ADVERTISEMENT

ಕ್ರಿಕೆಟ್‌: ಕರ್ನಾಟಕ ಮಹಿಳೆಯರಿಗೆ ಜಯ

ಬಿಸಿಸಿಐ ಮಹಿಳಾ ಏಕದಿನ ಕ್ರಿಕೆಟ್‌ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 20:00 IST
Last Updated 18 ಫೆಬ್ರುವರಿ 2020, 20:00 IST

ಬೆಂಗಳೂರು: ವನಿತಾ ವಿ.ಆರ್‌ ಅರ್ಧಶತಕ ಹಾಗೂ ಚಂದು ವಿ. ಅವರ ಉತ್ತಮ ಬೌಲಿಂಗ್‌ ನೆರವಿನಿಂದ ಕರ್ನಾಟಕ ಮಹಿಳಾ ತಂಡಬಿಸಿಸಿಐ ಏಕದಿನ ಟ್ರೋಫಿಯ ಹಣಾಹಣಿಯಲ್ಲಿ ನಾಲ್ಕು ವಿಕೆಟ್‌ಗಳಿಂದ ಬಂಗಾಳ ತಂಡದ ಎದುರು ನಾಲ್ಕು ವಿಕೆಟ್‌ಗಳಿಂದ ಜಯಿಸಿತು.

ಹಿಮಾಚಲ ಪ್ರದೇಶದ ಉನಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬಂಗಾಳ ತಂಡಮೊದಲು ಬ್ಯಾಟ್‌ ಮಾಡಿ ನಿಗದಿತ ಓವರ್‌ಗಳಲ್ಲಿ 193 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕ ತಂಡ 48.3 ಓವರ್‌ಗಳಲ್ಲಿ ಜಯ ಸಾಧಿಸಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಬಂಗಾಳ ಮಹಿಳೆಯರು: 50 ಓವರ್‌ಗಳಲ್ಲಿ 193 ಆಲೌಟ್‌ (ಪ್ರಮಿತಾ ರಾಯ್‌ 43, ಮಂದಿರಾ ಮಹಾಪಾತ್ರ 24, ಜೂಲನ್‌ ಗೋಸ್ವಾಮಿ 24, ಗೌಹರ್‌ ಸುಲ್ತಾನ 29; ಚಂದು ವಿ. 33ಕ್ಕೆ 4, ನಿಕಿ ಪ್ರಸಾದ್‌ 39ಕ್ಕೆ 3);ಕರ್ನಾಟಕ ಮಹಿಳೆಯರು: 48.3 ಓವರ್‌ಗಳಲ್ಲಿ 6 ವಿಕೆಟ್‌ಗೆ 194 (ವನಿತಾ ವಿ.ಆರ್‌. 64, ಶುಭಾ ಸತೀಶ್‌ 48, ದಿವ್ಯಾ ಜಿ.30; ಎನ್‌.ಮಾಜಿ 24ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.