ADVERTISEMENT

ರಾಣಾಗೆ ದಂಡ; ಬೂಮ್ರಾಗೆ ವಾಗ್ದಂಡನೆ

ಪಿಟಿಐ
Published 7 ಏಪ್ರಿಲ್ 2022, 16:39 IST
Last Updated 7 ಏಪ್ರಿಲ್ 2022, 16:39 IST
ನಿತೀಶ್ ರಾಣಾ 
ನಿತೀಶ್ ರಾಣಾ    

ಮುಂಬೈ: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬ್ಯಾಟರ್ ನಿತೀಶ್ ರಾಣಾ ಅವರಿಗೆ ಪಂದ್ಯದ ಸಂಭಾವನೆಯ ಶೇ 10ರಷ್ಟು ದಂಡ ಮತ್ತು ಮುಂಬೈ ಇಂಡಿಯನ್ಸ್ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರಿಗೆ ಎಚ್ಚರಿಕೆ ನೀಡಲಾಗಿದೆ.

ಬುಧವಾರ ನಡೆದ ಕೊಲ್ಕತ್ತ ಮತ್ತು ಮುಂಬೈ ನಡುವಣ ಪಂದ್ಯದಲ್ಲಿ ಇವರಿಬ್ಬರೂಲೆವಲ್ –1 ನಿಯಮ ಉಲ್ಲಂಘನೆ ಮಾಡಿದ್ದರು ಎಂದು ಐಪಿಎಲ್ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿತೀಶ್ ಮತ್ತು ಬೂಮ್ರಾ ಅವರು ತಮ್ಮ ತಪ್ಪನ್ನು ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ. ಅಶಿಸ್ತಿನ ವರ್ತನೆಗಾಗಿ ಈ ದಂಡ ವಿಧಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.