ಕೆಕೆಆರ್ ಪರ ಎಯಾನ್ ಮಾರ್ಗನ್ ಮತ್ತು ದಿನೇಶ್ ಕಾರ್ತಿಕ್ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಿದರು. ರೈಸರ್ಸ್ ಪರ ರಶೀದ್ ಖಾನ್ ಬೌಲಿಂಗ್ ಮಾಡಿದರು.
ಮಾರ್ಗನ್ ಎದುರಿಸಿದ ಮೊದಲ ಎಸೆತದಲ್ಲಿ ರನ್ ಬರಲಿಲ್ಲ. 2ನೇ ಎಸೆತದಲ್ಲಿ ಒಂದು ರನ್ ಗಳಿಸಿಕೊಂಡರು.
ಮೂರನೇ ಎಸೆತವನ್ನು ದಿನೇಶ್ ಎದುರಿಸಿದರಾದರೂ ಮತ್ತೆ ರನ್ ಬರಲಿಲ್ಲ. ಆದರೆ ನಾಲ್ಕನೇ ಎಸೆತದಲ್ಲಿ 2 ಇತರೆ ರನ್‌ಗಳು ಬಂದವು.
ಹೀಗಾಗಿ ಕೆಕೆಆರ್ ಜಯದ ನಗೆ ಬೀರಿತು.
ಇದರೊಂದಿಗೆ ಕೆಕೆಆರ್ ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿದರೆ, ರೈಸರ್ಸ್ 6ನೇ ಸೋಲು ಅನುಭವಿಸಿತು.
ಸೂಪರ್ ಓವರ್‌ನಲ್ಲಿ ಸನ್‌ರೈಸರ್ಸ್ ಪರ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್ಸ್ಟ್ರೋವ್ ಬ್ಯಾಟಿಂಗ್‌ಗೆ ಮಾಡಿದರು. ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ವಾರ್ನರ್ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು.
ಬಳಿಕ ಕ್ರೀಸ್‌ಗೆ ಬಂದ ಅಬ್ದುಲ್ ಸಮದ್, ಎರಡನೇ ಎಸೆತದಲ್ಲಿ 2 ರನ್ ಗಳಿಸಿದರು. ಮೂರನೇ ಎಸೆತದಲ್ಲಿ ಅವರೂ ಬೌಲ್ಡ್ ಆದರು.
ಇದರೊಂದಿಗೆ ರೈಸರ್ಸ್ ಆಟಕ್ಕೆ ತೆರೆ ಬಿದ್ದಿದ್ದು, ಕೆಕೆಆರ್ ತಂಡ ಗೆಲ್ಲಲು ಕೇವಲ 3 ರನ್ ಗಳಿಸಬೇಕಿದೆ.
ಬೌಲರ್: ಲುಕಿ ಫರ್ಗ್ಯೂಸನ್ (W 2 W)
ಡೇವಿಡ್ ವಾರ್ನರ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಎಸ್‌ಎಚ್‌ಆರ್–ಕೆಕೆಆರ್ ಪಂದ್ಯ ಸೂಪರ್ ಓವರ್‌ಗೆ ಸಾಗಿದೆ.
ಆ್ಯಂಡ್ರೆ ರಸೆಲ್ ಎಸೆದ ಕೊನೆಯ ಓವರ್‌ನಲ್ಲಿ ಸನ್‌ರೈಸರ್ಸ್‌ಗೆ 18 ರನ್ ಬೇಕಾಗಿತ್ತು. ಈ ಓವರ್‌ನಲ್ಲಿ ಮೂರು ಬೌಂಡರಿಗಳನ್ನು ಬಾರಿಸಿದ ವಾರ್ನರ್, ತಮ್ಮ ತಂಡ 17 ರನ್ ಗಳಿಸಿಕೊಳ್ಳಲು ನೆರವಾದರು. ಹೀಗಾಗಿ ಪಂದ್ಯ ಸೂಪರ್ ಓವರ್‌ಗೆ ಸಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ರೈಡರ್ಸ್ 5 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತ್ತು. ಇದೀಗ ರೈಸರ್ಸ್ ಕೂಡ 6 ವಿಕೆಟ್‌ಗಳನ್ನು ಕಳೆದುಕೊಂಡು ಇಷ್ಟೇ ರನ್ ಗಳಿಸಿದೆ.
ಇದು ಈ ಬಾರಿ ಸೂಪರ್‌ಓವರ್‌ಗೆ ಸಾಗಿದ ಮೂರನೇ ಪಂದ್ಯ.
ಬೌಲರ್: ಆ್ಯಂಡ್ರೆ ರಸೆಲ್ (N 1 4 4 4 2 L1)
19 ಓವರ್‌ಗಳ ಅಂತ್ಯಕ್ಕೆ ರೈಸರ್ಸ್ 6 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದೆ. ಉಳಿದಿರುವ ಒಂದು ಓವರ್‌ನಲ್ಲಿ ಗೆಲ್ಲಲು 18 ರನ್ ಬೇಕಾಗಿದೆ.
ಈ ಓವರ್‌ನ ಕೊನೆ ಎಸೆತದಲ್ಲಿ ಅಬ್ದುಲ್ ಸಮದ್ ಬಲವಾಗಿ ಬಾರಿಸಿದ ಚೆಂಡನ್ನು ಲುಕಿ ಫರ್ಗ್ಯೂಸನ್ ಮತ್ತು ಶುಭಮನ್ ಗಿಲ್ ಅಮೋಘ ರೀತಿಯಲ್ಲಿ ಹಿಡಿತಕ್ಕೆ ಪಡೆದರು. ಹೀಗಾಗಿ ಸಮದ್ ವಿಕೆಟ್ ಕಳೆದುಕೊಳ್ಳಬೇಕಾಯಿತು.
ಬೌಲಿಂಗ್: ಶಿವಂ ಮಾವಿ (4 1 4 1 2 W)
18 ಓವರ್‌ಗಳ ಆಟ ಮುಕ್ತಾಯವಾಗಿದ್ದು ರೈಸರ್ಸ್ 5 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿದೆ. ಉಳಿದಿರುವ 2 ಓವರ್‌ಗಳಲ್ಲಿ ಗೆಲ್ಲಲು 30 ರನ್ ಗಳಿಸಬೇಕಿದೆ.
ಬೌಲರ್: ಲುಕಿ ಫರ್ಗ್ಯೂಸನ್ (0 2 0 1 2 2)
17 ಓವರ್‌ನ ಅಂತ್ಯಕ್ಕೆ ರೈಸರ್ಸ್ 5 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿದೆ.
ಬೌಲರ್: ವರುಣ್ ಚಕ್ರವರ್ತಿ (2 1 0 4 1 2)
16 ಓವರ್ ಅಂತ್ಯಕ್ಕೆ ಸನ್‌ರೈಸರ್ಸ್ 5 ವಿಕೆಟ್ ಕಳೆದುಕೊಂಡು 117 ರನ್ ಗಳಿಸಿದೆ.
ವಿಜಯ್ ಶಂಕರ್ ಈ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ,
ಬೌಲರ್: ಪ್ಯಾಟ್ ಕಮಿನ್ಸ್ (0 W 2 0 6 0)
ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್, ಇಂದು ಕೋಲ್ಕತ್ತ ನೈಟ್‌ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 10 ರನ್ ಗಳಿಸಿದ್ದ ವೇಳೆ ಐದು ಸಾವಿರ ರನ್ ಕಲೆಹಾಕಿದ ಸಾಧನೆ ಮಾಡಿದರು.
ವಾರ್ನರ್‌ಗೆ ಐಪಿಎಲ್‌ನಲ್ಲಿ ಇದು 135ನೇ ಪಂದ್ಯ. ಹೀಗಾಗಿ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎಂಬ ಶ್ರೇಯವೂ ಅವರದ್ದಾಯಿತು. ಮಾತ್ರವಲ್ಲದೆ ಟೂರ್ನಿಯಲ್ಲಿ ಇದುವರೆಗೆ ವಾರ್ನರ್ ಹೊರತುಪಡಿಸಿ ಇನ್ಯಾವ ವಿದೇಶಿ ಆಟಗಾರನೂ ಈ ಸಾಧನೆ ಮಾಡಿಲ್ಲ ಎಂಬುದು ವಿಶೇಷ.
ಈ ಮೊದಲು ಭಾರತದ ವಿರಾಟ್ ಕೊಹ್ಲಿ, ಸುರೇಶ್ ರೈನಾ ಮತ್ತು ರೋಹಿತ್ ಶರ್ಮಾ ಗಳಿಸಿಕೊಂಡಿದ್ದರು. ಕೊಹ್ಲಿ ತಮ್ಮ 165ನೇ ಪಂದ್ಯದಲ್ಲಿ, ರೋಹಿತ್ 177ನೇ ಇನಿಂಗ್ಸ್ ಹಾಗೂ ರೋಹಿತ್ ಶರ್ಮಾ 192ನೇ ಇನಿಂಗ್ಸ್‌ನಲ್ಲಿ 5 ಸಾವಿರ ರನ್ ಗಳಿಸಿಕೊಂಡಿದ್ದರು.
15 ಓವರ್ ಅಂತ್ಯಕ್ಕೆ ಸನ್‌ರೈಸರ್ಸ್ 4 ವಿಕೆಟ್ ಕಳೆದುಕೊಂಡು 109 ರನ್ ಗಳಿಸಿದೆ.
ಬೌಲರ್: ಕುಲದೀಪ್ ಯಾದವ್ ( Wd 1 2 1 2 1 1)
14 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಸನ್‌ರೈಸರ್ಸ್ 100 ರನ್ ಗಳಿಸಿದೆ. ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಉಳಿದಿರುವ 6 ಓವರ್‌ಗಳಲ್ಲಿ ಗೆಲ್ಲಲು 64 ರನ್ ಗಳಿಸಬೇಕಾಗಿದೆ.
ಬೌಲರ್: ಪ್ಯಾಟ್ ಕಮಿನ್ಸ್ (L4 1 0 1 4 1)
13 ಓವರ್ ಅಂತ್ಯಕ್ಕೆ ರೈಸರ್ಸ್ 4 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿದೆ.
ಬೌಲರ್: ಕುಲದೀಪ್ ಯಾದವ್ (1 0 0 2 1 0)
12ನೇ ಓವರ್‌ಗಳ ಆಟ ಮುಕ್ತಾಯವಾಗಿದ್ದು, ರೈಸರ್ಸ್ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡು 84 ರನ್ ಗಳಿಸಿದೆ. ಸದ್ಯ ನಾಯಕ ವಾರ್ನರ್ ಮತ್ತು ವಿಜಯ್ ಶಂಕರ್ ಕ್ರೀಸ್‌ನಲ್ಲಿದ್ದಾರೆ.
ಮನೀಷ್ ಪಾಂಡೆ (6) ಇದೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.
ಬೌಲರ್: ಲುಕಿ ಫರ್ಗ್ಯೂಸನ್ (1 L1 W 1 2 0)
ಸನ್‌ರೈಸರ್ಸ್ 3 ವಿಕೆಟ್‌ಗೆ 80 ರನ್ ಗಳಿಸಿದೆ.
ಬೌಲರ್: ಕುಲದೀಪ್ ಯಾದವ್ (L1 1 2 0 1 1)
10 ಓವರ್‌ಗಳ ಅಂತ್ಯಕ್ಕೆ ಸನ್‌ರೈಸರ್ಸ್ ತಂಡದ ಮೊತ್ತ 3 ವಿಕೆಟ್‌ಗೆ 74 ರನ್ ಆಗಿದೆ. 36 ರನ್ ಗಳಿಸಿದ್ದ ಜಾನಿ ಬೈರ್ಸ್ಟ್ರೋವ್ ಈ ಓವರ್‌ನಲ್ಲಿ ಔಟಾಗಿದ್ದಾರೆ.
ಸದ್ಯ ನಾಯಕ ಡೇವಿಡ್ ವಾರ್ನರ್ ಮತ್ತು ಕನ್ನಡಿಗ ಮನೀಷ್ ಪಾಂಡೆ ಕ್ರೀಸ್‌ನಲ್ಲಿದ್ದಾರೆ.
ಈ ಹಂತದಲ್ಲಿ ಕೆಕೆಆರ್ 1 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿತ್ತು.
ಬೌಲರ್: ವರುಣ್ ಚಕ್ರವರ್ತಿ (0 W 2 1 1 0)
9 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಹೈದರಾಬಾದ್ ತಂಡ 2 ವಿಕೆಟ್ ಕಳೆದುಕೊಂಡು 70ರನ್ ಗಳಿಸಿದೆ.
4 ರನ್ ಗಳಿಸಿದ್ದ ಪ್ರಿಯಂ ಗರ್ಗ್ ಈ ಓವರ್‌ನಲ್ಲಿ ಔಟಾದರು.
ಸದ್ಯ ಬೈರ್ಸ್ಟ್ರೋವ್ ಮತ್ತು ಡೇವಿಡ್ ವಾರ್ನದ್ ಕ್ರೀಸ್‌ನಲ್ಲಿದ್ದಾರೆ.
ಬೌಲರ್: ಲುಕಿ ಫರ್ಗ್ಯೂಸನ್ (1 1 0 W 0 0)
8 ಓವರ್ ಅಂತ್ಯಕ್ಕೆ ರೈಸರ್ಸ್ ಮೊತ್ತ 1 ವಿಕೆಟ್‌ಗೆ 68 ರನ್ ಆಗಿದೆ.
ಬೌಲರ್: ವರುಣ್ ಚಕ್ರವರ್ತಿ (1 1 1 1 4 0)
ಆರು ಓವರ್‌ಗಳ ಆಟ ಮುಕ್ತಾಯವಾಗಿದ್ದು, ಸನ್‌ರೈಸರ್ಸ್ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿದೆ.
ವಿಲಿಯಮ್ಸನ್ (29) ಮತ್ತು ಬೈರ್ಸ್ಟ್ರೋವ್ (28) ಕ್ರೀಸ್‌ನಲ್ಲಿದ್ದಾರೆ.
ಈ ಹಂತದಲ್ಲಿ ಕೆಕೆಆರ್ 1 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿತ್ತು.
ಬೌಲರ್: ಶಿವಂ ಮಾವಿ (0 0 1 4 1 W)
ರೈಸರ್ಸ್ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 46 ರನ್ ಗಳಿಸಿದೆ.
ಬೌಲರ್: ಪ್ಯಾಟ್ ಕಮಿನ್ಸ್ (2 4 0 1 0 4)
ನಾಲ್ಕು ಓವರ್‌ಗಳ ಅಂತ್ಯಕ್ಕೆ ಸನ್‌ರೈಸರ್ಸ್ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೆ 35 ರನ್ ಆಗಿದೆ.
ಬೌಲರ್: ಆಂಡ್ರೆ ರಸೆಲ್ (4 0 1 0 4 4)
ಕೋಲ್ಕತ್ತ ನೀಡಿದ ಸವಾಲಿನ ಗುರಿ ಎದುರು ಬ್ಯಾಟಿಂಗ್ ಆರಂಭಿಸಿರುವ ಸನ್‌ರೈಸರ್ಸ್ ತಂಡ ಮೂರು ಓವರ್‌ಗಳ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದೆ.
ಕೇನ್ ವಿಲಿಯಮ್ಸನ್ (10) ಮತ್ತು ಜಾನಿ ಬೈರ್ಸ್ಟ್ರೋವ್ (12) ಕ್ರೀಸ್‌ನಲ್ಲಿದ್ದಾರೆ.
ಪ್ಯಾಟ್ ಕಮಿನ್ಸ್ ಎಸೆದ ಮೊದಲ ಓವರ್‌ನಲ್ಲಿ 2 ರನ್, ಶಿವಂ ಮಾವಿ ಎಸೆದ 2ನೇ ಓವರ್‌ನಲ್ಲಿ 10 ರನ್ ಮತ್ತು ವರುಣ್ ಚಕ್ರವರ್ತಿ ಹಾಕಿದ 3ನೇ ಓವರ್‌ನಲ್ಲಿ 10 ರನ್ ಬಂದಿದೆ.
ದಿನೇಶ್ ಕಾರ್ತಿಕ್ ಹಾಗೂ ಎಯಾನ್ ಮಾರ್ಗನ್ ಜೋಡಿ ಕೊನೆಯ ಓವರ್‌ನಲ್ಲಿ 16 ರನ್ ಬಾರಿಸಿತು. ಹೀಗಾಗಿ ಕೆಕೆಆರ್ ತಂಡದ ಮೊತ್ತ ನಿಗದಿತ 20 ಓವರ್‌ಗಳಲ್ಲಿ 163 ರನ್ ಕಲೆಹಾಕಿತು.
ಮಾರ್ಗನ್ ಕೊನೆ ಎಸೆತದಲ್ಲಿ ಔಟಾದರು.
ಬೌಲರ್: ಬಾಸಿಲ್ ಥಂಪಿ (2 4 2 6 2 W)
19 ಓವರ್‌ಗಳ ಅಂತ್ಯಕ್ಕೆ ಕೆಕೆಆರ್ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡು 147 ರನ್ ಗಳಿಸಿದೆ.
ಬೌಲರ್: ಟಿ.ನಟರಾಜನ್ (4 0 1 2 L1 6)
18 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕೆಕೆಆರ್ 4 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ.
ಬೌಲರ್: ಸಂದೀಪ್ ಶರ್ಮಾ (1 2 1 1 6 1)
17 ಓವರ್‌ನ ಅಂತ್ಯಕ್ಕೆ ರೈಡರ್ಸ್ 4 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿದೆ. ಮಾಜಿ ನಾಯಕ ದಿನೇಶ್ ಕಾರ್ತಿಕ್ ಮತ್ತು ನಾಯಕ ಎಯಾನ್ ಮಾರ್ಗನ್ ಕ್ರೀಸ್‌ನಲ್ಲಿದ್ದಾರೆ.
ಬೌಲರ್: ಬಾಸಿಲ್ ಥಂಪಿ (0 1 0 4 1 4)
ಕೆಕೆಆರ್ ತಂಡದ ಮೊತ್ತ 4 ವಿಕೆಟ್‌ಗೆ 111 ರನ್ ಆಗಿದೆ.
ಬೌಲರ್: ಸಂದೀಪ್ ಶರ್ಮಾ (1 1 1 1 1 1)
15 ಓವರ್‌ಗಳ ಅಂತ್ಯಕ್ಕೆ ಕೆಕೆಆರ್ ತಂಡ 4 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿದೆ. ಬ್ಯಾಟಿಂಗ್‌ನಲ್ಲಿ ಲಯದ ಹುಡುಕಾಟದಲ್ಲಿರುವ ಆ್ಯಂಡ್ರೆ ರಸೆಲ್ ಈ ಓವರ್‌ನಲ್ಲಿ ಕೇವಲ 9 ರನ್ ಗಳಿಸಿ ಔಟಾಗಿದ್ದಾರೆ.
ಬೌಲರ್: ಟಿ.ನಟರಾಜನ್ (N1 4 L1 1 0 1 W)
ಕೆಕೆಆರ್ 3 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ.
ಬೌಲರ್: ರಶೀದ್ ಖಾನ್ (0 1 1 1 0 0)
12ನೇ ಓವರ್‌ನಲ್ಲಿ ಶುಭಮನ್ ಗಿಲ್ ವಿಕೆಟ್ ಪತನದ ಬೆನ್ನಲ್ಲೇ ನಿತೀಶ್ ರಾಣಾ (29) ಅವರೂ ಪೆವಿಲಿಯನ್ ಸೇರಿಕೊಂಡಿದ್ದಾರೆ. ಅವರು, ವಿಜಯ್ ಶಂಕರ್ ಎಸೆದ 13ನೇ ಓವರ್‌ನ ಮೊದಲ ಎಸೆತದಲ್ಲಿ ಔಟಾಗಿದ್ದಾರೆ.
5ನೇ ಕ್ರಮಾಂಕದಲ್ಲಿ ನಾಯಕ ಎಯಾನ್ ಮಾರ್ಗನ್ ಕ್ರೀಸ್‌ಗೆ ಬಂದಿದ್ದಾರೆ.
ಸದ್ಯ 13 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕೆಕೆಆರ್ ಮೊತ್ತ 3 ವಿಕೆಟ್‌ಗೆ 93 ರನ್ ಆಗಿದೆ.
ಬೌಲರ್: ವಿಜಯ್ ಶಂಕರ್ (W 0 0 0 4 1)
36 ರನ್ ಗಳಿಸಿದ್ದ ಶುಭಮನ್ ಗಿಲ್, 12ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಸದ್ಯ ಕೆಕೆಆರ್ ತಂಡದ ಮೊತ್ತ 2 ವಿಕೆಟ್‌ಗೆ 88 ರನ್ ಆಗಿದೆ. ಆಲ್ರೌಂಡರ್ ಆ್ಯಂಡ್ರೆ ರಸೆಲ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಇಳಿದಿದ್ದಾರೆ.
ಬೌಲರ್: ರಶೀದ್ ಖಾನ್ (0 6 1 W 0 1)
ಕೆಕೆಆರ್ 1 ವಿಕೆಟ್‌ಗೆ 80 ರನ್ ಗಳಿಸಿದೆ.
ಬೌಲರ್: ವಿಜಯ್ ಶಂಕರ್ ( 1 0 0 0 1 1)
10 ಓವರ್‌ಗಳ ಅಂತ್ಯಕ್ಕೆ ಕೆಕೆಆರ್ ಮೊತ್ತ 1 ವಿಕೆಟ್‌ಗೆ 77 ರನ್ ಆಗಿದೆ.
ಬೌಲರ್: ರಶೀದ್ ಖಾನ್ (1 2 1 4 4 1)
9 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕೋಲ್ಕತ್ತ ತಂಡ 1 ವಿಕೆಟ್ ಕಳೆದುಕೊಂಡು 64 ರನ್ ಗಳಿಸಿದೆ. ಗಿಲ್ (32) ಮತ್ತು ರಾಣಾ (9) ಕ್ರೀಸ್‌ನಲ್ಲಿದ್ದಾರೆ.
ಬೌಲರ್: ವಿಜಯ್ ಶಂಕರ್ (0 0 4 1 1 1)
ಕೆಕೆಆರ್ 1 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದೆ.
ಬೌಲರ್: ರಶೀದ್ ಖಾನ್ (0 0 1 0 2 1)
7 ಓವರ್‌ಗಳ ಅಂತ್ಯಕ್ಕೆ ಕೆಕೆಆರ್ 53 ರನ್ ಗಳಿಸಿದೆ.
ಬೌಲರ್: ವಿಜಯ್ ಶಂಕರ್ (0 0 0 0 4 1)
ಆರು ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕೆಕೆಆರ್ 1 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿದೆ.
23 ರನ್ ಬಾರಿಸಿದ್ದ ರಾಹುಲ್ ತ್ರಿಪಾಠಿ ಈ ಪವರ್ ಪ್ಲೇನ ಕೊನೆಯ ಎಸೆತದಲ್ಲಿ ಔಟಾಗಿದ್ದಾರೆ. 25 ರನ್ ಗಳಿಸಿರುವ ಗಿಲ್ ಜೊತೆಗೆ ನಿತೀಶ್ ರಾಣಾ ಕ್ರೀಸ್‌ಗೆ ಬಂದಿದ್ದಾರೆ.
ಬೌಲರ್: ಟಿ.ನಟರಾಜನ್ (0 0 1 4 1 W)
ಬಾಸಿಲ್ ಥಂಪಿ ಎಸೆದ ಐದನೇ ಓವರ್‌ನ ಮೊದಲ ಮೂರು ಎಸೆತಗಳನ್ನು ಶುಭಮನ್ ಗಿಲ್ ಬೌಂಡರಿಗೆ ಅಟ್ಟಿದರು. ಇದರೊಂದಿಗೆ ಈ ಓವರ್‌ನಲ್ಲಿ 14 ರನ್‌ಗಳು ಹರಿದು ಬಂದವು.
ತಂಡದ ಮೊತ್ತ ಸದ್ಯ ವಿಕೆಟ್ ನಷ್ಟವಿಲ್ಲದೆ 42 ಆಗಿದೆ,
ಬೌಲರ್: ಬಾಸಿಲ್ ಥಂಪಿ (4 4 4 1 1 0)
ನಾಲ್ಕು ಓವರ್‌ಗಳ ಅಂತ್ಯಕ್ಕೆ ಕೆಕೆಆರ್ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೆ 28 ರನ್ ಆಗಿದೆ.
ಬೌಲರ್: ಟಿ.ನಟರಾಜನ್ (1 6 1 0 1 4)
ಮೂರು ಓವರ್‌ಗಳ ಅಂತ್ಯಕ್ಕೆ ಎಯಾನ್ ಮಾರ್ಗನ್ ಪಡೆ 15 ರನ್ ಗಳಿಸಿದೆ. ಗಿಲ್ (5) ಮತ್ತು ತ್ರಿಪಾಠಿ (10) ಕ್ರೀಸ್‌ನಲ್ಲಿದ್ದಾರೆ.
ಬೌಲರ್: ಸಂದೀಪ್ ಶರ್ಮಾ (0 0 1 0 1 1)
2 ಓವರ್ ಅಂತ್ಯಕ್ಕೆ ಕೆಕೆಆರ್ 12 ರನ್ ಗಳಿಸಿದೆ.
ಬೌಲರ್: ಬಾಸಿಲ್ ಥಂಪಿ (1 0 1 1 1 2)
ಜಾನಿ ಬೈರ್ಸ್ಟ್ರೋವ್ ಮತ್ತು ನಾಯಕ ಡೇವಿಡ್ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ಪರ ಇನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಓವರ್‌ನ ಅಂತ್ಯಕ್ಕೆ ಈ ತಂಡ ವಿಕೆಟ್ ನಷ್ಟವಿಲ್ಲದೆ, 6 ರನ್ ಗಳಿಸಿದೆ.
ಬೌಲರ್: ಸಂದೀಪ್ ಶರ್ಮಾ (0 1 4 0 1 0)
ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.