ಶಶಾಂಕ್ ಸಿಂಗ್
ಅಹಮದಾಬಾದ್: ‘ನನ್ನ ಶತಕದ ಬಗ್ಗೆ ಯೋಚನೆ ಮಾಡಬೇಡ. ಪ್ರತಿ ಎಸೆತವನ್ನೂ ಬೌಂಡರಿ ಅಥವಾ ಸಿಕ್ಸರ್ ಹೊಡಿ ಎಂದು ಶ್ರೇಯಸ್ ಅಯ್ಯರ್ ಅವರೇ ನನಗೆ ಹೇಳಿದ್ದರು. ತಮ್ಮ ಶತಕಕ್ಕೆ ಕೇವಲ 3 ರನ್‌ಗಳಷ್ಟೇ ಬೇಕಾದಾಗಲೂ ಈ ರೀತಿ ಹೇಳಲು ದೊಡ್ಡ ಮನಸ್ಸು ಮತ್ತು ದಿಟ್ಟತನ ಇರಬೇಕಾಗುತ್ತದೆ. ಅದು ಶ್ರೇಯಸ್ ಅವರಲ್ಲಿದೆ’ ಎಂದು ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಶಶಾಂಕ್ ಸಿಂಗ್ ಹೇಳಿದರು.
ಮಂಗಳವಾರ ಗುಜರಾತ್ ಟೈಟನ್ಸ್ ಎದುರಿನ ಪಂದ್ಯದಲ್ಲಿ ಶ್ರೇಯಸ್ ಮತ್ತು ಶಶಾಂಕ್ ಅಬ್ಬರದ ಬ್ಯಾಟಿಂಗ್ ಮೂಲಕ ರನ್ ಸೂರೆ ಮಾಡಿದ್ದರು.
ಇನಿಂಗ್ಸ್‌ನ ಕೊನೆಯ ಓವರ್ ಆರಂಭವಾದಾಗ ಶ್ರೇಯಸ್ 97 ರನ್ ಹೊಡೆದು ನಾನ್‌ಸ್ಟ್ರೈಕ್ ಭಾಗದಲ್ಲಿದ್ದರು. ಆ ಓವರ್‌ನಲ್ಲಿ ಶಶಾಂಕ್ ಐದು ಬೌಂಡರಿ ಮತ್ತು ಎರಡು ರನ್ ಗಳಿಸಿದ್ದರು. ಇದರಿಂದಾಗಿ ಶ್ರೇಯಸ್ ಶತಕ ಪೂರೈಸ
ಲಾಗಲಿಲ್ಲ.
ಈ ಕುರಿತು ಪಂದ್ಯದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಶಾಂಕ್, ‘ಪ್ರಾಮಾಣಿಕವಾಗಿ ಹೇಳು ತ್ತೇನೆ. ನಾನು ಸ್ಕೋರ್ ಬೋರ್ಡ್ ನೋಡಿರಲಿಲ್ಲ.
ಕೊನೆಯ ಓವರ್‌ನ ಮೊದಲ ಎಸೆತವನ್ನು ಬೌಂಡರಿಗೆ ಬಾರಿಸಿದ ನಂತರ ಸ್ಕೋರ್‌ನತ್ತ ಗಮನ ಹರಿಸಿದೆ. ಆಗ ಶ್ರೇಯಸ್ 97 ರನ್ ಗಳಿಸಿರುವುದು ಗೊತ್ತಾಯಿತು. ನಾನು ಏನೂ ಹೇಳಲಿಲ್ಲ. ಅವರೇ ನನ್ನ ಬಳಿ ಬಂದರು. ಪ್ರತಿ ಎಸೆತವನ್ನೂ ಬೌಂಡರಿ ದಾಟಿಸು, ನನ್ನ ಶತಕದ ಬಗ್ಗೆ ಯೋಚನೆ ಬೇಡ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.