ADVERTISEMENT

IPL-2020 | RCB vs KKR: ಕೆಕೆಆರ್‌ ವಿರುದ್ಧ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಮೇಲೇರಿದ ಆರ್‌ಸಿಬಿ

ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 82 ರನ್‌ ಅಂತರದ ಸುಲಭ ಗೆಲುವು ಸಾಧಿಸಿದೆ. ಇದರೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 18:24 IST
Last Updated 12 ಅಕ್ಟೋಬರ್ 2020, 18:24 IST

ಆರ್‌ಸಿಬಿಗೆ 82 ರನ್ ಗೆಲುವು

ಕೊನೆಯ ಓವರ್‌ ಬೌಲಿಂಗ್ ಮಾಡಿದ ಇಸುರು ಉದಾನ ಕೇವಲ 4 ರನ್‌ ನೀಡಿ ಇನಿಂಗ್ಸ್‌ ಮುಗಿಸಿದರು. ಹೀಗಾಗಿ ಕೆಕೆಆರ್‌ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 112 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಇದರೊಂದಿಗೆ 82 ರನ್‌ ಅಂತರದ ಜಯ ಸಾಧಿಸಿದ ಆರ್‌ಸಿಬಿ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಕೆಕೆಆರ್‌ 7 ಪಂದ್ಯಗಳಲ್ಲಿ 4ನೇ ಸೋಲು ಕಂಡು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ADVERTISEMENT

19ನೇ ಓವರ್ ಮುಕ್ತಾಯ

19ನೇ ಓವರ್‌ನ ಕೊನೆಯ ಎಸೆತದಲ್ಲಿ ಕಮಲೇಶ್‌ ನಾಗರಕೋಟಿ ಔಟಾಗಿದ್ದಾರೆ. ಇದರೊಂದಿಗೆ ಕೆಕೆಆರ್ 108 ರನ್‌ ಗಳಿಸಿ 9 ವಿಕೆಟ್‌ ಕಳೆದುಕೊಂಡಿದೆ.

ಕೊನೆಯ ಓವರ್ ಆಟ ಬಾಕಿ ಉಳಿದಿದೆ.

19ನೇ ಓವರ್‌: ಕ್ರಿಸ್‌ ಮೋರಿಸ್‌ (0 1 1 1 1 W)

18ನೇ ಓವರ್ ಮುಕ್ತಾಯ

18 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕೆಕೆಆರ್‌ 8 ವಿಕೆಟ್‌ಗೆ 104 ರನ್‌ ಗಳಿಸಿದೆ.

ಬೌಲರ್: ನವದೀಪ್‌ ಸೈನಿ (0 1 1 0 Wd 2 0)

17ನೇ ಓವರ್ ಮುಕ್ತಾಯ

17ನೇ ಓವರ್‌ನ ಕೊನೆಯ ಎಸೆತದಲ್ಲಿ ರಾಹುಲ್‌ ತ್ರಿಪಾಠಿ ಔಟಾಗಿದ್ದಾರೆ. ಇದರೊಂದಿಗೆ ಕೆಕೆಆರ್‌ 99 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡಿದೆ.

ಬೌಲರ್‌: ಮೊಹಮ್ಮದ್‌ ಸಿರಾಜ್‌ (0 0 4 0 0 W)

15ನೇ ಓವರ್ ಮುಕ್ತಾಯ

15 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕೆಕೆಆರ್‌ ತಂಡ 7 ವಿಕೆಟ್‌ ಕಳೆದುಕೊಂಡು 90 ರನ್‌ ಗಳಿಸಿದೆ. ಇದೇ ಓವರ್‌ನಲ್ಲಿ ಪ್ಯಾಟ್‌ ಕಮಿನ್ಸ್‌ 1 ರನ್‌ ಗಳಿಸಿ ಔಟಾಗಿದ್ದಾರೆ.

ಈ ಹಂತದಲ್ಲಿ ಆರ್‌ಸಿಬಿ 2 ವಿಕೆಟ್‌ ಕಳೆದುಕೊಂಡು 111 ರನ್‌ ಗಳಿಸಿತ್ತು.

ಬೌಲರ್‌: ಕ್ರಿಸ್‌ ಮೋರಿಸ್‌ (1 0 1 1 W 1)

14ನೇ ಓವರ್ ಮುಕ್ತಾಯ: ರಸೆಲ್ ವಿಕೆಟ್ ಪತನ

14ನೇ ಓವರ್‌ನ ಮೊದಲ 3 ಎಸೆತಗಳಲ್ಲಿ 14 ರನ್‌ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಆ್ಯಂಡ್ರೆ ರಸೆಲ್‌, 5ನೇ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ.

ಸದ್ಯ ಓವರ್‌ನ ಅಂತ್ಯಕ್ಕೆ ಕೆಕೆಆರ್‌ 6 ವಿಕೆಟ್ ಕಳೆದುಕೊಂಡು 87 ರನ್ ಕಲೆಹಾಕಿದೆ.

ಬೌಲರ್‌: ಇಸುರು ಉದಾನ (4 6 4 0 W 1)

13ನೇ ಓವರ್ ಮುಕ್ತಾಯ

13 ಓವರ್‌ ಮುಕ್ತಾಯಕ್ಕೆ ಕೆಕೆಆರ್‌ 5 ವಿಕೆಟ್ ನಷ್ಟಕ್ಕೆ 71 ರನ್‌ ಗಳಿಸಿಕೊಂಡಿದೆ.

ಬೌಲರ್‌: ಕ್ರಿಸ್‌ ಮೊರಿಸ್ (0 1 0 1 0 0)

12ನೇ ಓವರ್ ಮುಕ್ತಾಯ

12ನೇ ಓವರ್‌ನ ಮೊದಲ ಎಸೆತದಲ್ಲಿ ಅನುಭವಿ ಬ್ಯಾಟ್ಸ್‌ಮನ್‌ ಎಯಾನ್‌ ಮಾರ್ಗನ್ (8) ಔಟ್‌ ಆಗಿದ್ದಾರೆ.

ಈ ಓವರ್‌ನ ಅಂತ್ಯಕ್ಕೆ ಕೆಕೆಆರ್‌ 5 ವಿಕೆಟ್‌ ಕಳೆದುಕೊಂಡು 69 ರನ್ ಗಳಿಸಿಕೊಂಡಿದೆ. ರಾಹುಲ್‌ ತ್ರಿಪಾಠಿ ಮತ್ತು ಆ್ಯಂಡ್ರೆ ರಸೆಲ್ ಕ್ರೀಸ್‌ನಲ್ಲಿದ್ದಾರೆ. ಗೆಲ್ಲಲು ಕೊನೆಯ 48 ಎಸೆತಗಳಲ್ಲಿ 126 ರನ್ ಬೇಕಾಗಿದೆ.

ಬೌಲರ್‌: ವಾಷಿಂಗ್ಟನ್ ಸುಂದರ್‌ (W 1 1 2 0 1)

11ನೇ ಓವರ್ ಮುಕ್ತಾಯ; ನಾಯಕ ಕಾರ್ತಿಕ್‌ ಪೆವಿಲಿಯನ್‌ಗೆ

ಕಳೆದ ಪಂದ್ಯದಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧ ಅಮೋಘ ಬ್ಯಾಟಿಂಗ್‌ ನಡೆಸಿ ತಮ್ಮ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದ ಕೆಕೆಆರ್‌ ನಾಯಕ ದಿನೇಶ್‌ ಕಾರ್ತಿಕ್‌ ಈ ಬಾರಿ ಕೇವಲ 1 ರನ್‌ ಗಳಿಸಿ ಔಟಾಗಿದ್ದಾರೆ.

ಸದ್ಯ 11 ಓವರ್‌ ಮುಗಿದಿದ್ದು, ಆರ್‌ಸಿಬಿ 4 ವಿಕೆಟ್‌ ಕಳೆದುಕೊಂಡು 64 ರನ್‌ ಗಳಿಸಿದೆ.

ಬೌಲರ್‌: ಯಜುವೇಂದ್ರ ಚಾಹಲ್‌ (0 1 W L1 1 0)

10ನೇ ಓವರ್ ಮುಕ್ತಾಯ: ಗಿಲ್‌ ರನೌಟ್

ಕೆಕೆಆರ್‌ನ ಭರವಸೆಯ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ 10ನೇ ಓವರ್‌ನಲ್ಲಿ ಇಲ್ಲದ ರನ್‌ ಕದಿಯಲು ಹೋಗಿ ರನೌಟ್‌ ಆಗಿದ್ದಾರೆ.

ಸದ್ಯ ಕೆಕೆಆರ್‌ ಮೊತ್ತ 3 ವಿಕೆಟ್‌ಗೆ 61 ರನ್‌ ಆಗಿದೆ.

ಬೌಲರ್‌: ವಾಷಿಂಗ್ಟನ್ ಸುಂದರ್ (1 0 W 1 4 1)

9ನೇ ಓವರ್ ಮುಕ್ತಾಯ

ಬೃಹತ್‌ ಗುರಿ ಬೆನ್ನತ್ತಿರುವ ಕೆಕೆಆರ್ ತಂಡ 6ರ ಸರಾಸರಿಯಲ್ಲಿ 2 ವಿಕೆಟ್‌ ನಷ್ಟಕ್ಕೆ 54 ರನ್‌ ಗಳಿಸಿದೆ.

ಬೌಲರ್‌: ಯಜುವೇಂದ್ರ ಚಾಹಲ್‌ (1 0 1 1 0 0)

8ನೇ ಓವರ್ ಮುಕ್ತಾಯ: ರಾಣಾ ವಿಕೆಟ್ ಪತನ

8 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕೆಕೆಆರ್‌ 2ನೇ ವಿಕೆಟ್‌ ಕಳೆದುಕೊಂಡು 51 ರನ್‌ ಗಳಿಸಿದೆ.

ಓವರ್‌ನ ಕೊನೆಯ ಎಸೆತದಲ್ಲಿ ನಿತೀಶ್‌ ರಾಣಾ (9) ವಿಕೆಟ್ ಒಪ್ಪಿಸಿದ್ದಾರೆ.

ಬೌಲರ್‌: ವಾಷಿಂಗ್ಟನ್‌ ಸುಂದರ್‌ (1 1 1 1 1 W)

7ನೇ ಓವರ್‌ ಮುಕ್ತಾಯ

ಕೆಕೆಆರ್‌ 1 ವಿಕೆಟ್‌ ನಷ್ಟಕ್ಕೆ 46 ರನ್‌ ಗಳಿಸಿದೆ. ಗಿಲ್‌ 28 ರನ್ ಗಳಿಸಿದ್ದು, ರಾಣಾ 7 ರನ್‌ ಗಳಿಸಿ ಆಡುತ್ತಿದ್ದಾರೆ.

ಬೌಲರ್‌: ಯಜುವೇಂದ್ರ ಚಾಹಲ್‌ (1 1 1 0 0 0)

6ನೇ ಓವರ್ ಮುಕ್ತಾಯ

ಪವರ್‌ ಪ್ಲೇ ಮುಕ್ತಾಯ ಆಟ ಮುಕ್ತಾಯವಾಗಿದ್ದು, ಕೆಕೆಆರ್‌ 1 ವಿಕೆಟ್‌ ನಷ್ಟಕ್ಕೆ 43 ರನ್ ಗಳಿಸಿದೆ. ನಿತೀಶ್‌ ರಾಣಾ ಮತ್ತು ಶುಭಮನ್‌ ಗಿಲ್‌ ಕ್ರೀಸ್‌ನಲ್ಲಿದ್ದಾರೆ. ಈ ಹಂತದಲ್ಲಿ ಆರ್‌ಸಿಬಿ ವಿಕೆಟ್ ‌ನಷ್ಟವಿಲ್ಲದೆ 47 ರನ್ ಗಳಿಸಿತ್ತು.

ಬೌಲರ್‌: ವಾಷಿಂಗ್ಟನ್ ಸುಂದರ್‌ (1 1 L1 1 0 0)

5ನೇ ಓವರ್ ಮುಕ್ತಾಯ

ಕೆಕೆಆರ್‌ 1 ವಿಕೆಟ್‌ ನಷ್ಟಕ್ಕೆ 39 ರನ್ ಗಳಿಸಿದೆ.

ಮೊಹಮ್ಮದ್‌ ಸಿರಾಜ್ ಈ ಓವರ್‌ನಲ್ಲಿ 16 (1 4 0 1 4 6) ರನ್‌ ಬಿಟ್ಟುಕೊಟ್ಟರು.

4ನೇ ಓವರ್ ಮುಕ್ತಾಯ: ಬ್ಯಾಂಟನ್ ಔಟ್

ನವದೀಪ್‌ ಸೈನಿ ಎಸೆದ ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಟಾಮ್‌ ಬ್ಯಾಂಟನ್‌ (8) ಔಟಾಗಿದ್ದಾರೆ.

ಬ್ಯಾಂಟನ್‌ಗೆ ಈ ಟೂರ್ನಿಯಲ್ಲಿ ಇದೇ ಮೊದಲ ಪಂದ್ಯ. ಜೊತೆಗೆ ಕೆಕೆಆರ್‌ ಪರವಾಗಿ ಆಡುತ್ತಿರುವುದೂ ಇದೇ ಮೊದಲು. ಸದ್ಯ ಕೆಕೆಅರ್‌ 1 ವಿಕೆಟ್‌ ನಷ್ಟಕ್ಕೆ 23 ರನ್‌ ಗಳಿಸಿದೆ.

3ನೇ ಓವರ್ ಮುಕ್ತಾಯ

ಕೆಕೆಆರ್ ಮೂರು ಓವರ್‌ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 16 ರನ್‌ ಗಳಿಸಿದೆ. ಗಿಲ್‌ (7) ಮತ್ತು ಬ್ಯಾಂಟನ್‌ (7) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಮೊಹಮ್ಮದ್ ಸಿರಾಜ್ (2 0 0 0 1 1)

ಇನಿಂಗ್ಸ್ ಆರಂಭಿಸಿದ ಕೆಕೆಆರ್

195 ರನ್‌ಗಳ ಗುರಿ ಎದುರು ಕೆಕೆಆರ್‌ ಇನಿಂಗ್ಸ್ ಆರಂಭಿಸಿದ್ದು, 2 ಓವರ್‌ ಅಂತ್ಯಕ್ಕೆ 12 ರನ್ ಗಳಿಸಿಕೊಂಡಿದೆ.

ಕ್ರಿಸ್‌ ಮೋರಿಸ್‌ ಎಸೆದ ಮೊದಲ ಓವರ್‌ನಲ್ಲಿ 8 ರನ್‌ ಗಳಿಸಿದ್ದ, ಶುಭಮ್‌ ಗಿಲ್‌ ಮತ್ತು ಟಾಮ್‌ ಬ್ಯಾಂಟನ್‌ ಜೋಡಿ, ನವದೀಪ್ ಸೈನಿ ಎಸೆದ 2ನೇ ಓವರ್‌ನಲ್ಲಿ 4 ರನ್‌ ಗಳಿಸಿಕೊಂಡಿದೆ.

20ನೇ ಓವರ್ ಮುಕ್ತಾಯ: ಕೆಕೆಆರ್‌ಗೆ 195 ರನ್ ಗುರಿ

ಆ್ಯಂಡ್ರೆ ರಸೆಲ್‌  ಎಸೆದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಕೊಹ್ಲಿ ಮತ್ತು ವಿಲಿಯರ್ಸ್‌ ಜೋಡಿ 17 ರನ್‌ ಕಲೆಹಾಕಿತು. ಇದರೊಂದಿಗೆ ಆರ್‌ಸಿಬಿ 2 ವಿಕೆಟ್‌ ನಷ್ಟಕ್ಕೆ 194 ರನ್‌ ಗಳಿಸಿದೆ.

ಬೌಲರ್‌: ಆಂಡ್ರೆ ರಸೆಲ್‌ (6 0 N4 2 2 1 1)

19ನೇ ಓವರ್ ಮುಕ್ತಾಯ

19 ಓವರ್‌ಗಳ ಆಟ ಮುಗಿದಿದ್ದು, ಆರ್‌ಸಿಬಿ 2 ವಿಕೆಟ್‌ಗೆ 177 ರನ್‌ ಗಳಿಸಿದೆ. ವಿಲಿಯರ್ಸ್‌ ಮತ್ತು ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಪ್ರಸಿದ್ಧ ಕೃಷ್ಣ (2 2 4 1 1 2)

18ನೇ ಓವರ್ ಮುಕ್ತಾಯ

18 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 2 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿದೆ. ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿರುವ ವಿಲಿಯರ್ಸ್ ಕೇವಲ 26 ಎಸೆತಗಳಲ್ಲಿ 56 ರನ್‌ ಬಾರಿಸಿದ್ದಾರೆ.

ಬೌಲರ್‌: ಆ್ಯಂಡ್ರೆ ರಸೆಲ್‌ (4 6 2 Wd2 1 2 0)

17ನೇ ಓವರ್ ಮುಕ್ತಾಯ

ಪ್ಯಾಟ್‌ ಕಮಿನ್ಸ್ ಎಸೆದ 17ನೇ ಓವರ್‌ನಲ್ಲಿ ಮೂರು ಭರ್ಜರಿ ಸಿಕ್ಸರ್‌ ಸಿಡಿಸಿದ ಎಬಿಡಿ ವಿಲಿಯರ್ಸ್‌ ತಂಡದ ಮೊತ್ತವನ್ನು 148ಕ್ಕೆ ಏರಿಸಿದರು.

ಇದರೊಂದಿಗೆ ಕೊಹ್ಲಿ ಮತ್ತು ವಿಲಿಯರ್ಸ್‌ ಜೋಡಿ ಕೇವಲ 28 ಎಸೆತಗಳಲ್ಲಿ 54 ರನ್‌ ಜೊತೆಯಾಟವಾಡಿದೆ.

ಬೌಲರ್‌: ಪ್ಯಾಟ್‌ ಕಮಿನ್ಸ್‌ (Wd2 6 4 0 0 6 1)

16ನೇ ಓವರ್ ಮುಕ್ತಾಯ

ಕಮಲೇಶ್‌ ನಾಗರಕೋಟಿ ಎಸೆದ 16 ಓವರ್‌ನಲ್ಲಿ ವಿಲಿಯರ್ಸ್‌ ಮತ್ತು ಕೊಹ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ‌ ಸಹಿತ 18 ರನ್‌ ಗಳಿಸಿಕೊಂಡರು. ಇದರೊಂದಿಗೆ ತಂಡದ ಮೊತ್ತ 129ಕ್ಕೆ ಏರಿದೆ.

ಬೌಲರ್: ಕಮಲೇಶ್ ನಾಗರಕೋಟಿ (2 0 6 6 0 4)

15ನೇ ಓವರ್ ಮುಕ್ತಾಯ

ಆರ್‌ಸಿಬಿ 2 ವಿಕೆಟ್‌ ನಷ್ಟಕ್ಕೆ 111 ರನ್‌ ಗಳಿಸಿಕೊಂಡಿದೆ.

ಬೌಲರ್‌: ವರುಣ್‌ ಚಕ್ರವರ್ತಿ (0 1 0 0 1 2)

14ನೇ ಓವರ್ ಮುಕ್ತಾಯ: ಶತಕ ಗಳಿಸಿದ ಆರ್‌ಸಿಬಿ

14 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿ 107 ರನ್ ಗಳಿಸಿದೆ.

ಪಡಿಕ್ಕಲ್‌ ಮತ್ತು ಫಿಂಚ್‌ ವಿಕೆಟ್ ಒಪ್ಪಿಸಿದ್ದಾರೆ. ಕೊಹ್ಲಿ ಮತ್ತು ವಿಲಿಯರ್ಸ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕಮಲೇಶ್‌ ನಾಗರಕೋಟಿ ( 1 1 1 2 2 1)

13ನೇ ಓವರ್ ಮುಕ್ತಾಯ

13 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿ 2 ವಿಕೆಟ್‌ ಕಳೆದುಕೊಂಡು 99 ರನ್‌ ಗಳಿಸಿದೆ.

47 ರನ್‌ ಗಳಿಸಿದ್ದ ಆ್ಯರನ್ ಫಿಂಚ್‌ ಕನ್ನಡಿಗ ಪ್ರಸಿದ್ಧ ಕೃಷ್ಣ ಬೌಲಿಂಗ್‌ನಲ್ಲಿ ಔಟಾಗಿದ್ದಾರೆ.

ಬೌಲರ್‌: ಪ್ರಸಿದ್ಧ ಕೃಷ್ಣ (4 W 0 0 4 1)

12ನೇ ಓವರ್ ಮುಕ್ತಾಯ

12ನೇ ಓವರ್ ಮುಕ್ತಾಯವಾಗಿದ್ದು ಆರ್‌ಸಿಬಿ 90 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.

ಫಿಂಚ್‌ ಮತ್ತು ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕಮಲೇಶ್‌ ನಾಗರಕೋಟಿ (0 1 1 0 1 1)

11ನೇ ಓವರ್ ಮುಕ್ತಾಯ

ಆರ್‌ಸಿಬಿ 1 ವಿಕೆಟ್‌ ನಷ್ಟಕ್ಕೆ 86 ರನ್‌ ಗಳಿಸಿದೆ.

ಬೌಲರ್‌: ವರುಣ್‌ ಚಕ್ರವರ್ತಿ (1 2 0 1 2 2)

10ನೇ ಓವರ್ ಮುಕ್ತಾಯ

10 ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ 1 ವಿಕೆಟ್ ನಷ್ಟಕ್ಕೆ 7.8 ಸರಾಸರಿಯಲ್ಲಿ 78 ರನ್ ಗಳಿಸಿದೆ.

ಬೌಲರ್‌: ಕಮಲೇಶ್‌ ನಾಗರಕೋಟಿ (1 1 1 1 1 1)

9ನೇ ಓವರ್ ಮುಕ್ತಾಯ

9 ಓವರ್‌ ಅಂತ್ಯಕ್ಕೆ ಆರ್‌ಸಿಬಿ 1 ವಿಕೆಟ್‌ ಕಳೆದುಕೊಂಡು 72 ರನ್‌ ಗಳಿಸಿದೆ. ಪಡಿಕ್ಕಲ್‌ ವಿಕೆಟ್‌ ಪತನದ ಬಳಿಕ ರನ್‌ ಗಳಿಕೆ ನಿಧಾನವಾಗಿದೆ.

ಬೌಲರ್: ವರುಣ್‌ ಚಕ್ರವರ್ತಿ (1 0 0 0 L1 1)

ರಸೆಲ್ 300 ವಿಕೆಟ್ ಸಾಧನೆ

ದೇವದತ್ತ ವಿಕೆಟ್‌ ಪಡೆದುಕೊಳ್ಳುವ ಮೂಲಕ ಆ್ಯಂಡ್ರೆ ರಸೆಲ್‌ ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್‌ ಪಡೆದ ಸಾಧನೆ ಮಾಡಿದರು.

ರಸೆಲ್‌ ಈ ವರೆಗೆ ಒಟ್ಟು 337 ಪಂದ್ಯಗಳ 307 ಇನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದ್ದಾರೆ.

ಐ‍ಪಿಎಲ್‌ನಲ್ಲಿ ಇದು ಅವರಿಗೆ 72ನೇ ಪಂದ್ಯದಲ್ಲಿ 62ನೇ ವಿಕೆಟ್‌ ಆಗಿದೆ.

8ನೇ ಓವರ್ ಮುಕ್ತಾಯ: ಪಡಿಕ್ಕಲ್ ವಿಕೆಟ್ ಪತನ

23 ಎಸೆತಗಳಲ್ಲಿ 32 ರನ್ ‌ಗಳಿಸಿ ಬಿರುಸಾಗಿ ಬ್ಯಾಟ್‌ ಬೀಸುತ್ತಿದ್ದ ದೇವದತ್ತ ಪಡಿಕ್ಕಲ್‌, 8ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

ಸದ್ಯ ನಾಯಕ ವಿರಾಟ್‌ ಕೊಹ್ಲಿ ಕ್ರೀಸ್‌ಗೆ ಬಂದಿದ್ದಾರೆ. 8 ಓವರ್‌ ಅಂತ್ಯಕ್ಕೆ ಆರ್‌ಸಿಬಿ 1 ವಿಕೆಟ್‌ ನಷ್ಟಕ್ಕೆ 69 ರನ್ ಗಳಿಸಿದೆ.

7ನೇ ಓವರ್‌ ಮುಕ್ತಾಯ

ಆರ್‌ಸಿಬಿ 7 ಓವರ್‌ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 58 ರನ್‌ ಗಳಿಸಿಕೊಂಡಿದೆ. ಇದರೊಂದಿಗೆ ಈ ಜೋಡಿ ಟೂರ್ನಿಯಲ್ಲಿ ಮೂರನೇ ಬಾರಿಗೆ ಅರ್ಧಶತಕದ ಜೊತೆಯಾಟವಾಡಿತು.

ಬೌಲರ್: ವರುಣ್‌ ಚಕ್ರವರ್ತಿ (1 2 2 4 1 1)

6ನೇ ಓವರ್ ಮುಕ್ತಾಯ

ಪವರ್‌ ಪ್ಲೇ ಮುಕ್ತಾಯ ಆಟ ಮುಕ್ತಾಯವಾಗಿದ್ದು, ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 47 ರನ್ ಗಳಿಸಿದೆ. ತಲಾ 23 ರನ್ ಗಳಿಸಿರುವ ಫಿಂಚ್ ಮತ್ತು ಪಡಿಕ್ಕಲ್ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಆ್ಯಂಡ್ರೆ ರಸೆಲ್‌ (0 1 1 0 0 4)

5ನೇ ಓವರ್ ಮುಕ್ತಾಯ

ಫಿಂಚ್‌ ಹಾಗೂ ದೇವದತ್ತ ನಿರಾಯಾಸವಾಗಿ ಬ್ಯಾಟ್‌ ಬೀಸುತ್ತಿದ್ದು, ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 41 ರನ್‌ ಗಳಿಸಿಕೊಂಡಿದೆ.

ಬೌಲರ್‌: ಪ್ಯಾಟ್‌ ಕಮಿನ್ಸ್‌ (L1 1 0 0 1 1)

4ನೇ ಓವರ್ ಮುಕ್ತಾಯ

ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 37 ರನ್‌ ಗಳಿಸಿದೆ. ದೇವದತ್ತ ಪಡಿಕ್ಕಲ್‌ (21) ಮತ್ತು ಆ್ಯರನ್‌ ಫಿಂಚ್ (16)‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಪ್ರಸಿದ್ಧ ಕೃಷ್ಣ (0 0 1 4 4 1)

3ನೇ ಓವರ್ ಮುಕ್ತಾಯ

3ನೇ ಓವರ್‌ನಲ್ಲಿ ಪಡಿಕ್ಕಲ್‌ 2 ಬೌಂಡರಿ ಸಹಿತ 8 ರನ್‌ ಗಳಿಸಿದರು. ತಂಡದ ಮೊತ್ತ 27 ರನ್‌ ಆಗಿದೆ.

ಬೌಲರ್: ಪ್ಯಾಟ್‌ ಕಮಿನ್ಸ್‌ (0 4 4 0 0 0)

2ನೇ ಓವರ್ ಮುಕ್ತಾಯ

ಆ್ಯರನ್‌ ಫಿಂಚ್ ಅವರು‌ ಪ್ರಸಿದ್ಧ ಕೃಷ್ಣ ಎಸೆದ 2ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಪಂದ್ಯದ ಮೊದಲ ಸಿಕ್ಸರ್‌ ಸಿಡಿಸಿದರು. ಇದರೊಂದಿಗೆ 2 ಓವರ್ ಅಂತ್ಯಕ್ಕೆ ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 19 ರನ್ ಗಳಿಸಿಕೊಂಡಿದೆ.

ಬೌಲರ್‌: ಪ್ರಸಿದ್ಧ ಕೃಷ್ಣ (1 1 1 6 1 1)

ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ

ಕನ್ನಡಿಗ ದೇವದತ್ತ ಪಡಿಕ್ಕಲ್‌ ಹಾಗೂ ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್‌ ಆ್ಯರನ್‌ ಫಿಂಚ್‌ ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ್ದಾರೆ. ಮೊದಲ ಓವರ್‌ ಬೌಲ್ ಮಾಡಿದ ಪ್ಯಾಟ್‌ ಕಮಿನ್ಸ್‌, 8 ರನ್‌ ಬಿಟ್ಟುಕೊಟ್ಟಿದ್ದಾರೆ.

(0 4 1 1 0 2)

ಆರ್‌ಸಿಬಿ ಬ್ಯಾಟಿಂಗ್‌

ಕೆಕೆಆರ್‌ ತಂಡದ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಹನ್ನೊಂದರ ಬಳಗ

ಎರಡೂ ತಂಡಗಳಲ್ಲಿ ಒಂದೊಂದು ಬದಲಾವಣೆಗಳನ್ನು ಮಾಡಲಾಗಿದೆ. ಆರ್‌ಸಿಬಿ ಯಲ್ಲಿ ಗುರುಕೀರತ್‌ ಸಿಂಗ್‌ ಮಾನ್‌ ಬದಲು ಮೊಹಮ್ಮದ್‌ ಸಿರಾಜ್‌ ಅವರು ತಂಡ ಸೇರಿಕೊಂಡಿದ್ದಾರೆ.

ಕೆಕೆಆರ್‌ನಲ್ಲಿ ನಿಯಮಬಾಹಿರ ಬೌಲಿಂಗ್ ಶೈಲಿಯ ಆರೋಪಕ್ಕೊಳಗಾಗಿರುವ ಸುನೀಲ್‌ ನರೇನ್‌ ಅವರ ಬದಲು ಟಾಮ್‌ ಬ್ಯಾಂಟನ್‌ ಕಣಕ್ಕಿಳಿಯಲಿದ್ದಾರೆ.

ಆರ್‌ಸಿಬಿ: ದೇವದತ್ತ ಪಡಿಕ್ಕಲ್‌, ಆ್ಯರನ್‌ ಫಿಂಚ್, ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್‌ (ವಿಕೆಟ್‌ ಕೀಪರ್‌), ಮೊಹಮ್ಮದ್‌ ಸಿರಾಜ್‌, ಶಿವಂ ದುಬೆ, ಕ್ರಿಸ್‌ ಮೋರಿಸ್‌, ವಾಷಿಂಗ್ಟನ್ ಸುಂದರ್‌, ಇಸುರು ಉದಾನ, ನವದೀಪ್‌ ಸೈನಿ, ಯಜುವೇಂದ್ರ ಚಾಹಲ್

ರೈಡರ್ಸ್: ಶುಭಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ನಿತೀಶ್‌ ರಾಣಾ, ಆ್ಯಂಡ್ರೆ ರಸೇಲ್‌, ಟಾಮ್‌ ಬ್ಯಾಂಟನ್‌, ದಿನೇಶ್ ಕಾರ್ತಿಕ್ (ನಾಯಕ/ವಿಕೆಟ್‌ ಕೀಪರ್‌), ಎಯಾನ್ ಮಾರ್ಗನ್, ಪ್ಯಾಟ್ ಕಮಿನ್ಸ್, ಕಮಲೇಶ್‌ ನಾಗರಕೋಟಿ, ಶಿವಂ ಮಾವಿ, ವರುಣ್‌ ಚಕ್ರವರ್ತಿ

ಇಂದು ಗೆಲುವು ಯಾರಿಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.