ADVERTISEMENT

ಭಾರತಕ್ಕೆ ಗೆಲುವಿನ ಹಂಬಲ

ಪಿಟಿಐ
Published 20 ಆಗಸ್ಟ್ 2019, 20:26 IST
Last Updated 20 ಆಗಸ್ಟ್ 2019, 20:26 IST

ನವದೆಹಲಿ: ಭಾರತದ 19 ವರ್ಷದೊಳಗಿನವರ ಬಾಲಕರ ಫುಟ್‌ಬಾಲ್‌ ತಂಡದವರು ವನಾಟುವಿನ ಪೋರ್ಟ್‌ವಿಲ್ಲಾದಲ್ಲಿ ನಡೆಯುತ್ತಿರುವ ಒಎಫ್‌ಸಿ ಡೆವಲಪ್‌ಮೆಂಟ್‌ ಟೂರ್ನಿಯಲ್ಲಿ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.

ಬುಧವಾರದ ಹಣಾಹಣಿಯಲ್ಲಿ ಭಾರತದ ಕಿರಿಯರ ತಂಡವು ನ್ಯೂ ಕ್ಯಾಲಿಡೋನಿಯಾ ವಿರುದ್ಧ ಸೆಣಸಲಿದೆ.

ಆರಂಭಿಕ ಪಂದ್ಯದಲ್ಲಿ ಆತಿಥೇಯ ವನಾಟು ವಿರುದ್ಧ ಗೆದ್ದು ಮನೋಬಲ ಹೆಚ್ಚಿಸಿಕೊಂಡಿರುವ ಭಾರತ ತಂಡ ಕ್ಯಾಲಿಡೋನಿಯಾ ತಂಡವನ್ನೂ ಮಣಿಸುವ ಹುಮ್ಮಸ್ಸಿನಲ್ಲಿದೆ.

ADVERTISEMENT

‘ಎರಡು ವರ್ಷಗಳ ಹಿಂದೆ ನಡೆದಿದ್ದ 17 ವರ್ಷದೊಳಗಿನವರ ಫಿಫಾ ವಿಶ್ವಕಪ್‌ನಲ್ಲಿ ಕ್ಯಾಲಿಡೋನಿಯಾ ತಂಡ ಉತ್ತಮ ಸಾಮರ್ಥ್ಯ ತೋರಿತ್ತು. ಆ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಎದುರಾಳಿಗಳನ್ನು ಮಣಿಸಲು ನಮ್ಮ ಆಟಗಾರರು ಶಕ್ತಿಮೀರಿ ಪ್ರಯತ್ನಿಸಲಿದ್ದಾರೆ’ ಎಂದು ಭಾರತ ತಂಡದ ಕೋಚ್‌ ಫ್ಲಾಯ್ಡ್‌ ಪಿಂಟೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.