ADVERTISEMENT

IPL-2020 | RCB vs RR: ಆರ್‌ಸಿಬಿಗೆ ಗೆಲುವು ತಂದುಕೊಟ್ಟ ವಿಲಿಯರ್ಸ್‌

ಕಿಂಗ್ಸ್‌ ಇಲೆವನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಕೆಲವು ಪ್ರಯೋಗಗಳಿಗೆ ಮುಂದಾಗಿ ಕೈಸುಟ್ಟುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶನಿವಾರ ರಾಜಸ್ಥಾನ ರಾಯಲ್ಸ್ ಎದುರು ಪಂದ್ಯದಲ್ಲಿ ಗೆಲುವು ಸಾಧಿಸಿದೆ.

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 14:02 IST
Last Updated 17 ಅಕ್ಟೋಬರ್ 2020, 14:02 IST

ಆರ್‌ಸಿಬಿಗೆ 7 ವಿಕೆಟ್ ಗೆಲುವು

20ನೇ ಓವರ್‌ನಲ್ಲಿ ಬೇಕಾಗಿದ್ದ 10 ರನ್‌ಗಳನ್ನು ಕೇವಲ 4 ಎಸೆತಗಳಲ್ಲಿ ಗಳಿಸಿಕೊಟ್ಟ ಎಬಿ ಡಿ ವಿಲಿಯರ್ಸ್‌ ಆರ್‌ಸಿಬಿಗೆ 7 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಕೇವಲ 22 ಎಸೆತಗಳನ್ನು ಎದುರಿಸಿದ ವಿಲಿಯರ್ಸ್‌ 6 ಸಿಕ್ಸರ್‌ ಮತ್ತು 1 ಬೌಂಡರಿ ಸಹಿತ ಅಜೇಯ 55 ರನ್‌ಗಳನ್ನು ಬಾರಿಸಿದರು. ಕೊನೆಯಲ್ಲಿ ವಿಲಿಯರ್ಸ್‌ಗೆ ಉತ್ತಮ ಬೆಂಬಲ ನೀಡಿದ ಗುರುಕೀರತ್‌ ಸಿಂಗ್‌ 19 ರನ್‌ ಗಳಿಸಿ ಔಟಾಗದೆ ಉಳಿದರು.

ಇದರೊಂದಿಗೆ ಆರ್‌ಸಿಬಿ ಟೂರ್ನಿಯಲ್ಲಿ 6ನೇ ಗೆಲುವು ಸಾಧಿಸಿದ್ದು, ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿವೆ.

ADVERTISEMENT

ಬೌಲರ್‌: ಜೋಫ್ರಾ ಆರ್ಚರ್‌ (2 1 2 6)

19ನೇ ಓವರ್ ಮುಕ್ತಾಯ: ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿದ ವಿಲಿಯರ್ಸ್‌

19ನೇ ಓವರ್‌ನ ಮೊದಲ ಮೂರು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ಎಬಿ ಡಿ ವಿಲಿಯರ್ಸ್‌, ಆರ್‌ಸಿಬಿಯನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದಾರೆ.

ಈ ಓವರ್‌ನಲ್ಲಿ ಒಟ್ಟು 25 ರನ್‌ಗಳು ಹರಿದು ಬಂದಿದ್ದು, ಕೊನೆಯ ಓವರ್‌ನಲ್ಲಿ  10 ರನ್‌ ಬೇಕಾಗಿವೆ. ಈ ಓವರ್‌ಗೂ ಮೊದಲು ಆರ್‌ಸಿಬಿಗೆ 12  ಎಸೆತಗಳಲ್ಲಿ 35 ರನ್‌ಗಳು ಬೇಕಾಗಿದ್ದವು.

ಬೌಲರ್‌: ಜಯದೇವ ಉನದ್ಕಟ್‌ ( 6 6 6 1 Wd 4 1)

18ನೇ ಓವರ್ ಮುಕ್ತಾಯ

18ನೇ ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 143 ರನ್ ಗಳಿಸಿಕೊಂಡಿದೆ. ಉಳಿದಿರುವ 2 ಓವರ್‌ಗಳಲ್ಲಿ ಆರ್‌ಸಿಬಿಗೆ 35 ರನ್ ಬೇಕಾಗಿದೆ.

ಬೌಲರ್‌: ಕಾರ್ತಿಕ್‌ ತ್ಯಾಗಿ (1 4 1 0 3 1)

17ನೇ ಓವರ್ ಮುಕ್ತಾಯ

17ನೇ ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 133 ರನ್ ಗಳಿಸಿಕೊಂಡಿದೆ. ಉಳಿದಿರುವ 3 ಓವರ್‌ಗಳಲ್ಲಿ ಆರ್‌ಸಿಬಿಗೆ 45 ರನ್ ಬೇಕಾಗಿದೆ.

ಬೌಲರ್‌: ಜಯದೇವ ಉನದ್ಕಟ್‌ (0 0 0 1 6 2)

16ನೇ ಓವರ್ ಮುಕ್ತಾಯ

16 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿ 3 ವಿಕೆಟ್‌ ನಷ್ಟಕ್ಕೆ 124 ರನ್‌ ಗಳಿಸಿದೆ. ಈ ಹಂತದಲ್ಲಿ ಆರ್‌ಆರ್‌ 4 ವಿಕೆಟ್‌ ಕಳೆದುಕೊಂಡು 133 ರನ್ ಗಳಿಸಿತ್ತು.

ಆರ್‌ಸಿಬಿ ಉಳಿದಿರುವ 4 ಓವರ್‌ಗಳಲ್ಲಿ 54 ರನ್ ಗಳಿಸಬೇಕಿದೆ.

ಬೌಲರ್‌: ಜೋಫ್ರಾ ಆರ್ಚರ್‌ (1 1 1 1 6 0)

15ನೇ ಓವರ್ ಮುಕ್ತಾಯ

15 ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 3 ನಷ್ಟಕ್ಕೆ 64 ರನ್‌ ಗಳಿಸಿದೆ. ವಿಲಿಯರ್ಸ್‌ ಮತ್ತು ಗುರುಕೀರತ್‌ ಕ್ರೀಸ್‌ನಲ್ಲಿದ್ದು, ಉಳಿದಿರುವ 5 ಓವರ್‌ಗಳಲ್ಲಿ 64 ರನ್ ಗಳಿಸಬೇಕಿದೆ.

ಬೌಲರ್‌: ಶ್ರೇಯಸ್‌ ಗೋಪಾಲ್‌ (1 1 1 Wd 1 3 2)

14ನೇ ಓವರ್ ಮುಕ್ತಾಯ: ಕೊಹ್ಲಿ ವಿಕೆಟ್ ಪತನ

14ನೇ ಓವರ್‌ನ ಮೊದಲ ಎಸೆತದಲ್ಲಿ ವಿರಾಟ್‌ ಕೊಹ್ಲಿ (43) ವಿಕೆಟ್ ಒಪ್ಪಿಸಿದ್ದಾರೆ. ಓವರ್‌ನ ಅಂತ್ಯಕ್ಕೆ ಆರ್‌ಸಿಬಿ ಮೊತ್ತ 3 ವಿಕೆಟ್‌ಗೆ 104 ರನ್‌ ಗಳಿಸಿದೆ.

ವಿಲಿಯರ್ಸ್‌ ಮತ್ತು ಗುರುಕೀರತ್ ಸಿಂಗ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕಾರ್ತಿಕ್‌ ತ್ಯಾಗಿ (1 1 6 Wd 1 0 W)

13ನೇ ಓವರ್ ಮುಕ್ತಾಯ: ಶತಕ ಪೂರೈಸಿದ ಆರ್‌ಸಿಬಿ

ಆರ್‌ಸಿಬಿ 13ನೇ ಓವರ್‌ ಅಂತ್ಯಕ್ಕೆ 2 ವಿಕೆಟ್‌ಗಳನ್ನು ಕಳೆದುಕೊಂಡು 102 ರನ್‌ ಗಳಿಸಿಕೊಂಡಿದೆ. ಕೊಹ್ಲಿ ಜೊತೆಗೆ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 79 ರನ್‌ ಕೂಡಿಸಿದ್ದ ಪಡಿಕ್ಕಲ್‌ (35) ಈ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್‌ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದಾರೆ.

ಬೌಲರ್‌: ರಾಹುಲ್‌ ತೆವಾಟಿಯಾ (1 1 6 Wd 1 0 W)

12ನೇ ಓವರ್ ಮುಕ್ತಾಯ

12 ಓವರ್‌ ಮುಗಿದಿದ್ದು, ಆರ್‌ಸಿಬಿ 1 ವಿಕೆಟ್‌ ಕಳೆದುಕೊಂಡು 92 ರನ್‌ ಗಳಿಸಿದೆ. ಕೊಹ್ಲಿ ಮತ್ತು ಪಡಿಕ್ಕಲ್‌ ಜೋಡಿ 2ನೇ ವಿಕೆಟ್‌ ಜೊತೆಯಾಟದಲ್ಲಿ 69 ರನ್‌ ಕಲೆಹಾಕಿದೆ.

ಬೌಲರ್‌: ಕಾರ್ತಿಕ್ ತ್ಯಾಗಿ (2 2 1 Wd 1 1 0)

11ನೇ ಓವರ್ ಮುಕ್ತಾಯ

11 ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 1 ವಿಕೆಟ್ ನಷ್ಟಕ್ಕೆ 84 ರನ್‌ ಗಳಿಸಿದೆ.

ಬೌಲರ್‌: ರಾಹುಲ್‌ ತೆವಾಟಿಯಾ (2 1 0 1 1 Wd 1)

10ನೇ ಓವರ್ ಮುಕ್ತಾಯ

10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿ 1 ವಿಕೆಟ್‌ ನಷ್ಟಕ್ಕೆ 77 ರನ್‌ ಗಳಿಸಿದೆ. ನಾಯಕ ವಿರಾಟ್‌ ಕೊಹ್ಲಿ (27) ಮತ್ತು ದೇವದತ್ತ ಪಡಿಕ್ಕಲ್‌ (29) ಕ್ರೀಸ್‌ನಲ್ಲಿದ್ದಾರೆ.
ಈ ಹಂತದಲ್ಲಿ ಆರ್‌ಆರ್‌ 3 ವಿಕೆಟ್‌ ಕಳೆದುಕೊಂಡು 80 ರನ್ ಗಳಿಸಿತ್ತು.

ಬೌಲರ್‌: ಶ್ರೇಯಸ್‌ ಗೋಪಾಲ್‌ (1 1 1 2 2 6)

9ನೇ ಓವರ್ ಮುಕ್ತಾಯ

9 ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 1 ವಿಕೆಟ್‌ ಕಳೆದುಕೊಂಡು 64 ರನ್‌ ಗಳಿಸಿದೆ. ಪಡಿಕ್ಕಲ್‌ (27) ಮತ್ತು ಕೋಹ್ಲಿ (16) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ರಾಹುಲ್‌ ತೆವಾಟಿಯಾ (0 0 N1 1 2 Wd Wd Wd 1 0)

8ನೇ ಓವರ್ ಮುಕ್ತಾಯ

ಆರ್‌ಸಿಬಿ 1 ವಿಕೆಟ್‌ ಕಳೆದುಕೊಂಡು 55 ರನ್‌ ಗಳಿಸಿದೆ.

ಬೌಲರ್‌: ಜಯದೇವ ಉನದ್ಕಟ್‌ ( 1 0 1 1 1 0 )

7ನೇ ಓವರ್‌ ಮುಕ್ತಾಯ

ಆರ್‌ಸಿಬಿ 7ನೇ ಓವರ್‌ ಮುಕ್ತಾಯಕ್ಕೆ 1 ವಿಕೆಟ್‌ ಕಳೆದುಕೊಂಡು 51 ರನ್ ಗಳಿಸಿದೆ.

ಬೌಲರ್‌: ರಾಹುಲ್‌ ತೆವಾಟಿಯಾ (1 0 1 1 1 0)

6ನೇ ಓವರ್ ಮುಕ್ತಾಯ: ಆರ್‌ಸಿಬಿ 1 ವಿಕೆಟ್‌ ನಷ್ಟಕ್ಕೆ 47 ರನ್‌

ಪವರ್‌ ಪ್ಲೇ ಮುಕ್ತಾಯವಾಗಿದ್ದು, ಆರ್‌ಸಿಬಿ 1 ವಿಕೆಟ್‌ ಕಳೆದುಕೊಂಡು 47 ರನ್‌ ಗಳಿಸಿದೆ. ಈ ಹಂತದಲ್ಲಿ ರಾಯಲ್‌ 1 ವಿಕೆಟ್‌ ಕಳೆದುಕೊಂಡು 52 ರನ್‌ ಗಳಿಸಿತ್ತು.

ಬೌಲರ್‌: ಜಯದೇವ ಉನದ್ಕಟ್‌ ( 2 0 0 4 0 2)

5ನೇ ಓವರ್ ಮುಕ್ತಾಯ

5 ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 1 ವಿಕೆಟ್‌ ಕಳೆದುಕೊಂಡು 39 ರನ್‌ ಗಳಿಸಿದೆ. ಕೊಹ್ಲಿ ಮತ್ತು ಪಡಿಕ್ಕಲ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕಾರ್ತಿಕ್ ತ್ಯಾಗಿ (1 Wd 0 4 4 1 1)

4ನೇ ಓವರ್ ಮುಕ್ತಾಯ: ಫಿಂಚ್‌ ಔಟ್

ಜೋಫ್ರಾ ಆರ್ಚರ್‌ ಬೌಲಿಂಗ್‌ನಲ್ಲಿ 2 ಸಿಕ್ಸರ್‌ಗಳನ್ನು ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಆ್ಯರನ್‌ ಫಿಂಚ್ (14)‌, ಶ್ರೇಯಸ್‌ ಗೋಪಾಲ್ ಎಸೆದ ನಾಲ್ಕನೇ ಓವರ್‌ನಲ್ಲಿ ಔಟಾಗಿದ್ದಾರೆ. ನಾಲ್ಕು ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ 1 ವಿಕೆಟ್‌ ನಷ್ಟಕ್ಕೆ 27 ರನ್‌ ಗಳಿಸಿದೆ.

ಬೌಲರ್‌: ಶ್ರೇಯಸ್‌ ಗೋಪಾಲ್‌ (0 1 W 1 1 2)
 

3ನೇ ಓವರ್ ಮುಕ್ತಾಯ

3 ಓವರ್‌ ಮುಕ್ತಾಯಕ್ಕೆ ಆರ್‌ಸಿಬಿ ತಂಡದ ಮೊತ್ತ 22 ರನ್‌ ಆಗಿದೆ. ಫಿಂಚ್‌ ಮತ್ತು ಪಡಿಕ್ಕಲ್‌ ಕ್ರೀಸ್‌ನಲ್ಲಿದ್ದಾರೆ.
ಬೌಲರ್‌: ಜೋಫ್ರಾ ಆರ್ಚರ್‌ (1 2 1 1 0 1)

2ನೇ ಓವರ್ ಮುಕ್ತಾಯ

ಆರ್‌ಸಿಬಿ 2 ಓವರ್‌ ಮುಕ್ತಾಯಕ್ಕೆ 9 ರನ್‌ ಗಳಿಸಿದೆ.

ಬೌಲರ್‌: ಶ್ರೇಯಸ್‌ ಗೋಪಾಲ್‌ ( 2 0 1 0 L1 1)

ಇನಿಂಗ್ಸ್‌ ಆರಂಭಿಸಿದ ಆರ್‌ಸಿಬಿ

ಕನ್ನಡಿಗ ದೇವದತ್ತ ಪಡಿಕ್ಕಲ್‌ ಮತ್ತು ಆಸ್ಟ್ರೇಲಿಯಾ ಆಟಗಾರ ಆ್ಯರನ್‌ ಫಿಂಚ್‌ ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ್ದಾರೆ. ಮೊದಲ ಓವರ್‌ ಮುಕ್ತಾಯವಾಗಿದ್ದು, ಈ ಜೋಡಿ 3 ರನ್‌ ಗಳಿಸಿದೆ.

ಬೌಲರ್‌: ಜೋಫ್ರಾ ಆರ್ಚರ್‌ (0 0 1 0 0 Wd 2)

ಆರ್‌ಸಿಬಿಗೆ 178 ರನ್ ಗುರಿ

ಕ್ರಿಸ್‌ ಮೋರಿಸ್‌ ಎಸೆದ ಕೊನೆಯ ಓವರ್‌ನಲ್ಲಿ ಸ್ಮಿತ್‌ ಹಾಗೂ ಜೋಫ್ರಾ ಆರ್ಚರ್ ವಿಕೆಟ್‌ ಒಪ್ಪಿಸಿದರು. ಈ ಓವರ್‌ನಲ್ಲಿ ಕೇವಲ 3 ರನ್‌ ಗಳು ಬಂದವು. ಇದೊಂದಿಗೆ ರಾಜಸ್ಥಾನ ರಾಯಲ್ಸ್‌ 6 ವಿಕೆಟ್‌ಗಳನ್ನು ಕಳೆದುಕೊಂಡು 177 ರನ್‌ ಗಳಿಸಿದೆ.

(0 W 1 0 Wd 2 W)

19ನೇ ಓವರ್ ಮುಕ್ತಾಯ

19 ಓವರ್‌ಗಳ ಅಂತ್ಯಕ್ಕೆ ಆರ್‌ಆರ್‌ 4 ವಿಕೆಟ್‌ ಕಳೆದುಕೊಂಡು 173 ರನ್‌ ಗಳಿಸಿದೆ, ನಾಯಕ ಸ್ಟೀವ್‌ ಸ್ಮಿತ್‌ (57) ಜೊತೆಗೆ ರಾಹುಲ್ ತೆವಾಟಿಯಾ (18) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಇಸುರು ಉದಾನ ( 4 1 1 N4 1 B1 4 )

18 ಓವರ್ ಅಂತ್ಯ: ಆರ್‌ಆರ್‌ 150; ಸ್ಮಿತ್ 50

18 ಓವರ್‌ಗಳ ಅಂತ್ಯಕ್ಕೆ ರಾಜಸ್ಥಾನ ಓವರ್‌ನ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 158 ರನ್‌ ಗಳಿಸಿದೆ, ನಾಯಕ ಸ್ಟೀವ್‌ ಸ್ಮಿತ್‌ (56) ಜೊತೆಗೆ ರಾಹುಲ್ ತೆವಾಟಿಯಾ (4) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಯಜುವೇಂದ್ರ ಚಾಹಲ್ (4 1 1 N4 1 B1 4 1)

17ನೇ ಓವರ್ ಮುಕ್ತಾಯ

17 ಓವರ್‌ಗಳ ಅಂತ್ಯಕ್ಕೆ ರಾಜಸ್ಥಾನ ಓವರ್‌ನ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಿದೆ, ನಾಯಕ ಸ್ಟೀವ್‌ ಸ್ಮಿತ್‌ (41) ಜೊತೆಗೆ ರಾಹುಲ್ ತೆವಾಟಿಯಾ (3) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ನವದೀಪ್‌ ಸೈನಿ (1 2 1 1 0 1)

16ನೇ ಓವರ್ ಮುಕ್ತಾಯ; ಜಾಸ್ ಔಟ್

24 ರನ್‌ ಗಳಿಸಿ ಆಡುತ್ತಿದ್ದ ಜಾಸ್‌ ಬಟ್ಲರ್‌ ಕ್ರಿಸ್‌ ಮೋರಿಸ್‌ ಎಸೆದ 16ನೇ ಓವರ್‌ನ 3ನೇ ಎಸೆತದಲ್ಲಿ ಔಟಾಗಿದ್ದಾರೆ.

ಸದ್ಯ ರಾಜಸ್ಥಾನ ಓವರ್‌ನ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 133  ರನ್‌ ಗಳಿಸಿದೆ, ನಾಯಕ ಸ್ಟೀವ್‌ ಸ್ಮಿತ್‌ (37) ಜೊತೆಗೆ ರಾಹುಲ್ ತೆವಾಟಿಯಾ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕ್ರಿಸ್‌ ಮೋರಿಸ್‌ (6 1 Wd W 4 1 1)

15ನೇ ಓವರ್ ಮುಕ್ತಾಯ

25 ರನ್‌ ಗಳಿಸಿರುವ ಸ್ಟೀವ್‌ ಸ್ಮಿತ್‌ ಮತ್ತು 24 ರನ್ ಕಲೆಹಾಕಿರುವ ಜಾಸ್‌ ಬಟ್ಲರ್‌ ಕ್ರೀಸ್‌ನಲ್ಲಿದ್ದು, ರಾಜಸ್ಥಾನ 15 ಓವರ್‌ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 119 ರನ್‌ ಗಳಿಸಿದೆ.

ಬೌಲರ್‌: ಇಸುರು ಉದಾನ (1 1 4 4 0 1)
PGJsb2NrcXVvdGUgY2xhc3M9InR3aXR0ZXItdHdlZXQiPjxwIGxhbmc9ImVuIiBkaXI9Imx0ciI+TWF0Y2ggMzMuIDE0LjQ6IEkgVWRhbmEgdG8gUyBTbWl0aCwgNCBydW5zLCAxMTgvMyA8YSBocmVmPSJodHRwczovL3QuY28vcHdkek9MRGdpTyI+aHR0cHM6Ly90LmNvL3B3ZHpPTERnaU88L2E+IDxhIGhyZWY9Imh0dHBzOi8vdHdpdHRlci5jb20vaGFzaHRhZy9SUnZSQ0I/c3JjPWhhc2gmYW1wO3JlZl9zcmM9dHdzcmMlNUV0ZnciPiNSUnZSQ0I8L2E+IDxhIGhyZWY9Imh0dHBzOi8vdHdpdHRlci5jb20vaGFzaHRhZy9EcmVhbTExSVBMP3NyYz1oYXNoJmFtcDtyZWZfc3JjPXR3c3JjJTVFdGZ3Ij4jRHJlYW0xMUlQTDwvYT4gPGEgaHJlZj0iaHR0cHM6Ly90d2l0dGVyLmNvbS9oYXNodGFnL0lQTDIwMjA/c3JjPWhhc2gmYW1wO3JlZl9zcmM9dHdzcmMlNUV0ZnciPiNJUEwyMDIwPC9hPjwvcD4mbWRhc2g7IEluZGlhblByZW1pZXJMZWFndWUgKEBJUEwpIDxhIGhyZWY9Imh0dHBzOi8vdHdpdHRlci5jb20vSVBML3N0YXR1cy8xMzE3NDIyNDAwNzk2MDIwNzM2P3JlZl9zcmM9dHdzcmMlNUV0ZnciPk9jdG9iZXIgMTcsIDIwMjA8L2E+PC9ibG9ja3F1b3RlPiA8c2NyaXB0IGFzeW5jIHNyYz0iaHR0cHM6Ly9wbGF0Zm9ybS50d2l0dGVyLmNvbS93aWRnZXRzLmpzIiBjaGFyc2V0PSJ1dGYtOCI+PC9zY3JpcHQ+

14ನೇ ಓವರ್ ಮುಕ್ತಾಯ

14ನೇ ಓವರ್‌ ಅಂತ್ಯಕ್ಕೆ ಆರ್‌ಆರ್‌ 3 ವಿಕೆಟ್‌ ನಷ್ಟಕ್ಕೆ 108 ರನ್ ಗಳಿಸಿದೆ.

ಬೌಲರ್‌: ನವದೀಪ್‌ ಸೈನಿ  (1 2 0 0 1 1)

13ನೇ ಓವರ್ ಮುಕ್ತಾಯ: ಶತಕ ಪೂರೈಸಿದ ರಾಜಸ್ಥಾನ

13ನೇ ಓವರ್‌ನ 4ನೇ ಎಸೆತದಲ್ಲಿ ರಾಜಸ್ಥಾನ ತಂಡ 100ರ ಗಡಿ ದಾಟಿದೆ. ಮೊದಲ ಐವತ್ತು ರನ್ಗಳನ್ನು ಕೇವಲ 33 ಎಸೆತಗಳಲ್ಲಿ ಬಾರಿಸಿದ್ದ ಈ ತಂಡ, ಮತ್ತೆ 50 ರನ್‌ ಸೇರಿಸಲು 43 ಎಸೆತಗಳನ್ನು ತೆಗೆದುಕೊಂಡಿತು.

ಬೌಲರ್‌: ವಾಷಿಂಗ್ಟನ್‌ ಸುಂದರ್‌ (1 0 1 2 2 1)

12ನೇ ಓವರ್ ಮುಕ್ತಾಯ

12ನೇ ಓವರ್‌ಗಳ ಆಟ ಮುಕ್ತಾಯವಾಗಿದೆ. ಆರ್‌ಆರ್‌ ಮೊತ್ತ 3 ವಿಕೆಟ್‌ಗೆ 96 ಆಗಿದೆ.

ಬೌಲರ್‌: ಯುಜುವೇಂದ್ರ ಚಾಹಲ್‌ (1 1 0 Wd 0 1 1)
 

11ನೇ ಓವರ್ ಮುಕ್ತಾಯ

11ನೇ ಓವರ್‌ ಅಂತ್ಯಕ್ಕೆ ಆರ್‌ಆರ್‌ 3 ವಿಕೆಟ್‌ ನಷ್ಟಕ್ಕೆ 91 ರನ್ ಗಳಿಸಿದೆ.

ಬೌಲರ್‌: ಶಹಬಾಜ್‌ ಅಹಮದ್‌ (1 1 6 1 1 1)

10ನೇ ಓವರ್ ಮುಕ್ತಾಯ

10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಸ್ಟೀವ್‌ ಸ್ಮಿತ್‌ ಪಡೆ 3 ವಿಕೆಟ್‌ ಕಳೆದುಕೊಂಡು 80 ರನ್ ಗಳಿಸಿದೆ.

ಬೌಲರ್‌: ಯುಜುವೇಂದ್ರ ಚಾಹಲ್‌ (1 0 1 1 1 0)

9ನೇ ಓವರ್ ಮುಕ್ತಾಯ

ಆರ್‌ಆರ್‌ 3 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ. ನಾಯಕ ಸ್ಟೀವ್‌ ಸ್ಮಿತ್ ಮತ್ತು ಜಾಸನ್‌ ರಾಯ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಶಹಬಾಜ್‌ ಅಹಮದ್ (1 2 0 4 0 0)

8ನೇ ಓವರ್ ಮುಕ್ತಾಯ: ರಾಬಿನ್‌-ಸಂಜು ವಿಕೆಟ್ ಪತನ

ಕೇವಲ 22 ಎಸೆತಗಳಲ್ಲಿ 41 ರನ್‌ ಬಾರಿಸಿ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ರಾಬಿನ್‌ ಉತ್ತಪ್ಪ ಹಾಗೂ 9 ರನ್ ಗಳಿಸಿದ್ದ ಸಂಜು ಸ್ಯಾಮ್ಸನ್‌ ಅವರು ಯುಜುವೇಂದ್ರ ಚಾಹಲ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ. 8 ಓವರ್‌ ಆಟ ಮುಕ್ತಾಯವಾಗಿದ್ದು ಸದ್ಯ ಆರ್‌ಆರ್‌ 3 ವಿಕೆಟ್‌ ಕಳೆದುಕೊಂಡು 69 ರನ್‌ ಗಳಿಸಿದೆ.

ಈ ಓವರ್‌ಗೂ ಮುನ್ನ ಆರ್‌ಆರ್‌ ಕೇವಲ 1 ವಿಕೆಟ್‌ ಕಳೆದುಕೊಂಡು 62 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು.

ಬೌಲರ್‌: ಯುಜುವೇಂದ್ರ ಚಾಹಲ್‌  (6 0 1 W W 0)

7ನೇ ಓವರ್‌ ಮುಕ್ತಾಯ

ರಾಜಸ್ಥಾನ ತಂಡ ಕೇವಲ 1 ವಿಕಟೆ್‌ ಕಳೆದುಕೊಂಡು 62 ರನ್ ಗಳಿಸಿದೆ. ರಾಬಿನ್‌ ಉತ್ತಪ್ಪ 41 ರನ್‌ ಗಳಿಸಿದ್ದು ಇನ್ನೊಂದು ತುದಿಯಲ್ಲಿ ಸಂಜು ಸ್ಯಾಮ್ಸನ್‌ (2) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ನವದೀಪ್‌ ಸೈನಿ (Wd 0 2 0 W 1 1)

6ನೇ ಓವರ್ ಮುಕ್ತಾಯ: ಆರ್‌ಆರ್‌ 1 ವಿಕೆಟ್‌ ನಷ್ಟಕ್ಕೆ 52 ರನ್‌

ಪವರ್ ಪ್ಲೇ ಅಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 52 ರನ್‌ ಗಳಿಸಿದೆ.

15 ರನ್‌ ಗಳಿಸಿದ್ದ ಬೆನ್‌ ಸ್ಟೋಕ್ಸ್‌ ಅವರು ಕ್ರಿಸ್‌ ಮೋರಿಸ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ ಕ್ರೀಸ್‌ಗೆ ಬಂದಿದ್ದಾರೆ.

ಬೌಲರ್‌: ಕ್ರಿಸ್‌ ಮೋರಿಸ್‌ (Wd 0 2 0 W 1 1)

5ನೇ ಓವರ್ ಮುಕ್ತಾಯ

5 ಓವರ್‌ಗಳ ಅಂತ್ಯಕ್ಕೆ ಆರ್‌ಆರ್‌, 47 ರನ್‌ ಗಳಿಸಿದೆ.

ರಾಬಿನ್‌ ಉತ್ತಪ್ಪ (31) ಮತ್ತು ಬೆನ್ ಸ್ಟೋಕ್ಸ್‌ (13) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ನವದೀಪ್‌ ಸೈನಿ (0 4 1 1 1 2)

4ನೇ ಓವರ್ ಮುಕ್ತಾಯ

ನಾಲ್ಕು ಓವರ್‌ಗಳ ಅಂತ್ಯಕ್ಕ ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 38 ರನ್‌ ಗಳಿಸಿದೆ.

ಬೌಲರ್‌: ಇಸುರು ಉದಾನ (4 0 0 1 Wd Wd 4 6)

3ನೇ ಓವರ್ ಮುಕ್ತಾಯ

ಸುಂದರ್‌ ಎಸೆದ ಮೂರನೇ ಓವರ್‌ನಲ್ಲಿ 4 ಬೌಂಡರಿಗಳನ್ನು ಬಾರಿಸಿದ ರಾಬಿನ್‌ ಉತ್ತಪ್ಪ ತಂಡದ ಮೊತ್ತವನ್ನು 21ಕ್ಕೆ ಏರಿಸಿದರು.

(4 4 0 4 0 4)

2ನೇ ಓವರ್‌ ಮುಕ್ತಾಯ

2 ಓವರ್‌ ಅಂತ್ಯಕ್ಕೆ ಆರ್‌ಆರ್‌ 5 ರನ್‌ ಗಳಿಸಿದೆ.

ಬೌಲರ್‌: ಕ್ರಿಸ್‌ ಮೋರಿಸ್‌ (0 1 0 0 1 Wd 0)

ಬ್ಯಾಟಿಂಗ್ ಆರಂಭಿಸಿದ ಆರ್‌ಆರ್‌

ರಾಜಸ್ಥಾನ ರಾಯಲ್ಸ್‌ ಪರ ರಾಬಿನ್‌ ಉತ್ತಪ್ಪ ಹಾಗೂ ಬೆನ್‌ ಸ್ಟೋಕ್ಸ್‌ ಇನಿಂಗ್ಸ್‌ ಆರಂಭಿಸಿದ್ದಾರೆ. ಆರ್‌ಸಿಬಿ ಪರ ವೇಗಿ ವಾಷಿಂಗ್ಟನ್ ಸುಂದರ್‌ ಮೊದಲ ಓವರ್‌ ಬೌಲಿಂಗ್‌ ಮಾಡಿದರು.

ಬೌಲರ್: ವಾಷಿಂಗ್ಟನ್ ಸುಂದರ್‌ (1 0 0 0 1 0)

ರಾಜಸ್ಥಾನ ಬ್ಯಾಟಿಂಗ್‌

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ರಾಜಸ್ಥಾನ ರಾಯಲ್ಸ್‌ ಬ್ಯಾಟಿಂಗ್‌ ಆಯ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.