ADVERTISEMENT

ಐಪಿಎಲ್‌ ಫೈನಲ್‌: ಚೆನ್ನೈ ಸೂಪರ್‌ ಕಿಂಗ್ಸ್‌ಗೆ 150 ರನ್‌ಗಳ ಗೆಲುವಿನ ಗುರಿ

​ಪ್ರಜಾವಾಣಿ ವಾರ್ತೆ
Published 12 ಮೇ 2019, 16:20 IST
Last Updated 12 ಮೇ 2019, 16:20 IST
   

ಹೈದರಾಬಾದ್‌:ಇಲ್ಲಿನ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಐಪಿಎಲ್‌ ಫೈನಲ್‌ ಪಂದ್ಯದಲ್ಲಿಮುಂಬೈ ಇಂಡಿಯನ್ಸ್‌ ತಂಡವುಚೆನ್ನೈ ಸೂಪರ್‌ ಕಿಂಗ್ಸ್‌ಗೆ 150 ರನ್‌ಗಳ ಗೆಲುವಿನ ಗುರಿ ನೀಡಿದೆ.

ಟಾಸ್‌ ಗೆದ್ದುಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್‌ ಸಾಧಾರಣ ಮೊತ್ತವನ್ನು ಕಲೆ ಹಾಕಿತು. ಚೆನ್ನೈ ಬೌಲಿಂಗ್ ಎದುರು ರನ್‌ಗಳಿಸಲು ಪರದಾಡಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 149 ರನ್‌ಗಳಿಸಿತು.

ಆರಂಭಿಕ ಬ್ಯಾಟ್ಸ್‌ಮನ್‌ಕ್ವಿಂಟನ್ ಡಿ ಕಾಕ್ ಚೆನ್ನೈ ಬೌಲರ್‌ಗಳಿಗೆ ಪ್ರತಿರೋಧತೋರಿದರಾದರೂ ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ನಿಲ್ಲದೆ 29 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಕಿರ್‌ನ್‌ ಪೋಲಾರ್ಡ್‌ 46 ರನ್‌ ಗಳಿಸಿದರು.

ADVERTISEMENT

ವೇಗಿಗಳಾದ ದೀಪಕ್‌ ಚಾಹರ್ 3 ವಿಕೆಟ್‌, ಶಾರ್ದೂಲಾ ಠಾಕೂರ್ 2 ವಿಕೆಟ್‌ ಪಡೆದರು. ಸ್ಪಿನ್‌ ಬೌಲರ್‌ ಇಮ್ರಾನ್‌ ತಾಹೀರ್ 2 ವಿಕೆಟ್‌ ಪಡೆಯುವ ಮೂಲಕ ಮುಂಬೈ ಇಂಡಿಯನ್ಸ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು.

ಈ ಟ್ರೋಫಿಯನ್ನು ಗೆಲ್ಲಲು ಚೆನ್ನೈ ಸೂಪರ್ ಕಿಂಗ್ಸ್‌ 150 ರನ್‌ ಗಳಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.