ADVERTISEMENT

IPL-2020 | MI vs CSK: ಮುಂಬೈ ಇಂಡಿಯನ್ಸ್‌ಗೆ 10 ವಿಕೆಟ್‌ಗಳ ಜಯ

ಶಾರ್ಜಾ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ತನಗೆ ಸೋಲುಣಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡ 10 ವಿಕೆಟ್‌ ಅಂತರದಿಂದ ಗೆದ್ದು ಬೀಗಿತು. ಐಪಿಎಲ್‌ ಇತಿಹಾಸದಲ್ಲಿ ಚೆನ್ನೈ ತಂಡ ಇದೇ ಮೊದಲ ಸಲ 10 ವಿಕೆಟ್‌ಗಳ ಸೋಲು ಅನುಭವಿಸಿತು. ಮಾತ್ರವಲ್ಲದೆ, ಈ ಟೂರ್ನಿಯಲ್ಲಿ 11 ಪಂದ್ಯಗಳನ್ನು ಆಡಿರುವ ಈ ತಂಡಕ್ಕೆ ಇದು 8ನೇ ಸೋಲು. ಇನ್ನೊಂದೆಡೆ 10 ಪಂದ್ಯಗಳನ್ನು ಆಡಿ 7ನೇ ಗೆಲುವು ಸಾಧಿಸಿದ ಮುಂಬೈ, ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಈ ಪಂದ್ಯದಲ್ಲಿ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಕೀರನ್‌ ಪೊಲಾರ್ಡ್‌ ಮುಂಬೈ ತಂಡವನ್ನು ಮುನ್ನಡೆಸಿದರು. ಪಾಯಿಂಟ್ಸ್‌ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 2ನೇ ಸ್ಥಾನದಲ್ಲಿದ್ದು, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 17:24 IST
Last Updated 23 ಅಕ್ಟೋಬರ್ 2020, 17:24 IST

ಮುಂಬೈಗೆ 10 ವಿಕೆಟ್‌ ಜಯ

ಸಾಧಾರಣ ಗುರಿ ಎದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಕ್ವಿಂಟನ್‌ ಡಿ ಕಾಕ್‌ ಮತ್ತು ಇಶಾನ್‌ ಕಿಶನ್ ಜೋಡಿ ಮುಂಬೈ ಇಂಡಿಯನ್ಸ್‌ಗೆ 10 ವಿಕೆಟ್‌ ಅಂತರದ ಗೆಲುವು ತಂದುಕೊಟ್ಟಿತು. ಇದುವರೆಗೆ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ 10 ವಿಕೆಟ್‌ ಗೆಲುವು ಸಾಧಿಸಲು ಯಾವುದೇ ತಂಡಕ್ಕೆ ಸಾಧ್ಯವಾಗಿರಲಿಲ್ಲ.

ತಲಾ 37 ಎಸೆತಗಳನ್ನು ಎದುರಿಸಿದ ಡಿ ಕಾಕ್‌ ಮತ್ತು ಇಶಾನ್‌ ಕಿಶನ್‌ ಕ್ರಮವಾಗಿ 46 ರನ್‌ ಮತ್ತು 68 ರನ್‌ ಗಳಿಸಿದರು.

ಈ ಜಯದೊಂದಿಗೆ ಮುಂಬೈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್‌ ಸ್ಪರ್ಧೆಯಿಂದ ಹೊರಬಿದ್ದಿತು.

ADVERTISEMENT

12ನೇ ಓವರ್ ಮುಕ್ತಾಯ

ಮುಂಬೈ ತಂಡ ವಿಕೆಟ್‌ ನಷ್ಟವಿಲ್ಲದೆ 112 ರನ್‌ ಗಳಿಸಿದೆ. ಇನ್ನೂ 8 ಓವರ್‌ಗಳು ಬಾಕಿ ಇದ್ದು, ಕೇವಲ 3 ರನ್‌ ಬೇಕಾಗಿದೆ.

ಬೌಲರ್‌: ದೀಪಕ್‌ ಚಾಹರ್‌ (1 1 1 0 0 1)

11ನೇ ಓವರ್ ಮುಕ್ತಾಯ; ಶತಕ ಪೂರೈಸಿದ ಮುಂಬೈ

11 ನೇ ಓವರ್‌ ಮುಕ್ತಾಯವಾಗಿದ್ದು, ಮುಂಬೈ 108 ರನ್‌ ಗಳಿಸಿದೆ.

ಬೌಲರ್‌: ಶಾರ್ದೂಲ್ ಠಾಕೂರ್‌ (1 1 6 1 1 0)

10ನೇ ಓವರ್ ಮುಕ್ತಾಯ

10 ಓವರ್‌ಗಳ ಆಟ ಮುಗಿದಿದ್ದು, ಮುಂಬೈ ವಿಕೆಟ್‌ ನಷ್ಟವಿಲ್ಲದೆ 98 ರನ್‌ ಗಳಿಸಿದೆ. ಕಿಶನ್‌ (64) ಮತ್ತು ಕ್ವಿಂಟನ್‌ (32) ಕ್ರೀಸ್‌ನಲ್ಲಿದ್ದಾರೆ.
ಬೌಲರ್‌: ಇಮ್ರಾನ್‌ ತಾಹಿರ್‌ (0 1 1 0 1 6)

ಅರ್ಧಶತಕ ಬಾರಿಸಿದ ಕಿಶನ್

ಬಿರುಸಾಗಿ ಬ್ಯಾಟ್‌ ಬೀಸುತ್ತಿರುವ ಇಶಾನ್ ಕಿಶನ್‌ ಕೇವಲ 31 ಎಸೆತಗಳಲ್ಲಿ 57 ರನ್‌ ಗಳಿಸಿ ಆಡುತ್ತಿದ್ದಾರೆ. ಸದ್ಯ 9 ಓವರ್‌ ಮುಗಿದಿದ್ದು, ಚೆನ್ನೈ ತಂಡ ವಿಕೆಟ್‌ ನಷ್ಟವಿಲ್ಲದೆ 89 ರನ್ ಗಳಿಸಿದೆ.

ಇನ್ನೊಂದು ತುದಿಯಲ್ಲಿ ಡಿ ಕಾಕ್‌ (30) ಕ್ರೀಸ್‌ನಲ್ಲಿದ್ದಾರೆ.
ಬೌಲರ್‌: ರವಿಂದ್ರ ಜಡೇಜಾ (1 0 6 6 1 1)

8ನೇ ಓವರ್ ಮುಕ್ತಾಯ

ಮುಂಬೈ ತಂಡದ ಮೊತ್ತ ವಿಕೆಟ್‌ ನಷ್ಟವಿಲ್ಲದೆ 75 ರನ್‌ ಆಗಿದೆ.

ಬೌಲರ್: ಇಮ್ರಾನ್ ತಾಹಿರ್ (4 1 1 6 0 0)

7ನೇ ಓವರ್‌ ಮುಕ್ತಾಯ

7 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಮುಂಬೈ ತಂಡದ ಮೊತ್ತ ವಿಕೆಟ್‌ ನಷ್ಟವಿಲ್ಲದೆ 64 ರನ್‌ ಆಗಿದೆ.
ಬೌಲರ್: ಶಾರ್ದೂಲ್‌ ಠಾಕೂರ್‌ (4 1 1 6 0 0)

6ನೇ ಓವರ್ ಮುಕ್ತಾಯ

ಮುಂಬೈ ತಂಡದ ಮೊತ್ತ 52 ರನ್‌ ಆಗಿದೆ. ಡಿ ಕಾಕ್‌ 16 ರನ್‌ ಗಳಿಸಿದ್ದು, ಕಿಶನ್‌ 36 ರನ್‌ ಗಳಿಸಿ ಆಡುತ್ತಿದ್ದಾರೆ.

ಈ ಹಂತದಲ್ಲಿ ಚೆನ್ನೈ 5 ವಿಕೆಟ್‌ ಕಳೆದುಕೊಂಡು 24 ರನ್ ಗಳಿಸಿತ್ತು.

ಬೌಲರ್: ಇಮ್ರಾನ್‌ ತಾಹಿರ್‌ ( 1 2 0 4 4 6)

5ನೇ ಓವರ್ ಮುಕ್ತಾಯ

5 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಮುಂಬೈ ಇಂಡಿಯನ್ಸ್‌ ವಿಕೆಟ್‌ ನಷ್ಟವಿಲ್ಲದೆ 47 ರನ್‌ ಗಳಿಸಿದೆ.

13 ರನ್‌ ಗಳಿಸಿರುವ ಡಿ ಕಾಕ್‌ ಮತ್ತು 34 ರನ್‌ ಗಳಿಸಿರುವ ಕಿಶನ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್: ದೀಪಕ್‌ ಚಾಹರ್‌ (1 2 0 4 4 6)

ಬ್ಯಾಟಿಂಗ್ ಆರಂಭಿಸಿದ ಮುಂಬೈ

ಚೆನ್ನೈ ನೀಡಿರುವ ಸಾಧಾರಣ ಗುರಿ ಎದುರು ಬ್ಯಾಟಿಂಗ್ ಆರಂಭಿಸಿರುವ ಮುಂಬೈ ಇಂಡಿಯನ್ಸ್‌ ತಂಡ 4 ಓವರ್‌ಗಳ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 30 ರನ್ ಗಳಿಸಿದೆ.

ಇಶಾನ್‌ ಕಿಶನ್ ಮತ್ತು ಕ್ವಿಂಟನ್‌ ಡಿ ಕಾಕ್‌ ಕ್ರೀಸ್‌ನಲ್ಲಿದ್ದಾರೆ.

ಮುಂಬೈ ಇಂಡಿಯನ್ಸ್‌ಗೆ 115 ರನ್‌ ಗುರಿ

ಕೊನೆಯ ಓವರ್‌ನಲ್ಲಿ ಮೂರು ಬೌಂಡರಿ ಬಾರಿಸಿದ ಸ್ಯಾಮ್‌ ಕರನ್‌ ಚೆನ್ನೈ ತಂಡದ ಮೊತ್ತವನ್ನು 114 ಕ್ಕೆ ಏರಿಸಿದರು. 47 ಎಸೆತಗಳನ್ನು ಎದುರಿಸಿದ ಕರನ್‌ 52 ರನ್‌ ಗಳಿಸಿ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.
ಬೌಲರ್‌: ಟ್ರೆಂಟ್‌ ಬೌಲ್ಟ್‌ (1 4 0 4 4 W)

19ನೇ ಓವರ್ ಮುಕ್ತಾಯ

19 ಓವರ್‌ಗಳ ಅಂತ್ಯಕ್ಕೆ ಚೆನ್ನೈ 8 ವಿಕೆಟ್‌ ಕಳೆದುಕೊಂಡು 101 ರನ್‌ ಗಳಿಸಿದೆ.

ಬೌಲರ್‌: ಜಸ್‌ಪ್ರೀತ್‌ ಬೂಮ್ರಾ (0 2 1 4 0 1)

18ನೇ ಓವರ್ ಮುಕ್ತಾಯ

ಚೆನ್ನೈ 8 ವಿಕೆಟ್‌ಗೆ 93 ರನ್‌ ಗಳಿಸಿದೆ.

ಬೌಲರ್‌: ನಾಥನ್‌ ಕಲ್ಟರ್‌ನೈಲ್‌ (0 4 2 0 0 Wd3 Wd 1)

17ನೇ ಓವರ್ ಮುಕ್ತಾಯ

ಚೆನ್ನೈ ತಂಡದ ಮೊತ್ತ 8 ವಿಕೆಟ್‌ಗೆ 82 ರನ್‌ ಆಗಿದೆ. ಸ್ಯಾಮ್‌ ಕರನ್‌ (30) ಮತ್ತು ಇಮ್ರಾನ್‌ ತಾಹಿರ್‌ (7) ಕ್ರೀಸ್‌ನಲ್ಲಿದ್ದಾರೆ.
ಬೌಲರ್‌: ಕೃಣಾಲ್‌ ಪಾಂಡ್ಯ (1 2 0 1 1 4)

16ನೇ ಓವರ್ ಮುಕ್ತಾಯ

16 ಓವರ್‌ ಮುಗಿದಿದ್ದು ಚೆನ್ನೈ ತಂಡದ ಮೊತ್ತ 8 ವಿಕೆಟ್‌ಗೆ 73 ರನ್‌ ಆಗಿದೆ.

ಬೌಲರ್‌: ಜಸ್‌ಪ್ರೀತ್‌ ಬೂಮ್ರಾ (B1 0 0 0 1 0)
 

15ನೇ ಓವರ್ ಮುಕ್ತಾಯ: 8ನೇ ವಿಕೆಟ್‌ ಪತನ

ಸ್ಯಾಮ್‌ ಕರನ್‌ ಜೊತೆಗೂಡಿ 8ನೇ ವಿಕೆಟ್‌ ಜೊತೆಯಾಟದಲ್ಲಿ 28 ರನ್‌ ಸೇರಿಸಿದ್ದ ಶಾರ್ದೂಲ್‌ ಠಾಕೂರ್‌ 15ನೇ ಓವರ್‌ನಲ್ಲಿ ಔಟಾದರು. ಸದ್ಯ ಚೆನ್ನೈ 71 ರನ್‌ ಗಳಿಸಿ 8 ವಿಕೆಟ್‌ ಕಳೆದುಕೊಂಡಿದೆ.

ಬೌಲರ್‌: ನಾಥನ್‌ ಕಲ್ಟರ್‌ನೈಲ್‌ (1 0 1 2 W 0)

14ನೇ ಓವರ್ ಮುಕ್ತಾಯ

14 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಚೆನ್ನೈ ತಂಡ 7 ವಿಕೆಟ್‌ಗಳನ್ನು ಕಳೆದುಕೊಂಡು 67 ರನ್‌ ಗಳಿಸಿದೆ.

ಕರನ್‌ ಮತ್ತು ಠಾಕೂರ್‌ 24 ರನ್‌ ಜೊತೆಯಾಟವಾಡಿದ್ದಾರೆ.

ಬೌಲರ್‌: ಕೃಣಾಲ್ ಪಾಂಡ್ಯ (1 0 0 1 1 1)

13ನೇ ಓವರ್ ಮುಕ್ತಾಯ

13 ಓವರ್‌ಗಳ ಅಂತ್ಯಕ್ಕೆ ಚೆನ್ನೈ ತಂಡ 7 ವಿಕೆಟ್‌ ನಷ್ಟಕ್ಕೆ 63 ರನ್‌ ಗಳಿಸಿದೆ.

ಬೌಲರ್‌: ರಾಹುಲ್‌ ಚಾಹರ್‌ (1 0 0 1 1 0)

12ನೇ ಓವರ್ ಮುಕ್ತಾಯ

12 ಓವರ್‌ಗಳ ಅಂತ್ಯಕ್ಕೆ ಚೆನ್ನೈ 7 ವಿಕೆಟ್‌ ನಷ್ಟಕ್ಕೆ 60 ರನ್‌ ಗಳಿಸಿದೆ.

ಬೌಲರ್‌: ಕೀರನ್‌ ಪೊಲಾರ್ಡ್‌ (0 1 1 0 1 1)

11ನೇ ಓವರ್ ಮುಕ್ತಾಯ

7 ವಿಕೆಟ್‌ ನಷ್ಟಕ್ಕೆ 56 ರನ್‌ ಗಳಿಸಿದೆ.

ಬೌಲರ್‌: ರಾಹುಲ್‌ ‌ಚಾಹರ್ ( 0 2 0 1 1 0)

10ನೇ ಓವರ್ ಮುಕ್ತಾಯ; 50 ರನ್‌ ಪೂರೈಸಿಕೊಂಡ ಚೆನ್ನೈ

10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಚೆನ್ನೈ ತಂಡ 7 ವಿಕೆಟ್‌ಗಳನ್ನು ಕಳೆದುಕೊಂಡು 52 ರನ್‌ ಗಳಿಸಿದೆ.

ಸ್ಯಾಮ್‌ ಕರನ್‌ 17 ರನ್‌ ಗಳಿಸಿ ಆಡುತ್ತಿದ್ದು, ಇನ್ನೊಂದು ತುದಿಯಲ್ಲಿ ಶಾರ್ದೂಲ್‌ ಠಾಕೂರ್‌ (2) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ನಾಥನ್‌ ಕಲ್ಟರ್‌ ನೈಲ್‌ (0 1 6 0 1 0)

9ನೇ ಓವರ್ ಮುಕ್ತಾಯ; 7ನೇ ವಿಕೆಟ್ ಪತನ

9 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಚೆನ್ನೈ ತಂಡ 7 ವಿಕೆಟ್‌ಗಳನ್ನು ಕಳೆದುಕೊಂಡು 44 ರನ್‌ ಗಳಿಸಿದೆ.

ರಾಹುಲ್‌ ಚಾಹರ್‌ ಎಸೆದ ಈ ಓವರ್‌ನಲ್ಲಿ ದೀಪಕ್‌ ಚಹಾರ್‌ (0) ವಿಕೆಟ್‌ ಒಪ್ಪಿಸಿದ್ದಾರೆ.
(1 L3 6 1 W 1)

8ನೇ ಓವರ್ ಮುಕ್ತಾಯ

8 ಓವರ್‌ಗಳು ಮುಗಿದಿದ್ದು, ಚೆನ್ನೈ ತಂಡ 6 ವಿಕೆಟ್‌ ಕಳೆದುಕೊಂಡು 32 ರನ್‌ ಗಳಿಸಿದೆ.

ಬೌಲರ್‌: ನಾಥನ್‌ ಕಲ್ಟರ್‌ನೈಲ್‌ (0 0 0 Wd 0 1 0)

ಧೋನಿ ವಿಕೆಟ್ ಪತನ

16 ರನ್‌ ಗಳಿಸಿ ಚೆನ್ನೈಗೆ ಆಸರೆಯಾಗುವ ಭರವಸೆ ನೀಡಿದ್ದ ಎಂಎಸ್‌ ಧೋನಿ 7ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

7 ಓವರ್‌ಗಳ ಅಂತ್ಯಕ್ಕೆ ಚೆನ್ನೈ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು 30 ರನ್‌ ಗಳಿಸಿದೆ.

ಬೌಲರ್‌: ರಾಹುಲ್‌ ಚಾಹರ್‌ (0 0 6 W 0 0)

6ನೇ ಓವರ್ ಮುಕ್ತಾಯ

ಪವರ್‌ ಪ್ಲೇ ಮುಕ್ತಾಯವಾಗಿದ್ದು, ಧೋನಿ ಪಡೆ 5 ವಿಕೆಟ್‌ಗಳನ್ನು ಕಳೆದುಕೊಂಡು 24 ರನ್ ಗಳಿಸಿದೆ.

ಮುಂಬೈ ಪರ ಟ್ರೆಂಟ್‌ ಬೌಲ್ಟ್‌ 5 ರನ್‌ ನೀಡಿ 3 ವಿಕೆಟ್‌ ಪಡೆದಿದ್ದಾರೆ. ಬೂಮ್ರಾ 2 ವಿಕೆಟ್‌ ಉರುಳಿಸಿದ್ದಾರೆ.

6ನೇ ಓವರ್: ಟ್ರೆಂಟ್‌ ಬೌಲ್ಟ್‌ (0 W 1 Wd 0 1 0)

5ನೇ ಓವರ್ ಮುಕ್ತಾಯ

ಚೆನ್ನೈ 21 ರನ್‌ ಗಳಿಸಿ 4 ವಿಕೆಟ್‌ ಕಳೆದುಕೊಂಡಿದೆ.
ಬೌಲರ್‌: ಕೃಣಾಲ್‌ ಪಾಂಡ್ಯ (Wd2 1 0 0 0 0 0)

4ನೇ ಓವರ್ ಮುಕ್ತಾಯ

ನಾಲ್ಕನೇ ಓವರ್‌ನಲ್ಲಿ 3 ಬೌಂಡರಿ ಸಹಿತ 13 ರನ್‌ ಬಂದಿತು. ಹೀಗಾಗಿ ಚೆನ್ನೈ 18 ರನ್‌ ಗಳಿಸಿದೆ.
ಬೌಲರ್‌: ಜಸ್‌ಪ್ರೀತ್ ಬೂಮ್ರಾ (4 0 4 1 4 0)

3 ಓವರ್‌; 4 ವಿಕೆಟ್

ತಮ್ಮ ಎರಡನೇ ಓವರ್‌ನಲ್ಲಿಯೂ ಶಿಸ್ತಿನ ಬೌಲಿಂಗ್‌ ಮಾಡಿದ ಟ್ರೆಂಟ್‌ ಬೌಲ್ಟ್‌ ಚೆನ್ನೈನ ಭರವಸೆಯ ಬ್ಯಾಟ್ಸ್‌ಮನ್‌ ಫಾಫ್‌ ಡು ಪ್ಲೆಸಿಗೆ ಪೆವಿಲಿಯನ್‌ ದಾರಿ ತೋರಿದರು. ಆರನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಕ್ರೀಸ್‌ಗೆ ಬಂದಿದ್ದಾರೆ.

ಸದ್ಯ 3 ಓವರ್‌ ಮುಕ್ತಾಯವಾಗಿದ್ದು, ಚೆನ್ನೈ ತಂಡ 4 ವಿಕೆಟ್‌ ಕಳೆದುಕೊಂಡು 5 ರನ್‌ ಗಳಿಸಿದೆ.

ಬೌಲರ್‌: ಟ್ರೆಂಟ್‌ ಬೌಲ್ಟ್‌ ( 0 0 0 0 W 2)

ಎರಡನೇ ಓವರ್‌ನಲ್ಲಿ 2 ವಿಕೆಟ್‌

ಎರಡನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಜಸ್‌ಪ್ರೀತ್‌ ಬೂಮ್ರಾ ಚೆನ್ನೈ ತಂಡದ ಮತ್ತೆರಡು ವಿಕೆಟ್‌ ಉರುಳಿಸಿದರು.

ಓವರ್‌ನ ನಾಲ್ಕನೇ ಎಸೆತದಲ್ಲಿ ಅಂಬಟಿ ರಾಯುಡು, 5ನೇ ಎಸೆತದಲ್ಲಿ ಎನ್‌.ಜಗದೀಶನ್‌ ಔಟಾಗಿದ್ದಾರೆ.
ಸದ್ಯ ತಂಡದ ಮೊತ್ತ 3 ವಿಕೆಟ್‌ ನಷ್ಟಕ್ಕೆ ಮೂರು ರನ್‌ ಆಗಿದೆ.
ಬೌಲರ್‌: ಜಸ್‌ಪ್ರೀತ್‌ ಬೂಮ್ರಾ ( 0 1 2 W W 0)

ಸಿಎಸ್‌ಕೆಗೆ ಆರಂಭಿಕ ಆಘಾತ

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಆರಂಭಿಕ ಆಘಾತ ಅನುಭವಿಸಿದೆ.

ಫಾಫ್‌ ಡು ಪ್ಲೆಸಿ ಜೊತೆಗೆ ಇನಿಂಗ್ಸ್‌ ಆರಂಭಿಸಿದ ರಿತುರಾಜ್‌ ಗಾಯಕವಾಡ್‌ ಶೂನ್ಯಕ್ಕೆ ಮರಳಿದ್ದಾರೆ. ಇದೀಗ ಅಂಬಟಿ ರಾಯುಡು ಕ್ರೀಸ್‌ಗೆ ಬಂದಿದ್ದಾರೆ.

ಬೌಲರ್‌: ಟ್ರೆಂಟ್‌ ಬೌಲ್ಟ್‌ (0 0 0 0 W 0)

ಹನ್ನೊಂದರ ಬಳಗ

ಮುಂಬೈ ಇಂಡಿಯನ್ಸ್‌ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಒಂದು ಬದಲಾವಣೆಯಾಗಿದೆ. ನಾಯಕ ರೋಹಿತ್‌ ಶರ್ಮಾ ಈ ವಿಶ್ರಾಂತಿ ಪಡೆಯಲಿದ್ದು, ಅವರ ಬದಲು ಕೀರನ್‌ ಪೊಲಾರ್ಡ್‌ ಈ ಪಂದ್ಯದಲ್ಲಿ ತಂಡ ಮುನ್ನಡೆಸಲಿದ್ದಾರೆ. ರೋಹಿತ್‌ ಅವರಿಂದ ತೆರವಾಗಿರುವ ಸ್ಥಾನದಲ್ಲಿ ಸೌರಭ್‌ ತಿವಾರಿ ಆಡಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಕೇದಾರ್ ಜಾಧವ್‌, ಶೇನ್ ವಾಟ್ಸನ್‌, ಪಿಯೂಷ್‌ ಚಾವ್ಲಾ ತಂಡದಿಂದ ಹೊರಗುಳಿದಿದ್ದು, ಎನ್‌.ಜಗದೀಶನ್‌, ರಿತುರಾಜ್‌ ಗಾಯಕವಾಡ್‌, ಇಮ್ರಾನ್ ತಾಹಿರ್‌ ತಂಡ ಕೂಡಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್‌: ಕ್ವಿಂಟನ್‌ ಡಿ ಕಾಕ್‌ (ವಿಕೆಟ್‌ ಕೀಪರ್‌), ಸೌರಭ್‌ ತಿವಾರಿ, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ಹಾರ್ದಿಕ್ ಪಾಂಡ್ಯ, ಕೃಣಾಲ್‌ ಪಾಂಡ್ಯ, ಕೀರನ್‌ ಪೊಲಾರ್ಡ್ (ನಾಯಕ)‌, ನಾಥನ್‌ ಕಾಲ್ಟರ್‌‌ನೈಲ್‌, ರಾಹುಲ್‌ ಚಾಹರ್‌, ಟ್ರೆಂಟ್‌ ಬೌಲ್ಟ್‌, ಜಸ್‌ಪ್ರೀತ್‌ ಬೂಮ್ರಾ

ಚೆನ್ನೈ ಸೂಪರ್‌ಕಿಂಗ್ಸ್‌: ಫಾಫ್‌ ಡು ಪ್ಲೆಸಿ, ಅಂಬಟಿ ರಾಯುಡು, ಎಂಎಸ್‌ ಧೋನಿ (ನಾಯಕ/ವಿಕೆಟ್‌ ಕೀಪರ್‌), ಸ್ಯಾಮ್‌ ಕರನ್‌, ರವಿಂದ್ರ ಜಡೇಜಾ,  ಎನ್‌.ಜಗದೀಶನ್‌, ರಿತುರಾಜ್‌ ಗಾಯಕವಾಡ್‌, ಇಮ್ರಾನ್ ತಾಹಿರ್‌, ಜೋಷ್‌ ಹ್ಯಾಷಲ್‌ವುಡ್, ಶಾರ್ದೂಲ್‌ ಠಾಕೂರ್‌, ದೀಪಕ್‌ ಚಾಹರ್‌
 

ಮುಂಬೈ ಬೌಲಿಂಗ್

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ಕ್ವಿಂಟನ್‌ ಡಿ ಕಾಕ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ನಿಮ್ಮ ಪ್ರಕಾರ ಇಂದು ಯಾವ ತಂಡ ಗೆಲುವು ಸಾಧಿಸಲಿದೆ? ವೋಟ್‌ ಮಾಡಿ

ಮುಂಬೈ–ಚೆನ್ನೈ ಹಣಾಹಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.