ADVERTISEMENT

19 ವರ್ಷದೊಳಗಿನ ಮಹಿಳಾ ಟಿ20: ರಾಜ್ಯ ತಂಡ ಆಯ್ಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 16:08 IST
Last Updated 16 ಸೆಪ್ಟೆಂಬರ್ 2024, 16:08 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಬೆಂಗಳೂರು: ಆಲ್‌ರೌಂಡರ್ ಮಿಥಿಲಾ ವಿನೋದ್ ಅವರು ಬಿಸಿಸಿಐ 19 ವರ್ಷದೊಳಗಿನವರ ಮಹಿಳಾ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಟೂರ್ನಿಯು ಚೆನ್ನೈನಲ್ಲಿ ಅಕ್ಟೋಬರ್ 1ರಿಂದ 8ರವರೆಗೆ ನಡೆಯಲಿದೆ.

ಸೋಮವಾರ 15 ಮಂದಿ ಆಟಗಾರ್ತಿಯರ ತಂಡವನ್ನು ಪ್ರಕಟಿಸಲಾಗಿದೆ.

ತಂಡ: ಮಿಥಿಲಾ ವಿನೋದ್ (ನಾಯಕಿ), ಶ್ಲೋಕಾ ವೀರಹೈಂದವಿ, ಶ್ರೇಯಾ ಎಸ್‌.ಚವಾಣ್, ಭವಿಕಾ ರೆಡ್ಡಿ, ವಂದಿತಾ ಕೆ.ರಾವ್‌, ರೀಮಾ ಫರೀದ್‌, ತೇಜಸ್ವಿನಿ ಬಿ.ಜಿ, ಲಾವಣ್ಯ ಸಿ, ಶ್ರೀನಿಥಿ ಪಿ. ರೈ, ಅದಿತಿ ಬಕ್ಕಾ, ದೀಕ್ಷಾ ಜೆ.ಹೊನುಶ್ರೀ, ವೇದ ವರ್ಷಣಿ, ಹರ್ಷಿತಾ ಆರ್‌., ರಿಮ್‌ಝಿಮ್ ಶುಕ್ಲಾ, ದೀಕ್ಷಾ ಸಿ.ಡಿ.

ಕೋಚ್‌: ರಕ್ಷಿತಾ ಕೃಷ್ಣಪ್ಪ, ಮ್ಯಾನೇಜರ್: ಸಭಾ ಸಿದ್ಧಿಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.