ಪ್ಯಾಟ್ ಕಮಿನ್ಸ್
ಹೈದರಾಬಾದ್: ‘ಐಪಿಎಲ್‌ನಲ್ಲಿ ನಮ್ಮ ತಂಡದ ಬ್ಯಾಟರ್‌ಗಳು ಎದುರಾಳಿ ಬೌಲರ್‌ಗಳನ್ನು ಚೆಂಡಾಡುವ ರೀತಿ ನೋಡಿದಾಗಲೇ ಭಯವಾಗುತ್ತದೆ. ಅವರೆದುರು ಸ್ವತಃ ನಾನೇ ಬೌಲಿಂಗ್ ಮಾಡಲು ಮುಂದಾಗುತ್ತಿರಲಿಲ್ಲ’ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದರು.
ಭಾನುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ 20 ಓವರುಗಳಲ್ಲಿ 6 ವಿಕೆಟ್‌ಗೆ 286 ರನ್ ಹೊಡೆದು 44 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿತ್ತು.‘ನಮ್ಮ ಬ್ಯಾಟರ್‌ಗಳಿಗೆ ಬೌಲಿಂಗ್ ಮಾಡಲು ಸ್ವತಃ ನಾನೇ ಹೆದರುತ್ತಿದ್ದೆ. ನಂಬಲು ಅಸಾಧ್ಯ ರೀತಿಯಲ್ಲಿ ಅವರು ಆಡುತ್ತಿದ್ದಾರೆ. ನೋಡುವಾಗ ದಿಗಿಲುಟ್ಟಿಸುತ್ತಿದೆ’ ಎಂದು ಕಮಿನ್ಸ್ ಪಂದ್ಯಾನಂತರದ ಪ್ರಶಸ್ತಿ ಪ್ರದಾನದ ವೇಳೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.