ADVERTISEMENT

IPL 2021 | SRH vs MI: ಗೆದ್ದು ಸೋತ ಮುಂಬೈ ಪ್ಲೇ-ಆಫ್ ರೇಸ್‌ನಿಂದ ಔಟ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 42 ರನ್ ಅಂತರದ ಗೆಲುವು ದಾಖಲಿಸಿದೆ. ಆದರೂ ಪ್ಲೇ-ಆಫ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಕೂಟದಿಂದಲೇ ನಿರ್ಗಮಿಸಿದೆ.

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 18:54 IST
Last Updated 8 ಅಕ್ಟೋಬರ್ 2021, 18:54 IST

ಹಾಲಿ ಚಾಂಪಿಯನ್ ಮುಂಬೈ ನಿರ್ಗಮನ

ಪ್ಲೇ-ಆಫ್ ವೇಳಾಪಟ್ಟಿ ಇಂತಿದೆ

ಮುಂಬೈಗೆ ಸಮಾಧಾನಕರ ಜಯ

ಹಾಲಿ ಚಾಂಪಿಯನ್ ಮುಂಬೈ ಪ್ಲೇ-ಆಫ್ ಕನಸು ಭಗ್ನ

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ42 ರನ್ ಅಂತರದ ಗೆಲುವು ದಾಖಲಿಸಿದರೂ ಮುಂಬೈ ಇಂಡಿಯನ್ಸ್ ತಂಡವು ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಗಿದೆ. 

ADVERTISEMENT

ಇದರೊಂದಿಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ-ಆಫ್ ಕನಸು ಭಗ್ನಗೊಂಡಿದೆ. ಅತ್ತ ಕೋಲ್ಕತ್ತ ನೈಟ್ ರೈಡರ್ಸ್ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದೆ. 

ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲು ಈ ಪಂದ್ಯದಲ್ಲಿ ಮುಂಬೈ 170ಕ್ಕೂ ಹೆಚ್ಚು ರನ್‌ಗಳ ಗೆಲುವು ದಾಖಲಿಸಬೇಕಿತ್ತು. ಇದಕ್ಕೆ ತಕ್ಕಂತೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ  ಮುಂಬೈ, ಇಶಾನ್ ಕಿಶನ್ (84) ಹಾಗೂ ಸೂರ್ಯಕುಮಾರ್ ಯಾದವ್ (82) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಒಂಬತ್ತು ವಿಕೆಟ್ ನಷ್ಟಕ್ಕೆ 235 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.  ಇಶಾನ್ 32 ಎಸೆತಗಳಲ್ಲಿ 84 ರನ್ ಹಾಗೂ ಸೂರ್ಯಕುಮಾರ್ 40 ಎಸೆತಗಳಲ್ಲಿ 82 ರನ್ ಗಳಿಸಿದರು. 

ಬಳಿಕ ಗುರಿ ಬೆನ್ನತ್ತಿದ ಹೈದರಾಬಾದ್ ಎಂಟು ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಸಮರ್ಥವಾಯಿತು.  

ಮುಂಬೈ ಮೇಲುಗೈ

33 ರನ್ ಗಳಿಸಿ ಅಭಿಷೇಕ್ ಔಟ್

ಪವರ್ ಪ್ಲೇ ಅಂತ್ಯಕ್ಕೆ ಹೈದರಾಬಾದ್ 70/1

ಹೈದರಾಬಾದ್ ದಿಟ್ಟ ಉತ್ತರ

ಬೃಹತ್ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಆರಂಭಿಕರಾದ ಜೇಸನ್ ರಾಯ್ ಹಾಗೂ ಅಭಿಷೇಕ್ ಶರ್ಮಾ ಬಿರುಸಿನ ಆರಂಭವೊದಗಿಸಿದರು. ಪರಿಣಾಮ 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 47 ರನ್ ಗಳಿಸಿತ್ತು. 

ಹೈದರಾಬಾದ್ ಗೆಲುವಿಗೆ 236 ರನ್ ಗುರಿ

ಇಶಾನ್ ಕಿಶನ್ (84) ಹಾಗೂ ಸೂರ್ಯಕುಮಾರ್ ಯಾದವ್ (82) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 235 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. 

ಇಶಾನ್ 32 ಎಸೆತಗಳಲ್ಲಿ 84 ರನ್ ಹಾಗೂ ಸೂರ್ಯಕುಮಾರ್ 40 ಎಸೆತಗಳಲ್ಲಿ 82 ರನ್ ಗಳಿಸಿದರು. 

ಸೂರ್ಯಕುಮಾರ್ ಯಾದವ್ 24 ಎಸೆತಗಳಲ್ಲಿ ಫಿಫ್ಟಿ ಸಾಧನೆ

ಸೂರ್ಯ ಬಿರುಸಿನ ಆಟ

ಕೊನೆಯ ಹಂತದಲ್ಲಿ 24 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಸೂರ್ಯಕುಮಾರ್ ಯಾದವ್ ಮುಂಬೈಗೆ ಬೃಹತ್ ಮೊತ್ತ ಪೇರಿಸಲು ನೆರವಾದರು. 

ನಿರಾಸೆ ಮೂಡಿಸಿದ ಪೊಲಾರ್ಡ್, ನೀಶಮ್

ಇಶಾನ್ ಕಿಶನ್ ಸ್ಫೋಟಕ ಆಟ

32 ಎಸೆತಗಳಲ್ಲಿ 84 ರನ್ ಗಳಿಸಿ ಇಶಾನ್ ಕಿಶನ್ ಔಟ್

7.1 ಓವರ್‌ಗಳಲ್ಲೇ ಮುಂಬೈ ಸ್ಕೋರ್ 100ರ ಗಡಿ ದಾಟಿದೆ.

ಪವರ್ ಪ್ಲೇ ಅಂತ್ಯಕ್ಕೆ ಮುಂಬೈ 83/1

5 ಓವರ್‌ಗಳಲ್ಲಿ ಮುಂಬೈ ವಿಕೆಟ್ ನಷ್ಟವಿಲ್ಲದೆ 78 ರನ್ ಗಳಿಸಿದೆ.

16 ಎಸೆತಗಳಲ್ಲಿ ಇಶಾನ್ ಅರ್ಧಶತಕ

ಮುಂಬೈ ಆರಂಭಿಕರ ಅಬ್ಬರ

ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಬಿರುಸಿನ ಆರಂಭವೊದಗಿಸಿದರು. ಪರಿಣಾಮ 3.4 ಓವರ್‌ಗಳಲ್ಲೇ ತಂಡದ ಮೊತ್ತ 50ರ ಗಡಿ ದಾಟಿತು. 

ಕಿಶನ್ ಸ್ಫೋಟಕ ಆಟ

ಎರಡು ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದೆ. 

ಟಾಸ್ ಝಲಕ್

ಟಾಸ್ ಝಲಕ್

ಮುಂಬೈ ಬ್ಯಾಟಿಂಗ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ  ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ  ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. 

ಮುಂಬೈ ಪ್ಲೇ-ಆಫ್ ಹಾದಿ ಕಠಿಣ

ವಿಲಿಯಮ್ಸನ್ vs ರೋಹಿತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.