ಹರ್ವಿಕ್ ದೇಸಾಯಿ
ನವದೆಹಲಿ: ಸೌರಾಷ್ಟ್ರದ ವಿಕೆಟ್‌ಕೀಪರ್–ಬ್ಯಾಟರ್ ಹರ್ವಿಕ್ ದೇಸಾಯಿ ಅವರನ್ನು ಐಪಿಎಲ್ ಟೂರ್ನಿಯಲ್ಲಿ ಆಡುವ ಮುಂಬೈ ಇಂಡಿಯನ್ಸ್ ತಂಡವು ಸೇರ್ಪಡೆ ಮಾಡಿಕೊಂಡಿದೆ.
ವಿಷ್ಣು ವಿನೋದ್ ಅವರು ಮುಂಗೈ ಗಾಯದಿಂದಾಗಿ ವಿಶ್ರಾಂತಿ ಪಡೆದಿದ್ದಾರೆ. ಅವರ ಬದಲಿಗೆ ದೇಸಾಯಿ ಸ್ಥಾನ ಪಡೆದಿದ್ದಾರೆ. 24 ವರ್ಷದ ದೇಸಾಯಿ 46 ಪ್ರಥಮ ದರ್ಜೆ, 40 ಲಿಸ್ಟ್ ಎ ಹಾಗೂ 27 ದೇಶಿ ಟಿ20 ಪಂದ್ಯಗಳನ್ನು ಆಡಿದ್ದಾರೆ.
ವಿಶ್ವಕಪ್‌ನತ್ತ ಚಿತ್ತ
ಸಿಡ್ನಿ (ಪಿಟಿಐ): ಸತತ ಆಟದಿಂದಾಗಿ ಸಂಪೂರ್ಣ ದಣಿದು ಹೋಗಿದ್ದೆ. ಈ ವರ್ಷ ಟಿ20 ವಿಶ್ವಕಪ್ ಕೂಡ ಇರುವುದರಿಂದ ವಿಶ್ರಾಂತಿ ಅಗತ್ಯವಿತ್ತು. ಆದ್ದರಿಂದಲೇ ಐಪಿಎಲ್‌ನಲ್ಲಿ ಆಡಲಿಲ್ಲ ಎಂದು ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಜಂಪಾ ಹೇಳಿದ್ದಾರೆ.
‘ಹೋದ ವರ್ಷ ಐಪಿಎಲ್ ಪೂರ್ಣ ಟೂರ್ನಿಯಲ್ಲಿ ಆಡಿದ್ದೆ. ಏಕದಿನ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿಯೇ ಆಡಿದ್ದೆ. ಈ ಬಾರಿಯೂ ಐಪಿಎಲ್‌ನಲ್ಲಿ ಆಡುವ ಮನಸ್ಸಿತ್ತು. ಆದರೆ ದೇಹ ದಣಿದಿದೆ.
ಅಲ್ಲದೇ ಈ ವರ್ಷ ವಿಶ್ವಕಪ್ ಟೂರ್ನಿ ಇರುವುದರಿಂದ ಅದಕ್ಕೆ ಸಿದ್ಧವಾಗಬೇಕಿದೆ’ ಎಂದು ಜಂಪಾ ವಿಲ್ಲೊ ಟಾಕ್ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.