ADVERTISEMENT

ಕ್ರಿಕೆಟ್‌: ಕರ್ನಾಟಕ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 20:00 IST
Last Updated 8 ಮಾರ್ಚ್ 2020, 20:00 IST

ಬೆಂಗಳೂರು: ಸಿ. ಪ್ರತ್ಯೂಷಾ ಅವರ ಬೌಲಿಂಗ್‌, ಜಿ.ದಿವ್ಯಾ ಹಾಗೂ ರಕ್ಷಿತಾ ಕೆ. ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡ ಬಿಸಿಸಿಐ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಬರೋಡಾ ತಂಡವನ್ನು 48 ರನ್‌ಗಳಿಂದ ಸೋಲಿಸಿತು.

ಹಿಮಾಚಲ ಪ್ರದೇಶದ ಉನಾದ ಸಂತೋಷ್‌ಗಡ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ಏಳು ವಿಕೆಟ್‌ಗೆ 169 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಬರೋಡಾ 35.2 ಓವರ್‌ಗಳಲ್ಲಿ 121 ರನ್‌ಗಳಿಸಿ ಎಲ್ಲ ವಿಕೆಟ್‌ ಒಪ್ಪಿಸಿತು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 37 ಓವರ್‌ಗಳಲ್ಲಿ 7 ವಿಕೆಟ್‌ಗೆ 169 (ಜಿ.ದಿವ್ಯಾ 59, ರಕ್ಷಿತಾ ಕೆ. 57; ತರನ್ನುಮ್‌ ಪಠಾಣ್‌ 28ಕ್ಕೆ3, ಜೆ.ಮೋಹಿತೆ 23ಕ್ಕೆ1) ಬರೋಡಾ: 35.2 ಓವರ್‌ಗಳಲ್ಲಿ 121ಕ್ಕೆ ಆಲೌಟ್‌. (ಪಿ.ಎ. ಪಟೇಲ್‌ 29, ತನ್ವೀರ್‌ ಶೇಖ್‌ 16, ಜೆ.ಮೋಹಿತೆ 15; ಸಿ.ಪ್ರತ್ಯೂಷಾ 23ಕ್ಕೆ 6, ನಿಕಿ ಪ್ರಸಾದ್‌ 13ಕ್ಕೆ 2): ಫಲಿತಾಂಶ: ಕರ್ನಾಟಕಕ್ಕೆ48 ರನ್‌ಗಳ ಗೆಲುವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.