ಚಿತ್ರ ಕೃಪೆ
(ಚಿತ್ರ ಕೃಪೆ: ಐಪಿಎಲ್)
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ಭಾನುವಾರ ಆರಂಭವಾಗಿದೆ. ಮೊದಲ ದಿನದ ಹರಾಜಿನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಭಾರಿ ಮೊತ್ತ ಜೇಬಿಗಿಳಿಸಿದ್ದಾರೆ. ಎಚ್ಚರಿಕೆಯ ನಡೆ ಪ್ರದರ್ಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪರ್ಸ್‌ನಲ್ಲಿ ₹ 83 ಕೋಟಿ ಇಟ್ಟುಕೊಂಡು ಇಂದು ಬಿಡ್‌ಗೆ ಇಳಿದಿದೆ.
ಜೋಶ್ ಹ್ಯಾಜಲ್‌ವುಡ್: ₹ 12.50 ಕೋಟಿ
ಫಿಲ್ ಸಾಲ್ಟ್: ₹ 11.50 ಕೋಟಿ
ಜಿತೇಶ್ ಶರ್ಮಾ: ₹ 11 ಕೋಟಿ
ಲಿಯಾಮ್ ಲಿವಿಂಗ್‌ಸ್ಟೋನ್: ₹ 8.75 ಕೋಟಿ
ರಸಿಕ್ ಧರ್: ₹ 6 ಕೋಟಿ
ಸುಯಾಷ್ ಶರ್ಮಾ: ₹ 2.60 ಕೋಟಿ
ಆದರೆ ಈ ಬಿಡ್‌ನಲ್ಲಿ ಅಚ್ಚರಿಯ ಸಂಗತಿಯೆಂದರೆ ವೆಂಕಟೇಶ್ ಅಯ್ಯರ್ ಅವರು ₹ 23.75 ಕೋಟಿ ಗಳಿಸಿದ್ದು ಕಳೆದ ಋತುಗಳಲ್ಲಿ ಕೆಕೆಆರ್ ತಂಡದ ಆಲ್‌ರೌಂಡರ್ ಆಗಿ ಮಿಂಚಿದ್ದರು. ಈಚೆಗೆ ಅವರನ್ನು ಬಿಡುಗಡೆ ಮಾಡಿದ್ದ ಕೆಕೆಆರ್ ತಂಡವೇ ಅವರನ್ನು ಖರೀದಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವೆಂಕಟೇಶ್ ಅವರನ್ನು ಖರೀದಿಸಲು ಕೆಕೆಆರ್‌ಗೆ ತೀವ್ರ ಪೈಪೋಟಿಯೊಡ್ಡಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಬಿಡ್‌ನಲ್ಲಿ ಖರೀದಿಸಲಿಲ್ಲ.
ಲಖನೌ ತಂಡದಿಂದ ರಾಹುಲ್ ಅವರು ಬಿಡುಗಡೆಯಾದ ನಂತರ ಆರ್‌ಸಿಬಿಗೆ ಬರಲಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಮೆಗಾ ಹರಾಜಿನಲ್ಲಿ ಅವರನ್ನು ಆರ್‌ಸಿಬಿ ಖರೀದಿಸಲಿ ಎಂದು ಹಲವು ಅಭಿಮಾನಿಗಳೂ ಒತ್ತಾಯಿಸಿದ್ದರು. ಆದರೆ ರಾಹುಲ್ ಡೆಲ್ಲಿ ತಂಡದ ಪಾಲಾದರು.
ಈಚೆಗೆ ಆರ್‌ಸಿಬಿಯು ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಮತ್ತು ಯಶ್ ದಯಾಳ್ ಅವರನ್ನು ಬಿಟ್ಟು ಉಳಿದೆಲ್ಲ ಆಟಗಾರರನ್ನು ಬಿಡುಗಡೆ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಬಿಡ್‌ನಲ್ಲಿ ತರಾತುರಿ ತೋರಲಿಲ್ಲ. ಬಹಳ ಎಚ್ಚರಿಕೆಯ ನಡೆಯನ್ನು ಇಟ್ಟಿತು. ತನ್ನ ಪರ್ಸ್‌ನಲ್ಲಿ ₹ 83 ಕೋಟಿ ಇಟ್ಟುಕೊಂಡಿದ್ದ ಆರ್‌ಸಿಬಿಯು ಅಳೆದು, ಸುರಿದು ಹೆಜ್ಜೆಯಿಟ್ಟಿತು. ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ ಅವರ ಬಿಡ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಆದರೆ ಒಂದು ಹಂತದ ನಂತರ ಹಿಂದೆ ಸರಿಯಿತು.
ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ ಮತ್ತು ಫಿಲ್ ಸಾಲ್ಟ್ ಅವರನ್ನು ಖರೀದಿಸಿತು. ಆಸ್ಟ್ರೇಲಿಯಾದ ಜೋಷ್ ಹ್ಯಾಜಲ್‌ವುಡ್ ಅವರನ್ನು ಖರೀದಿಸುವ ಮೂಲಕ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿತು.
ರಿಷಭ್ ಪಂತ್: ಲಖನೌ ಸೂಪರ್ ಜೈಂಟ್ಸ್ – ₹ 27 ಕೋಟಿ
ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್ – ₹ 26.75 ಕೋಟಿ
ವೆಂಕಟೇಶ್ ಅಯ್ಯರ್: ಕೋಲ್ಕತ್ತ ನೈಟ್‌ರೈಡರ್ಸ್ – ₹ 23.75 ಕೋಟಿ
ಅರ್ಶದೀಪ್ ಸಿಂಗ್: ಪಂಜಾಬ್ ಕಿಂಗ್ಸ್ – ₹ 18 ಕೋಟಿ
ಯುಜವೇಂದ್ರ ಚಾಹಲ್: ಪಂಜಾಬ್ ಕಿಂಗ್ಸ್ – ₹ 18 ಕೋಟಿ
ಜಾಸ್ ಬಟ್ಲರ್: ಗುಜರಾತ್ ಟೈಟನ್ಸ್ – ₹ 15.75 ಕೋಟಿ
ಕೆ.ಎಲ್.ರಾಹುಲ್: ಡೆಲ್ಲಿ ಕ್ಯಾಪಿಟಲ್ಸ್ – ₹ 14 ಕೋಟಿ
ಟ್ರೆಂಟ್ ಬೌಲ್ಟ್: ಮುಂಬೈ ಇಂಡಿಯನ್ಸ್ – ₹ 12.50 ಕೋಟಿ
ಜೋಫ್ರಾ ಆರ್ಚರ್: ರಾಜಸ್ಥಾನ ರಾಯಲ್ಸ್ – ₹ 12.50 ಕೋಟಿ
ಜೋಶ್ ಹ್ಯಾಜಲ್‌ವುಡ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ₹ 12.50 ಕೋಟಿ
ಮಾರಾಟವಾಗದ ಕೇನ್ ವಿಲಿಯಮ್ಸನ್
ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಮುನ್ನಡೆಸಿದ್ದ ಫಾಫ್ ಡು ಪ್ಲೆಸಿ ಅವರನ್ನು ₹ 2 ಕೋಟಿ ನೀಡಿ ಡೆಲ್ಲಿ ಖರೀದಿಸಿದೆ.
ಮೂಲ ಬೆಲೆ: ₹ 2 ಕೋಟಿ
ಖರೀದಿಸಿದ ಮೊತ್ತ: ₹3.2 ಕೋಟಿ
ಮೂಲ ಬೆಲೆ: ₹ 2 ಕೋಟಿ
ಖರೀದಿಸಿದ ಮೊತ್ತ: ₹ 2.4 ಕೋಟಿ
ಮೂಲ ಬೆಲೆ: ₹ 2 ಕೋಟಿ
ಖರೀದಿಸಿದ ಮೊತ್ತ: ₹ 7 ಕೋಟಿ
ರಾಜಸ್ಥಾನ ರಾಯಲ್ಸ್ ಜೊತೆ ಪೈಪೋಟಿ ನಡೆಸಿದ ಆರ್‌ಸಿಬಿ ಕೃಣಾಲ್ ಪಾಂಡ್ಯ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.
ಮೂಲ ಬೆಲೆ: ₹ 2 ಕೋಟಿ
ಖರೀದಿಸಿದ ಮೊತ್ತ: ₹ 5.75 ಕೋಟಿ
ಮೂಲ ಬೆಲೆ: ₹ 1.50 ಕೋಟಿ
ಖರೀದಿಸಿದ ಮೊತ್ತ: ₹ 4.20 ಕೋಟಿ
ಮೂಲ ಬೆಲೆ: ₹ 2 ಕೋಟಿ
ಖರೀದಿಸಿದ ಮೊತ್ತ: ₹ 2.6 ಕೋಟಿ
ಮೂಲ ಬೆಲೆ: ₹ 1 ಕೋಟಿ
ಖರೀದಿಸಿದ ಮೊತ್ತ: ₹ 6.5 ಕೋಟಿ
ಗುಜರಾತ್ ಟೈಟ್ಸ್ ತಂಡ ಜೆರಾಲ್ಡ್ ಕೋಜಿ ಅವರನ್ನು ₹ 2.40 ಕೋಟಿ ನೀಡಿ ಖರೀಸಿದಿಸಿದೆ. ಅವರು ₹ 1.25 ಕೋಟಿ ಮೂಲ ಬೆಲೆ ಹೊಂದಿದ್ದರು.
ಆರ್‌ಸಿಬಿಯು ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಿದೆ.
ಮುಂಬೈ ಇಂಡಿಯನ್ಸ್, ಲಖನೌ ಸೂಪರ್ ಜೈಂಟ್ಸ್ ಜೊತೆ ಪೈಪೋಟಿ ನಡೆಸಿದ್ದ ಆರ್‌ಸಿಬಿ, ₹ 2 ಕೋಟಿ ಮೂಲ ಬೆಲೆ ಹೊಂದಿರುವ ಭುವಿಗೆ ₹ 10.75 ಕೋಟಿ ನೀಡಿದೆ..
ಮೂಲ ಬೆಲೆ: ₹ 2 ಕೋಟಿ
ಖರೀದಿಸಿದ ಮೊತ್ತ: ₹ 5.5 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಜಿದ್ದಿಗಿಳಿದ ಮುಂಬೈ ಇಂಡಿಯನ್ಸ್ ₹ 9.25 ಕೋಟಿ ನೀಡಿ ಚಹಾರ್ ಖರೀದಿಸಿದೆ. ಅವರು, ₹2 ಕೋಟಿ ಮೂಲ ಬೆಲೆ ಹೊಂದಿದ್ದಾರೆ.
ಅಫ್ಗಾನಿಸ್ತಾನದ ಯುವ ಸ್ಪಿನ್ನರ್ ಅಲ್ಲಾ ಘಾಜನ್‌ಫರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು ₹ 4.8 ಕೋಟಿ ನೀಡಿ ಖರೀದಿಸಿದೆ.
ಘಾಜನ್‌ಫರ್ ಮೂಲ ಬೆಲೆ ₹ 75 ಲಕ್ಷ ಮೂಲ ಬೆಲೆ ಇದೆ.
ಖರೀದಿಸಿದ ಮೊತ್ತ: ₹ 3.4 ಕೋಟಿ
ಖರೀದಿಸಿದ ಮೊತ್ತ: ₹ 1.3 ಕೋಟಿ
ಆರ್‌ಸಿಬಿಯು 'ರೈಟ್ ಟು ಮ್ಯಾಚ್' ಕಾರ್ಡ್ ಬಳಸಿ ಸ್ವಪ್ನಿಲ್ ಸಿಂಗ್ ಅವರನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಖರೀದಿಸಿದ ಮೊತ್ತ: ₹ 50 ಲಕ್ಷ ನೀಡಿ
ಮೂಲ ಬೆಲೆ: ₹ 75 ಲಕ್ಷ
ಖರೀದಿಸಿದ ತಂಡ: ಕೋಲ್ಕತ್ತ ನೈಟ್‌ರೈಡರ್ಸ್
ಶೆರ್ಫೇನ್ ರುಥರ್ಫೋರ್ಡ್‌ಗೆ ಗುಜರಾತ್ ಟೈಟನ್ಸ್ ₹ 2.6 ಕೋಟಿ ನೀಡಿದೆ.
ಮೂಲ ಬೆಲೆ: ₹ 1 ಕೋಟಿ
ಖರೀದಿಸಿದ ಮೊತ್ತ: ₹ 2.4 ಕೋಟಿ
ಸ್ಫೋಟಕ ಶೈಲಿಯ ಬ್ಯಾಟರ್ ಟಿಮ್ ಡೇವಿಡ್ ಅವರನ್ನು ಆರ್‌ಸಿಬಿ ಖರೀದಿಸಿದೆ.
₹ 2 ಕೋಟಿ ಮೂಲ ಬೆಲೆ ಇರುವ ಈ ಆಟಗಾರನಿಗೆ ₹ 3 ಕೋಟಿ ಹರಾಜು ಕೂಗಿದೆ.
ಮೂಲ ಬೆಲೆ: ₹ 75 ಲಕ್ಷ
ಖರೀದಿಸಿದ ಮೊತ್ತ: ₹ 1.7 ಕೋಟಿ
ಕಳೆದ ಬಾರಿ ಆರ್‌ಸಿಬಿ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ವಿಲ್ ಜಾಕ್ಸ್ ಈ ಬಾರಿ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.
ಮೂಲ ಬೆಲೆ: ₹ 2 ಕೋಟಿ
ಖರೀದಿಸಿದ ಮೊತ್ತ: ₹ 1.7 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸ್, ರೊಮಾರಿಯೊ ಶೆಫರ್ಡ್ ಅವರನ್ನು ₹ 1.5 ಕೋಟಿಗೆ ಮತ್ತು ನುವಾನ್ ತುಷಾರ ಅವರನ್ನು ₹ 1.60 ಕೋಟಿಗೆ ಖರೀದಿಸಿದೆ.
ಶೆಫರ್ಡ್ ಅವರ ಮೂಲ ಬೆಲೆ ₹ 1.5 ಕೋಟಿ ಇದ್ದರೆ, ತುಷಾರ ಅವರಿಗೆ ₹ 75 ಲಕ್ಷ ಇದೆ.
ಮೂಲ ಬೆಲೆ: ₹ 1 ಕೋಟಿ
ಖರೀದಿಸಿದ ಮೊತ್ತ: ₹ 1 ಕೋಟಿ
ಆರ್ಯ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿಸಿದೆ
ಮೂಲ ಬೆಲೆ: ₹ 30 ಲಕ್ಷ
ಖರೀದಿಸಿದ ಮೊತ್ತ: ₹ 3.8 ಕೋಟಿ
ಕನ್ನಡಿಗ ಮನೋಜ್ ಭಾಂಡಗೆ ಅವರನ್ನು ₹ 30 ಲಕ್ಷಕ್ಕೆ ಆರ್‌ಸಿಬಿ ಖರೀದಿಸಿದೆ. ಭಾಂಡಗೆ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡದ ಬಗ್ಗೆ ಕಳೆದ ಆವೃತ್ತಿಗಳ ಸಂದರ್ಭಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ಕೇಳಿ ಬಂದಿದ್ದವು.
ಮೂಲ ಬೆಲೆ: ₹ 30 ಲಕ್ಷ
ಇಂಗ್ಲೆಂಡ್‌ನ ಬ್ಯಾಟಿಂಗ್ ಆಲ್‌ರೌಂಡರ್ ಜೇಕಬ್ ಬೆಥಲ್ ಅವರನ್ನು ಆರ್‌ಸಿಬಿ ಖರೀದಿಸಿದೆ. ₹ 1.25 ಕೋಟಿ ಮೂಲ ಬೆಲೆಯುಳ್ಳ ಅವರನ್ನು ₹ 2.6 ಕೋಟಿಗೆ ಖರೀದಿಸಿದೆ.
ಬಿಹಾರದ 13 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಅವರು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ.
₹ 30 ಲಕ್ಷ ಮೂಲ ಬೆಲೆ ಹೊಂದಿರುವ ಅವರನ್ನು ರಾಜಸ್ಥಾನ ರಾಯಲ್ಸ್ ತಂಡವು ₹ 1.10 ಕೋಟಿ ನೀಡಿ ಖರೀದಿಸಿದೆ.
ಮಾರಾಟವಾಗದೆ ಉಳಿದಿದ್ದ ಅನುಭವಿ ಆಟಗಾರ ಅಜಿಂಕ್ಯ ರಹಾನೆ ಮತ್ತು ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್ಸ್ ಅವರು ಎರಡನೇ ಸುತ್ತಿನಲ್ಲಿ ಬಿಕರಿಯಾಗಿದ್ದಾರೆ.
ರಹಾನೆ (₹ 1.50 ಕೋಟಿ) ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್, ಫಿಲಿಪ್ಸ್ ಅವರನ್ನು ಗುಜರಾತ್ ಟೈಟನ್ಸ್ (₹ 2 ಕೋಟಿ) ಮೂಲ ಬೆಲೆ ನೀಡಿ ಖರೀದಿಸಿವೆ.
ಮೊದಲ ಸುತ್ತಿನಲ್ಲಿ ಮಾರಾಟವಾಗದೆ ಉಳಿದಿದ್ದ ದೇವದತ್ತ ಪಡಿಕ್ಕಲ್ ಅವರನ್ನು ಆರ್‌ಸಿಬಿ ಖರೀದಿಸಿದೆ.
ಪಡಿಕ್ಕಲ್‌ಗೆ ₹ 2 ಕೋಟಿ ಮೂಲ ಬೆಲೆ ನಿಗದಿಯಾಗಿದೆ. ಅಷ್ಟೇ ಮೊತ್ತಕ್ಕೆ ಅವರನ್ನು ಆರ್‌ಸಿಬಿ ತನ್ನ ಬಳಗ ಸೇರಿಸಿಕೊಂಡಿದೆ.
ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಿಲ್ಲ. ಹಿಂದಿನ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಅವರಿಗೆ ₹ 30 ಲಕ್ಷ ಮೂಲ ಬೆಲೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.