ADVERTISEMENT

ಮಹಿಳಾ ಕ್ರಿಕೆಟ್‌: ಕರ್ನಾಟಕಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 16:13 IST
Last Updated 18 ಜನವರಿ 2019, 16:13 IST
ಪ್ರಶಸ್ತಿ ಗೆದ್ದ ಕರ್ನಾಟಕದ ತಂಡ. ನಿಂತವರು (ಎಡದಿಂದ): ಜಿ.ಆರ್.ಪ್ರೇರಣಾ, ಅನಘಾ ಮುರಳಿ, ನಗ್ಮಾ ಉನ್ನೀಸ, ಅನನ್ಯಾ ಸಭಾಷ್‌, ಸವಿ ಸುರೇಂದ್ರ, ಸಾಧ್ವಿ ಸಂಜಯ್‌, ಪೂಜಾ ಕುಮಾರಿ, ನಿಕ್ಕಿ ಪ್ರಸಾದ್‌, ಕೃಷಿಕಾ ರೆಡ್ಡಿ, ಸ್ನೇಹಾ ಜಗದೀಶ್‌, ರಕ್ಷಿತಾ ನಾಯಕ, ಸೌಮ್ಯಾ ವರ್ಮಾ, ಮಿಥಿಲಾ ವಿನೋದ್‌. ಕುಳಿತವರು: ಪ್ರೀತಿ (ಸಹಾಯಕ ಕೋಚ್‌), ಲಕ್ಷ್ಮಿ ಹರಿಹರನ್‌ (ಕೋಚ್‌), ಚಾಂದಸಿ ಕೃಷ್ಣಮೂರ್ತಿ (ನಾಯಕಿ), ಶಾಂತಾ ರಂಗಸ್ವಾಮಿ (ಹಿರಿಯ ಆಟಗಾರ್ತಿ), ರೋಷನಿ ಕಿರಣ್‌ (ಉಪ ನಾಯಕಿ), ಶಿಶಿರಾ (ಫಿಸಿಯೊ),

ಬೆಂಗಳೂರು: ಚಾಂದಸಿ ಕೃಷ್ಣಮೂರ್ತಿ ಅವರ ನಾಯಕತ್ವದ ಕರ್ನಾಟಕ ತಂಡ 16 ವರ್ಷದೊಳಗಿನವರ ಮಹಿಳೆಯರ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆದ್ದಿತು. ಲೀಗ್‌ ಮಾದರಿಯಲ್ಲಿ ನಡೆದ ಟೂರ್ನಿಯ ಎಲ್ಲ ಪಂದ್ಯಗಳನ್ನು ಕರ್ನಾಟಕ ಗೆದ್ದಿತ್ತು.

ಮೊದಲ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ಎದುರಾಳಿಯಾಗಿದ್ದದ್ದು ತಮಿಳುನಾಡು ತಂಡ. ಈ ಪಂದ್ಯದಲ್ಲಿ ಕರ್ನಾಟಕ ಐದು ವಿಕೆಟ್‌ಗಳಿಂದ ಗೆದ್ದಿತು. ನಂತರ ಆಂಧ್ರಪ್ರದೇಶ ಎದುರು ಏಳು ವಿಕೆಟ್‌ಗಳ ಜಯ ಸಾಧಿಸಿತು. ಮೂರನೇ ಪಂದ್ಯದಲ್ಲಿ ಹೈದರಾಬಾದ್ ಎದುರು ಆರು ವಿಕೆಟ್‌ಗಳಿಂದ ಗೆದ್ದ ಕರ್ನಾಟಕ, ನಂತರ ಗೋವಾವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತು.

ಪುದುಚೇರಿ ವಿರುದ್ಧ 122 ರನ್‌ಗಳಿಂದ ಗೆದ್ದ ತಂಡ ನಂತರ ಕೇರಳವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.