ADVERTISEMENT

IPL-2020 | KXIP vs SRH: ರೈಸರ್ಸ್‌ಗೆ 69 ರನ್‌ಗಳ ಗೆಲುವು

ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್ ತಂಡವು 69 ರನ್‌ ಅಂತರದ ಗೆಲುವು ಸಾಧಿಸಿತು.

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 18:42 IST
Last Updated 8 ಅಕ್ಟೋಬರ್ 2020, 18:42 IST

17ನೇ ಓವರ್‌ನಲ್ಲಿ ಆಲೌಟ್

17ನೇ ಓವರ್ ಎಸೆದ ಟಿ.ನಟರಾಜನ್‌ ಅವರಿಗೆ ಶೇಲ್ಡನ್‌ ಕಾರ್ಟ್ರೆಲ್‌ ಹಾಗೂ ಅರ್ಶದೀಪ್‌ ಸಿಂಗ್‌ ವಿಕೆಟ್‌ ಒಪ್ಪಿಸುವುದರೊಂದಿಗೆ ಕಿಂಗ್ಸ್‌ ಇಲವೆನ್‌ ಇನಿಂಗ್ಸ್‌ಗೆ ತೆರೆ ಬಿದ್ದಿದೆ.

ಈ ತಂಡ 16.5ನೇ ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 132 ರನ್‌ ಗಳಿಸಿತು. ಇದರೊಂದಿಗೆ 69 ರನ್ ಅಂತರದ ಗೆಲುವು ಸಾಧಿಸಿದ ಸನ್‌ರೈಸರ್ಸ್,‌ ಮೂರು ಜಯದೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮೊದಲೆರಡು ಸ್ಥಾನಗಳಲ್ಲಿವೆ. ಕೋಲ್ಕತ್ತ ನೈಟ್‌ರೈಡರ್ಸ್‌ ನಾಲ್ಕರಲ್ಲಿದೆ.

ಇತ್ತ ಆಡಿರುವ ಆರು ಪಂದ್ಯಗಳಲ್ಲಿ 5ನೇ ಸೋಲು ಅನುಭವಿಸಿದ ಕಿಂಗ್ಸ್‌ ಕೊನೆಯ ಸ್ಥಾನದಲ್ಲೇ ಉಳಿಯಿತು.

ADVERTISEMENT

16ನೇ ಓವರ್‌ ಮುಕ್ತಾಯ

16ನೇ ಓವರ್‌ ಮುಕ್ತಾಯಕ್ಕೆ ಕಿಂಗ್ಸ್‌ 8 ವಿಕೆಟ್ ಕಳೆದುಕೊಂಡು 130 ರನ್‌ ಗಳಿಸಿದೆ.

8ನೇ ವಿಕೆಟ್‌ ಪತನ

ಕೇವಲ 37 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 77 ರನ್‌ ಸಿಡಿಸಿದ್ದ ನಿಕೋಲಸ್‌ ಪೂರನ್‌ ಹಾಗೂ ಮೊಹಮ್ಮದ್‌ ಶಮಿ 15ನೇ ಓವರ್‌ನಲ್ಲಿ ಔಟಾಗಿದ್ದಾರೆ.

ಇದರೊಂದಿಗೆ ಕಿಂಗ್ಸ್‌ ತಂಡ 15ನೇ ಓವರ್‌ನ ಅಂತ್ಯಕ್ಕೆ 8ನೇ ವಿಕೆಟ್‌ 126 ರನ್‌ ಗಳಿಸಿದೆ.

14ನೇ ಓವರ್ ಮುಕ್ತಾಯ; 6ನೇ ವಿಕೆಟ್ ಪತನ

ಖಲೀಲ್‌ ಅಹಮದ್‌ ಎಸೆದ 14ನೇ ಓವರ್‌ನ‌ 5ನೇ ಎಸೆತದಲ್ಲಿ ಮುಜೀಬ್‌ ಉರ್‌ ರಹಮಾನ್‌ (1) ಔಟಾದರು.

ಸದ್ಯ ತಂಡದ ಮೊತ್ತ 6 ವಿಕೆಟ್‌ಗೆ 126 ರನ್‌ ಅಗಿದೆ.

5ನೇ ವಿಕೆಟ್‌ ಪತನ

13ನೇ ಓವರ್‌ನಲ್ಲಿ ರಶೀದ್ ಖಾನ್‌ ಎಸೆದ ಗೂಗ್ಲಿಗೆ ಮನ್‌ದೀಪ್‌ ಸಿಂಗ್‌ ಕ್ಲೀನ್‌ ಬೌಲ್ಡ್ ಅದರು.

ಸದ್ಯ 13 ಓವರ್‌ ಮುಗಿದಿದ್ದು, ಕಿಂಗ್ಸ್ 5 ವಿಕೆಟ್‌ಗೆ 117 ರನ್‌ ಗಳಿಸಿದೆ.

12ನೇ ಓವರ್‌ ಮುಕ್ತಾಯ

ತಂಡದ ಮೊತ್ತ 4 ವಿಕೆಟ್‌ ನಷ್ಟಕ್ಕೆ 112 ರನ್‌ ಆಗಿದೆ.

ಬೌಲರ್‌: ಸಂದೀಪ್‌ ಶರ್ಮಾ

11ನೇ ಓವರ್‌ ಮುಕ್ತಾಯ

ಟಿ. ನಟರಾಜನ್‌ ಎಸೆದ ಈ ಓವರ್‌ನಲ್ಲಿ ಗ್ಲೇನ್‌ ಮ್ಯಾಕ್ಸ್‌ವೆಲ್ ರನೌಟ್‌ ಅದರು.

11 ಓವರ್ ಅಂತ್ಯಕ್ಕೆ ಕಿಂಗ್ಸ್‌ ತಂಡ 4 ವಿಕೆಟ್‌ ಕಳೆದುಕೊಂಡು 105 ರನ್‌ ಗಳಿಸಿದೆ.

10ನೇ ಓವರ್ ಮುಕ್ತಾಯ

10 ಓವರ್‌ಗಳ ಆಟ ಮುಕ್ತಾಯವಾಗಿದ್ದು ಕಿಂಗ್ಸ್‌ 3 ವಿಕೆಟ್‌ ನಷ್ಟಕ್ಕೆ 96 ರನ್‌ ಗಳಿಸಿದೆ.

ನಿಕೋಲಸ್‌ ಪೂರನ್‌ (58) ಮತ್ತು ಮ್ಯಾಕ್ಸ್‌ವೆಲ್‌ (5) ಕ್ರೀಸ್‌ನಲ್ಲಿದ್ದಾರೆ.

ಈ ಹಂತದಲ್ಲಿ ರೈಸರ್ಸ್‌ ವಿಕೆಟ್ ನಷ್ಟವಿಲ್ಲದೆ 100 ರನ್‌ ಗಳಿಸಿತ್ತು.

ಬೌಲರ್‌: ರಶೀದ್ ಖಾನ್‌

ಪೂರನ್ ವೇಗದ ಅರ್ಧಶತಕ

ಸಂಕಷ್ಟದ ಸಂದರ್ಭದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುತ್ತಿರುವ ನಿಕೋಲಸ್‌ ಪೂರನ್‌ ಕೇವಲ 17ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದರು.

ಕಾಶ್ಮೀರ ಸ್ಪಿನ್ನರ್‌ ಅಬ್ದುಲ್‌ ಸಮದ್‌ ಎಸೆದ 9ನೇ ಓವರ್‌ನಲ್ಲಿ ಒಂದು ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ (6,4,6,6,6,0) 28 ರನ್ ಬಾರಿಸುವುದರೊಂದಿಗೆ ಈ ಬಾರಿಯ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ದಾಖಲಿಸಿದರು.

2018ರಲ್ಲಿ ಕೆ.ಎಲ್‌.ರಾಹುಲ್‌ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವುದು ಈವರೆಗಿನ ದಾಖಲೆಯಾಗಿದೆ.

8ನೇ ಓವರ್‌ ಮುಕ್ತಾಯ

8ನೇ ಓವರ್‌ ಬೌಲಿಂಗ್‌ ಮಾಡಿದ ರಶೀದ್‌ ಖಾನ್‌ ಕೇವಲ 2 ರನ್‌ ಬಿಟ್ಟುಕೊಟ್ಟರು.

ಸದ್ಯ ತಂಡದ ಮೊತ್ತ 3 ವಿಕೆಟ್‌ಗೆ 63 ಆಗಿದೆ.

7ನೇ ಓವರ್‌ ಮುಕ್ತಾಯ

ಅಭಿಷೇಕ್‌ ಶರ್ಮಾ ಎಸೆದ 7ನೇ ಓವರ್‌ನಲ್ಲಿ ಕಿಂಗ್ಸ್‌ ನಾಯಕ ರಾಹುಲ್‌ ವಿಕೆಟ್‌ ಒಪ್ಪಿಸಿದ್ದಾರೆ. ಈ ಓವರ್‌ನಲ್ಲಿ ಪೂರನ್‌ ಎರಡು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು.

ಸದ್ಯ 7 ಓವರ್‌ ಮುಗಿದಿದ್ದು, ತಂಡದ ಮೊತ್ತ 3 ವಿಕೆಟ್‌ ನಷ್ಟಕ್ಕೆ 61 ರನ್‌ ಆಗಿದೆ.

6ನೇ ಓವರ್‌ ಮುಕ್ತಾಯ

ಪವರ್‌ ಪ್ಲೇ (6 ಓವರ್‌) ಮುಕ್ತಾಯವಾಗಿದ್ದು, ರಾಹುಲ್‌ ಪಡೆ 2 ವಿಕೆಟ್‌ ನಷ್ಟಕ್ಕೆ 45 ರನ್‌ ಗಳಿಸಿದೆ.

ರಾಹುಲ್‌ ಮತ್ತು ನಿಕೋಲಸ್‌ ಪೂರನ್‌ ಕ್ರೀಸ್‌ನಲ್ಲಿದ್ದಾರೆ.

ಈ ಹಂತದಲ್ಲಿ ರೈಸರ್ಸ್‌ ವಿಕೆಟ್‌ ನಷ್ಟವಿಲ್ಲದೆ 58 ರನ್‌ ಗಳಿಸಿತ್ತು.

ಬೌಲರ್‌: ಟಿ.ನಟರಾಜನ್‌

5ನೇ ಓವರ್‌ ಮುಕ್ತಾಯ

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಪ್ರಬ್ಸಿಮ್ರನ್‌ ಸಿಂಗ್‌ ಕೇವಲ 11 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

ಐದು ಓವರ್‌ ಮುಕ್ತಾಯವಾಗಿದ್ದು ತಂಡದ ಮೊತ್ತ 2 ವಿಕೆಟ್‌ಗೆ 37 ರನ್‌ ಆಗಿದೆ.

ಬೌಲರ್‌: ಖಲೀಲ್‌ ಅಹಮದ್‌

4ನೇ ಓವರ್‌ ಮುಕ್ತಾಯ

ನಾಲ್ಕು ಓವರ್‌ಗಳ ಆಟ ಮುಗಿದಿದ್ದು ಕಿಂಗ್ಸ್‌ 1 ವಿಕೆಟ್‌ 27 ರನ್‌ ಗಳಿಸಿದೆ.

ಬೌಲರ್‌: ಟಿ.ನಟರಾಜನ್‌

3ನೇ ಓವರ್‌ ಮುಕ್ತಾಯ

ಮೂರು ಓವರ್‌ಗಳ ಆಟ ಮುಕ್ತಾಯವಾಗಿದ್ದು ಕಿಂಗ್ಸ್‌ ಇಲವೆನ್‌ ತಂಡ 1 ವಿಕೆಟ್‌ ಕಳೆದುಕೊಂಡು 20 ರನ್ ಗಳಿಸಿದೆ.

ನಾಯಕ ಕೆಎಲ್‌ ರಾಹುಲ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಮಯಂಕ್‌ ಅಗರವಾಲ್‌ (6 ಎಸೆತಗಳಲ್ಲಿ 9 ರನ್) 2ನೇ ಓವರ್‌ನಲ್ಲಿ ರನೌಟ್‌ ಆಗಿದ್ದಾರೆ.

ಕಿಂಗ್ಸ್‌ ಬ್ಯಾಟ್ಸ್‌ಮನ್‌ಗಳು ಸಂದೀಪ್‌ ಶರ್ಮಾ ಎಸೆದ 1 ಮತ್ತು 3ನೇ ಓವರ್‌ಗಳಲ್ಲಿ ಕ್ರಮವಾಗಿ 9 ಹಾಗೂ 6 ರನ್‌ ಗಳಿಸಿದ್ದು, ಖಲೀಲ್‌ ಅಹಮದ್‌ ಹಾಕಿದ 2ನೇ ಓವರ್‌ನಲ್ಲಿ 5 ರನ್‌ ಗಳಿಸಿಕೊಂಡಿದ್ದಾರೆ.

ಕಿಂಗ್ಸ್‌ ಗೆಲುವಿಗೆ 202 ರನ್ ಗುರಿ

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 201 ರನ್ ಗಳಿಸಿದೆ.

ರೈಸರ್ಸ್‌ ಪರ ಇನಿಂಗ್ಸ್‌ ಆರಂಭಿಸಿದ ನಾಯಕ ಡೇವಿಡ್‌ ವಾರ್ನರ್‌ ಹಾಗೂ ಜಾನಿ ಬೈರ್ಸ್ಟ್ರೋವ್‌ ಜೋಡಿ ಅಮೋಘ ಜೊತೆಯಾಟ ನೀಡಿದರು. ಬಿರುಸಿನ ಬ್ಯಾಟಿಂಗ್‌ ನಡೆಸಿದ ಜಾನಿ ಕೇವಲ 55 ಎಸೆತಗಳಲ್ಲಿ 97 ರನ್‌ ಗಳಿಸಿದರು. ಕಿಂಗ್ಸ್‌ ವಿರುದ್ಧ ಆಡಿದ್ದ ಕಳೆದ 8 ಇನಿಂಗ್ಸ್‌ಗಳಲ್ಲಿಯೂ 50 ಪ್ಲಸ್‌ ರನ್‌ ಗಳಿಸಿದ್ದ ವಾರ್ನರ್‌, ಈ ಬಾರಿಯೂ ಅರ್ಧಶತಕ ಸಿಡಿಸಿದರು.

5ನೇ ವಿಕೆಟ್‌ ಪತನ

15.1 ನೇ ಓವರ್‌ನಲ್ಲಿ ಮೊದಲ ವಿಕೆಟ್‌ ಪಡೆದ ಪಂಜಾಬ್‌‌ ತಂಡ ನಂತರದ 14 ಎಸೆತಗಳಲ್ಲಿ ಮತ್ತೆ ನಾಲ್ಕು ವಿಕೆಟ್‌ಗಳನ್ನು ಉರುಳಿಸಿತು.

19ನೇ ಓವರ್‌ನ ಮೊದಲ ಎಸೆತದಲ್ಲಿ ಪ್ರಿಯಂ ಗರ್ಗ್‌ ಔಟಾದರು.

ಸದ್ಯ 19 ಓವರ್‌ಗಳ ಆಟ ಮುಗಿದಿದ್ದು ರೈಸರ್ಸ್‌ 5 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿದೆ.

ಬೌಲರ್‌: ಅರ್ಶದೀಪ್‌ ಸಿಂಗ್‌

ಬಿಷ್ಣೋಯಿಗೆ ಮೂರನೇ ವಿಕೆಟ್

18ನೇ ಓವರ್‌ ಎಸೆದ ಬಿಷ್ಣೋಯಿ, ಅಬ್ದುಲ್‌ ಸಮದ್‌ ಅವರನ್ನು ಔಟ್‌ ಮಾಡಿದರು.

ಸದ್ಯ ರೈಸರ್ಸ್ ಮೊತ್ತ 4 ವಿಕೆಟ್‌ಗೆ 175ರನ್‌ ಆಗಿದೆ.

17ನೇ ಓವರ್‌ ಮುಕ್ತಾಯ

ಅರ್ಶದೀಪ್‌ ಸಿಂಗ್‌ ಎಸೆದ ಈ ಓವರ್‌ನ ಮೊದಲ ಎಸೆತದಲ್ಲಿ ಕನ್ನಡಿಗ ಮನೀಷ್‌ ಪಾಂಡೆ (1) ಬೌಲರ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿಕೊಂಡರು.

ಸದ್ಯ ಓವರ್‌ ಮುಕ್ತಾಯವಾಗಿದ್ದು, ರೈಸರ್ಸ್‌ 3 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿದೆ.

36 ಓವರ್‌ ಬಳಿಕ ವಿಕೆಟ್

ಕಿಂಗ್ಸ್‌ ವಿರುದ್ಧ ಸತತ 9ನೇ ಅರ್ಧಶತಕ ಬಾರಿಸಿದ ಡೇವಿಡ್‌ ವಾರ್ನರ್‌ (52) ಇನಿಂಗ್ಸ್‌ನ 15.1ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಕಿಂಗ್ಸ್‌ ತಂಡ ಬರೋಬ್ಬರಿ 36 ಓವರ್‌ಗಳ ‌ಬಳಿಕ ಮೊದಲ ವಿಕೆಟ್‌ ಪಡೆದು ಸಮಾಧಾನ ಪಟ್ಟುಕೊಂಡಿತು,

ಕಿಂಗ್ಸ್‌ ಬೌಲರ್‌ಗಳು ಅಕ್ಟೋಬರ್‌ 1 ರಂದು ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ 16.1 ನೇ ಓವರ್‌ನಲ್ಲಿ ಪಡೆದದ್ದೇ ಕೊನೆಯ ವಿಕೆಟ್‌. ಅಲ್ಲಿಂದಾಚೆಗೆ ಬರೋಬ್ಬರಿ 36.4 ಓವರ್‌ ಎಸೆದಿದ್ದರು. ಅಕ್ಟೋಬರ್‌ 4 ರಂದು ಕಿಂಗ್ಸ್‌ ಪಡೆ ಚೆನ್ನೈ ಸೂಪರ್‌ಕಿಂಗ್ಸ್‌ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಕಿಂಗ್ಸ್‌ 179 ರನ್‌ ಗುರಿ ನೀಡಿತ್ತು. ಈ ಗುರಿಯನ್ನು ಚೆನ್ನೈ ತಂಡ 17.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ಮುಟ್ಟಿತ್ತು.

ರವಿ ಬಿಷ್ಣೋಯಿ ಎಸೆದ ಇದೇ ಓವರ್‌ನ 4ನೇ ಎಸೆತದಲ್ಲಿ ಜಾನಿ ಬೈರ್ಸ್ಟ್ರೋವ್‌ (97) ವಿಕೆಟ್‌ ಒಪ್ಪಿಸಿದರು. ಶತಕದ ಹೊಸ್ತಿಲಿನಲ್ಲಿದ್ದ ಅವರು, ಎಲ್‌ಬಿ ಬಲೆಗೆ ಬಿದ್ದರು. ಈ ಓವರ್‌ನಲ್ಲಿ ರವಿ ನೀಡಿದ್ದು ಕೇವಲ 1 ರನ್‌.

ಸದ್ಯ 16 ಓವರ್‌ಗಳು ಮುಗಿದಿದ್ದು, ರೈಸರ್ಸ್‌ 2 ವಿಕೆಟ್‌ ಕಳೆದುಕೊಂಡು 161 ರನ್‌ ಕಲೆಹಾಕಿದೆ.

ವಾರ್ನರ್‌ಗೆ ಸತತ 9ನೇ ಅರ್ಧಶತಕ

ಕಿಂಗ್ಸ್‌ ಇಲವೆನ್ ತಂಡದ ವಿರುದ್ಧ ಸತತ 9ನೇ ಇನಿಂಗ್ಸ್‌ನಲ್ಲಿಯೂ ವಾರ್ನರ್‌ ಅರ್ಧಶತಕ ಸಿಡಿಸಿದರು.

ಕಳೆದ ಎಂಟು ಇನಿಂಗ‌್ಸ್‌ಗಳಲ್ಲಿ ಡೇವಿಡ್‌ ಕ್ರಮವಾಗಿ, 58(41), 81(52), 59(31), 52(41), 70(54)*, 51(27), 70(62)*, 81(56)‌ ರನ್‌ ಬಾರಿಸಿದ್ದರು.

ಸದ್ಯ 14 ಓವರ್‌ಗಳ ಆಟ ಮುಗಿದಿದ್ದು, ರೈಸರ್ಸ್‌ ವಿಕೆಟ್‌ ನಷ್ಟವಿಲ್ಲದೆ 154 ರನ್ ಗಳಿಸಿದೆ.

ಬೌಲರ್‌: ಮುಜೀಬ್‌ ಉರ್‌ ರೆಹಮಾನ್‌

13ನೇ ಓವರ್‌ ಮುಕ್ತಾಯ

ಜಾನಿ ಹಾಗೂ ಡೇವಿಡ್‌ ಬಿರುಸಿನ ಬ್ಯಾಟಿಂಗ್‌ ಮುಂದುವರಿಸಿದ್ದು, ರೈಸರ್ಸ್ ತಂಡ ವಿಕೆಟ್‌ ನಷ್ಟವಿಲ್ಲದೆ 138 ರನ್‌ ಗಳಿಸಿದೆ.

ಬೌಲರ್‌: ಮೊಹಮ್ಮದ್‌ ಶಮಿ

12ನೇ ಓವರ್‌ ಮುಕ್ತಾಯ

12 ಓವರ್‌ಗಳ ಆಟ ಮುಗಿದಿದ್ದು ರೈಸರ್ಸ್‌ ತಂಡ ವಿಕೆಟ್‌ ನಷ್ಟವಿಲ್ಲದೆ 130 ರನ್‌ ಕೆಲಹಾಕಿದೆ. ಬೈರ್ಸ್ಟ್ರೋವ್‌ 39 ಎಸೆತಗಳಲ್ಲಿ 74 ಮತ್ತು ವಾರ್ನರ್‌ 34 ಎಸೆತಗಳಲ್ಲಿ 46 ರನ್ ಗಳಿಸಿ ಅಡುತ್ತಿದ್ದಾರೆ.

ಬೌಲರ್‌: ಅರ್ಶದೀಪ್‌ ಸಿಂಗ್‌

1 1 4 6 6 2: ಹೀಗಿತ್ತು 11ನೇ ಓವರ್‌

ಗ್ಲೇನ್‌ ಮ್ಯಾಕ್ಸ್‌ವೆಲ್‌ ಎಸೆದ 11ನೇ ಓವರ್‌ನಲ್ಲಿ ಜಾನಿ ಮತ್ತು ವಾರ್ನರ್‌ ಜೋಡಿ 1 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 19 ರನ್‌ ಚಚ್ಚಿದರು.

ಸದ್ಯ ತಂಡದ ಮೊತ್ತ 119ರನ್‌ ಗಳಿಸಿದೆ.

ಜಾನಿ ಅರ್ಧಶತಕ; ರೈಸರ್ಸ್‌ ಶತಕ

ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿರುವ ಜಾನಿ ಬೈಸ್ಟ್ರೋವ್‌ ತಾವೆದುರಿಸಿದ 28ನೇ ಎಸೆತದಲ್ಲಿ ಅರ್ಧಶತಕ ಗಳಿಸಿಕೊಂಡರು. ಅವರ ಇನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳಿವೆ.

10 ಓವರ್‌ಗಳ ಆಟ ಮುಗಿದಿದ್ದು, ಈ ವೇಳೆ ರೈಸರ್ಸ್‌ ತಂಡ ವಿಕೆಟ್‌ ನಷ್ಟವಿಲ್ಲದೆ 100 ರನ್‌ ಕೆಲಹಾಕಿದೆ.

ಇನ್ನೊಂದು ತುದಿಯಲ್ಲಿರುವ ಡೇವಿಡ್‌ 40 ರನ್‌ ಗಳಿಸಿ ಅಡುತ್ತಿದ್ದಾರೆ.

ಬೌಲರ್‌: ಅರ್ಶದೀಪ್‌ ಸಿಂಗ್‌

9ನೇ ಓವರ್‌ ಮುಕ್ತಾಯ

9ನೇ ಓವರ್‌ ಮುಗಿದಿದ್ದು, ರೈಸರ್ಸ್‌ 10.33 ಸರಾಸರಿಯಲ್ಲಿ ವಿಕೆಟ್‌ ನಷ್ಟವಿಲ್ಲದೆ 93 ರನ್‌ ಗಳಿಸಿದೆ.

ಬೌಲರ್‌: ಮುಜೀಬ್‌ ಉರ್‌ ರೆಹಮಾನ್

8ನೇ ಓವರ್‌ ಮುಕ್ತಾಯ

8ನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದ ಪ್ರಮುಖ ಸ್ಪಿನ್ನರ್‌ ರವಿ ಬಿಷ್ಣೋಯಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 18 ರನ್ ಬಿಟ್ಟುಕೊಟ್ಟರು.

ಸದ್ಯ ರೈಸರ್ಸ್ ತಂಡದ ಮೊತ್ತ ವಿಕೆಟ್‌ ನಷ್ಟವಿಲ್ಲದೆ 82 ರನ್‌ ಆಗಿದೆ.

ವಾರ್ನರ್‌ 30 ರನ್‌ ಮತ್ತು ಜಾನಿ 46 ರನ್‌ ಗಳಿಸಿ ಅಡುತ್ತಿದ್ದಾರೆ.

7ನೇ ಓವರ್‌ ಮುಕ್ತಾಯ

ತಂಡದ ಮೊತ್ತ ವಿಕೆಟ್‌ ನಷ್ಟವಿಲ್ಲದೆ 64 ರನ್.

ಬೌಲರ್‌: ಗ್ಲೇನ್‌ ಮ್ಯಾಕ್ಸ್‌ವೆಲ್‌

6ನೇ ಓವರ್‌ ಮುಕ್ತಾಯ

ಪವರ್‌ ಪ್ಲೇ (6 ಓವರ್‌) ಮುಕ್ತಾಯವಾಗಿದ್ದು, ವಾರ್ನರ್‌ ಪಡೆ ವಿಕೆಟ್‌ ನಷ್ಟವಿಲ್ಲದೆ 58 ರನ್‌ ಗಳಿಸಿದೆ.

ಆರಂಭಿಕರಿಬ್ಬರೂ ತಲಾ 26 ರನ್‌ ಗಳಿಸಿ ಆಡುತ್ತಿದ್ದಾರೆ.

ಬೌಲರ್‌: ಮುಜೀಬ್‌ ಉರ್‌ ರೆಹಮಾನ್‌

5ನೇ ಓವರ್‌ ಮುಕ್ತಾಯ

ಓವರ್‌ನ ಎರಡನೇ ಎಸೆತದಲ್ಲಿ ಜಾನಿ ನೀಡಿದ್ದ ಕಷ್ಟದ ಕ್ಯಾಚ್‌ ಅನ್ನು ಹಿಡಿತಕ್ಕೆ ಪಡೆಯಲು ಕೆಎಲ್‌ ರಾಹುಲ್‌ ವಿಫಲರಾದರು. ಮಿಡ್‌ ಆಪ್‌ನಲ್ಲಿ ಅದ್ಭುತವಾಗಿ ಜಿಗಿದರಾದರೂ ಚೆಂಡು ರಾಹುಲ್‌ ಕೈಗೆ ಸಿಗಲಿಲ್ಲ.

ಸದ್ಯ ಓವರ್ ಮುಗಿದಿದ್ದು, ರೈಸರ್ಸ್ ವಿಕೆಟ್‌ ನಷ್ಟವಿಲ್ಲದೆ‌ ಅರ್ಧಶತಕ (52) ಪೂರೈಸಿದೆ.

ಬೌಲರ್‌: ಮೊಹಮ್ಮದ್‌ ಶಮಿ

4ನೇ ಓವರ್‌ ಮುಕ್ತಾಯ

4ನೇ ಓವರ್‌ ಮುಕ್ತಾಯವಾಗಿದ್ದು ರೈಸರ್ಸ್‌ 41 ರನ್‌ ಗಳಿಸಿದೆ. ಶೇಲ್ಡನ್‌ ಕಾಟ್ರೆಲ್ ಎಸೆದ ಈ ಓವರ್‌ನಲ್ಲಿ ಮೂರು ಬೌಂಡರಿ ಸಹಿತ ಒಟ್ಟು 15 ರನ್‌ ಬಂದಿತು.

3ನೇ ಓವರ್‌ ಮುಕ್ತಾಯ

ಸನ್‌ರೈಸರ್ಸ್‌ 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 26 ರನ್‌ ಗಳಿಸಿದೆ. ವಾರ್ನರ್‌ (15) ಮತ್ತು ಜಾನಿ (6) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಮೊಹಮ್ಮದ್ ಶಮಿ

2ನೇ ಓವರ್‌ ಮುಕ್ತಾಯ

ರೈಸರ್ಸ್‌ ವಿಕೆಟ್‌ ನಷ್ಟವಿಲ್ಲದೆ 19 ರನ್‌ ಗಳಿಸಿದೆ. ವಾರ್ನರ್‌ (9) ಮತ್ತು ಜಾನಿ (5) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಮುಜೀಬ್‌ ಉರ್‌ ರೆಹಮಾನ್‌

ಕಳೆದ ಎಂಟು ಇನಿಂಗ್ಸ್‌ಗಳಲ್ಲಿ 50+ ರನ್‌

ಕಿಂಗ್ಸ್‌ ಇಲವೆನ್‌ ವಿರುದ್ಧ ಆಡಿರುವ ಕಳೆದ ಎಂಟು ಪಂದ್ಯಗಳಲ್ಲಿ ಡೇವಿಡ್‌ ವಾರ್ನರ್ ಅರ್ಧಶತಕ ಬಾರಿಸಿದ್ದಾರೆ.

58(41), 81(52), 59(31), 52(41), 70(54)*, 51(27), 70(62)*, 81(56)‌ ಇದು ಕಳೆದ ಎಂಟು ಇನಿಂಗ‌್ಸ್‌ಗಳಲ್ಲಿ ಡೇವಿಡ್‌ ಬಾರಿಸಿದ ರನ್‌ ವಿವರ.

ಸದ್ಯ ಮೊದಲ ಓವರ್‌ ಮುಗಿದಿದ್ದು, ರೈಸರ್ಸ್‌ ವಿಕೆಟ್ ನಷ್ಟವಿಲ್ಲದೆ 13 ರನ್‌ ಗಳಿಸಿದೆ.

ಇನಿಂಗ್ಸ್‌ ಆರಂಭಿಸಿದ ರೈಸರ್ಸ್‌

ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ನಾಯಕ ಡೇವಿಡ್‌ ವಾರ್ನರ್ ಮತ್ತು ಜಾನಿ ಬೈರ್ಸ್ಟ್ರೋವ್‌‌ ಇನಿಂಗ್ಸ್‌ ಆರಂಭಿಸಿದ್ದಾರೆ.

ಶೇಲ್ಡನ್‌ ಕಾರ್ಟ್ರೆಲ್ ಮೊದಲ ಓವರ್‌ ಎಸೆಯುತ್ತಿದ್ದಾರೆ.

ಆಡುವ ಬಳಗದಲ್ಲಿ ಬದಲಾವಣೆ

ಕೆಎಲ್‌ ರಾಹುಲ್‌ ಬಳಗದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಕಳೆದ ಪಂದ್ಯದಲ್ಲಿ ಆಡಿದ್ದ ಕ್ರಿಸ್‌ ಜೋರ್ಡನ್‌, ಅಬ್ರಾರ್‌ ಖಾಜಿ ಮತ್ತು ಸರ್ಫರಾಜ್‌ ಖಾನ್ ಅವರ ಬದಲು ಪ್ರಬ್ಸಿಮ್ರನ್‌ ಸಿಂಗ್‌, ಅರ್ಶದೀಪ್‌ ಸಿಂಗ್‌ ಹಾಗೂ ಮುಜೀಬ್‌ ಉರ್‌ ರೆಹ್‌ಮಾನ್‌ ಸ್ಥಾನ ಪಡೆದಿದ್ದಾರೆ.

ವಾರ್ನರ್‌ ಪಡೆಯಲ್ಲಿ ಸಿದ್ಧಾರ್ಥ್‌ ಕೌಲ್‌ಗೆ ಕೋಕ್ ನೀಡಲಾಗಿದ್ದು, ಖಲೀಲ್ ಅಹಮದ್‌ ಕಣಕ್ಕಿಳಿಯಲಿದ್ದಾರೆ.

ಹನ್ನೊಂದರ ಬಳಗ

ಕಿಂಗ್ಸ್‌ ಇಲವೆನ್‌ ಪಂಜಾಬ್‌: ಕೆಎಲ್‌ ರಾಹುಲ್‌ (ನಾಯಕ), ಮಯಂಕ್‌ ಅಗರವಾಲ್‌, ಮನ್‌ದೀಪ್‌ ಸಿಂಗ್‌, ನಿಕೋಲಸ್‌ ಪೂರನ್‌, ಪ್ರಬ್ಸಿಮ್ರನ್‌ ಸಿಂಗ್‌ (ವಿಕೆಟ್‌ ಕೀಪರ್‌), ಗ್ಲೇನ್‌ ಮ್ಯಾಕ್ಸ್‌ವೆಲ್‌, ರವಿ ಬಿಷ್ಣೋಯಿ, ಮುಜೀಬ್‌ ಉರ್‌ ರಹ್‌ಮಾನ್‌, ಅರ್ಶದೀಪ್‌ ಸಿಂಗ್‌, ಮೊಹಮ್ಮದ್‌ ಶಮಿ, ಶೇಲ್ಡನ್ ಕಾರ್ಟ್ರೆಲ್‌

ಸನ್‌ರೈಸರ್ಸ್‌ ಹೈದರಾಬದ್‌: ಡೇವಿಡ್‌ ವಾರ್ನರ್‌ (ನಾಯಕ), ಜಾನಿ ಬೈರ್ಸ್ಟ್ರೋವ್‌ (ವಿಕೆಟ್‌ ಕೀಪರ್‌), ಮನೀಷ್ ಪಾಂಡೆ, ಕೇನ್‌ ವಿಲಿಯಮ್ಸನ್‌, ಪ್ರಿಯಂ ಗರ್ಗ್‌, ಅಭಿಷೇಕ್‌ ಶರ್ಮಾ, ಅಬ್ದುಲ್‌ ಸಮದ್‌, ರಶೀದ್‌ ಖಾನ್‌, ಸಂದೀಪ್‌ ಶರ್ಮಾ, ಕೆ.ಖಲೀಲ್‌ ಅಹಮದ್‌, ಟಿ.ನಟರಾಜನ್‌

ರೈಸರ್ಸ್‌ ವೇಗಿಯ ಬಗ್ಗೆ ಸಂಜಯ್‌ ಮೆಚ್ಚುಗೆ

ಸನ್‌ರೈಸರ್ಸ್‌ ಬ್ಯಾಟಿಂಗ್‌

ಕನ್ನಡಿಗ ಕೆಎಲ್‌ ರಾಹುಲ್‌ ನಾಯಕರಾಗಿರುವ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡದ ವಿರುದ್ಧ ಇಂದು ನಡೆಯಲಿರುವ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್‌, ಬ್ಯಾಟಿಂಗ್‌ ಆಯ್ರುಕೊಂಡಿದ್ದಾರೆ.

Facebook Poll: ಗೆಲುವು ಯಾರಿಗೆ?

ಜಯದ ಕನವರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.