
ಪ್ರಜಾವಾಣಿ ವಾರ್ತೆ
ಬೆಂಗಳೂರು: ಕೆ.ಆರ್.ಗಾಯತ್ರಿ ಅವರು ರಾಜ್ಯ ಸೀನಿಯರ್ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥೆಯಾಗಿ ಶನಿವಾರ ನೇಮಕಗೊಂಡಿದ್ದಾರೆ.
ಡಾ. ನಿವೇದಿತಾ ರೇಷ್ಮೆ, ಆಶ್ರಯಿ ಎನ್ ರಾಮ್ ಹಾಗೂ ಲೀನಾ ಪ್ರಸಾದ್ ಅವರು ಸಮಿತಿಯಲ್ಲಿ ಸದಸ್ಯರಾಗಿ ಸ್ಥಾನ ಪಡೆದಿದ್ದಾರೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀನಿವಾಸ ಮೂರ್ತಿ, ಜಾನವಿ ದೇಸಾಯಿ, ಜಯಶ್ರೀ ಡಿ., ಜಾನವಿ ನರಸಿಂಹ ಹಾಗೂ ರುತ್ ಮಾಬೆನ್ ಅವರು ಮಹಿಳಾ ಕ್ರಿಕೆಟ್ ಸಮಿತಿಗೆ ಆಯ್ಕೆಯಾಗಿದ್ದಾರೆ.
ಕಿರಿಯರ ತಂಡದ ಆಯ್ಕೆ ಸಮಿತಿಗೆ ಮಾಲಾ ಸುಂದರೇಶನ್ (ಮುಖ್ಯಸ್ಥೆ), ಸಬಾ ಸಿದ್ದೀಕ್, ಪಿ.ಜೆ.ಹೇಮಲತಾ ಹಾಗೂ ಸ್ಫೂರ್ತಿ ಪಾರ್ವತಿಕಾರ್ ಅವರು ನೇಮಕಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.