ADVERTISEMENT

IPL 2022: ಚೆನ್ನೈ ಪರ 200ನೇ ಪಂದ್ಯ; ಕೊಹ್ಲಿ ಸಾಲಿಗೆ ಧೋನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮೇ 2022, 14:39 IST
Last Updated 4 ಮೇ 2022, 14:39 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 200 ಪಂದ್ಯಗಳನ್ನಾಡಿದ ಗೌರವಕ್ಕೆ ಮಹೇಂದ್ರ ಸಿಂಗ್ ಧೋನಿ ಸಿಂಗ್ ಭಾಜನರಾಗಿದ್ದಾರೆ.

ಐಪಿಎಲ್ 2022 ಟೂರ್ನಿಯಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಧೋನಿ ಈ ಸಾಧನೆ ಮಾಡಿದ್ದಾರೆ.

ಈ ಮೂಲಕ ವಿರಾಟ್ ಕೊಹ್ಲಿ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಹಾಗೆಯೇ ಕೊಹ್ಲಿ ಬಳಿಕ ಫ್ರಾಂಚೈಸ್‌ವೊಂದರ ಪರ 200 ಅಥವಾ ಅದಕ್ಕಿಂತಲೂ ಹೆಚ್ಚು ಪಂದ್ಯವನ್ನು ಆಡಿದ ಎರಡನೇ ಆಟಗಾರ ಎನಿಸಿದ್ದಾರೆ.

2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪದಾರ್ಪಣೆ ಮಾಡಿರುವ ವಿರಾಟ್ ಕೊಹ್ಲಿ, ಈವರೆಗೆ 218 ಪಂದ್ಯಗಳನ್ನು ಆಡಿದ್ದಾರೆ.

ಅತ್ತ ಧೋನಿ ಐಪಿಎಲ್‌ನಲ್ಲಿ ಒಟ್ಟು 230 ಪಂದ್ಯಗಳನ್ನು ಆಡಿದ್ದಾರೆ. ಇದು ಕೂಡ ದಾಖಲೆಯಾಗಿದೆ. ಈ ಪಟ್ಟಿಯಲ್ಲಿ ವಿರಾಟ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

2016 ಹಾಗೂ 2017ರಲ್ಲಿ ಚೆನ್ನೈ ನಿಷೇಧಕ್ಕೆ ಒಳಗಾಗಿತ್ತು. ಈ ಅವಧಿಯಲ್ಲಿ ಧೋನಿ, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಪರ 30 ಪಂದ್ಯಗಳನ್ನು ಆಡಿದ್ದರು.

ಇನ್ನುಳಿದಂತೆ ಚೆನ್ನೈ ಪರ ಸುರೇಶ್ ರೈನಾ 176 ಹಾಗೂ ರವೀಂದ್ರ ಜಡೇಜ 142 ಪಂದ್ಯಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.