಪಾಲ್ ಇನ್

ಆರ್‌ಸಿಬಿ ಆಡುವ ಬಳಗ ಇಂತಿದೆ

ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ

ರಜತ್ ಪಾಟೀದಾರ್ ಸ್ಥಾನಕ್ಕೆ ಕೇನ್ ರಿಚರ್ಡ್ಸನ್ ಆಯ್ಕೆ

ಟಾಸ್ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಮುಂದಿನ ಬೇಟೆ ರಾಜಸ್ಥಾನ್

ವಾಂಖೆಡೆ ಕ್ರೀಡಾಂಗಣ ಸಜ್ಜು

ರೋಚಕ ಕದನಕ್ಕೂ ಮುನ್ನ...

ಇಂದಿರಾನಗರದ ಗೂಂಡಾ ಮುಂಬೈಗೆ

ಜೋಸ್ ಬಟ್ಲರ್

ರಾಜಸ್ಥಾನ್ ರೆಡಿ

ಆರ್‌ಸಿಬಿ 200 ಪಂದ್ಯಗಳ ಮೈಲಿಗಲ್ಲು; ಗೆದ್ದಿದ್ದೆಷ್ಟು ಸೋತಿದ್ದೆಷ್ಟು?

ಐಪಿಎಲ್‌ನಲ್ಲಿ 200ನೇ ಪಂದ್ಯ ಆಡಲಿರುವ ಆರ್‌ಸಿಬಿ

ಆರ್‌ಸಿಬಿ vs ಆರ್‌ಆರ್

ವಾಂಖೆಡೆಯಲ್ಲೂ ಆರ್‌ಸಿಬಿ ಜಯದ ಕನಸು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.