ಕ್ರಿಕೆಟ್
(ಸಾಂಕೇತಿಕ ಚಿತ್ರ)
ನಾಗ್ಪುರ: ರೆಸ್ಟ್ ಆಫ್ ಇಂಡಿಯಾ ತಂಡವನ್ನು 214 ರನ್‌ಗಳಿಗೆ ಕಟ್ಟಿಹಾಕಿದ ವಿದರ್ಭ ತಂಡವು ಇರಾನಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಇನಿಂಗ್ಸ್ನಲ್ಲಿ 128 ರನ್ ಮುನ್ನಡೆ ಪಡೆಯಿತು.
ಮೂರನೇ ದಿನವಾದ ಶುಕ್ರವಾರ 5 ವಿಕೆಟ್ ನಷ್ಟಕ್ಕೆ 142 ರನ್‌ಗಳಿಗೆ ಆಟ ಆರಂಭಿಸಿದ ರೆಸ್ಟ್ ಆಫ್ ಇಂಡಿಯಾ ತಂಡವು ವಿದರ್ಭ ಬೌಲರ್‌ಗಳ ಸಂಘಟಿತ ದಾಳಿ ಎದುರಿಸುವಲ್ಲಿ ಎಡವಿತು. ನಾಯಕ ರಜತ್ ಪಾಟೀದಾರ್ (66; 125ಎ, 4x10) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ವೇಗಿ ಯಶ್ ಠಾಕೂರ್ (66ಕ್ಕೆ4) ಅವರು ಪಾಟೀದಾರ್ ಬಳಗದ ಮಧ್ಯಮ ಕ್ರಮಾಂಕಕ್ಕೆ ಬಲವಾದ ಪೆಟ್ಟುಕೊಟ್ಟರು. ಎಡಗೈ ಸ್ಪಿನ್ನರ್‌ಗಳಾದ ಪಾರ್ಥ್ ರೇಖಡೆ (24ಕ್ಕೆ2) ಹಾಗೂ ಹರ್ಷ್ ದುಬೆ (58ಕ್ಕೆ2) ಅವರು ಯಶ್ ಅವರಿಗೆ ಉತ್ತಮ ಬೆಂಬಲ ನೀಡಿದರು.
ಎರಡನೇ ಇನಿಂಗ್ಸ್ ಆರಂಭಿಸಿದ ಅಕ್ಷಯ್ ವಾಡ್ಕರ್ ಪಡೆಯು ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗಳಿಗೆ 96 ರನ್ ಗಳಿಸಿದ್ದು, 224 ರನ್ ಮುನ್ನಡೆಯೊಂದಿಗೆ ಉತ್ತಮ ಸ್ಥಿತಿಯಲ್ಲಿದೆ. ಧ್ರುವ್ ಶೋರೆ (ಔಟಾಗದೇ 24) ಹಾಗೂ ಡ್ಯಾನಿಷ್ ಮಾಲೆವಾರ್ (ಔಟಾಗದೇ 16) ಕ್ರೀಸ್‌ನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರು: ವಿದರ್ಭ: 101.4 ಓವರ್‌ಗಳಲ್ಲಿ 342. ರೆಸ್ಟ್ ಆಫ್ ಇಂಡಿಯಾ: 69.5 ಓವರ್‌ಗಳಲ್ಲಿ 214 (ರಜತ್ ಪಾಟೀದಾರ್ 66, ಯಶ್ ಠಾಕೂರ್ 66ಕ್ಕೆ4, ಪಾರ್ಥ್ ರೇಖಡೆ 24ಕ್ಕೆ2, ಹರ್ಷ್ ದುಬೆ 58ಕ್ಕೆ2) ಎರಡನೇ ಇನಿಂಗ್ಸ್: ವಿದರ್ಭ: 36 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 96 (ಅಮಾನ್ ಮೋಖಡೆ 37, ಧ್ರುವ್ ಶೋರೆ ಔಟಾಗದೇ 24, ಡ್ಯಾನಿಷ್ ಮಾಲೆವಾರ್ ಔಟಾಗದೇ 16, ಗುರ್ಪ್ರೀತ್ ಬ್ರಾರ್ 11ಕ್ಕೆ1, ಮಾನವ್ ಸುತಾರ್ 35ಕ್ಕೆ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.