ADVERTISEMENT

ದಿಮುತ್ ದ್ವಿಶತಕ: ಲಂಕಾ ತಿರುಗೇಟು

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್: ಧನಂಜಯ ಶತಕ

ಏಜೆನ್ಸೀಸ್
Published 24 ಏಪ್ರಿಲ್ 2021, 16:39 IST
Last Updated 24 ಏಪ್ರಿಲ್ 2021, 16:39 IST
ದಿಮತ್ ಕರುಣರತ್ನೆ ಬ್ಯಾಟಿಂಗ್‌– ಎಎಫ್‌ಪಿ ಚಿತ್ರ
ದಿಮತ್ ಕರುಣರತ್ನೆ ಬ್ಯಾಟಿಂಗ್‌– ಎಎಫ್‌ಪಿ ಚಿತ್ರ   

ಪಲ್ಲೆಕೆಲೆ: ನಾಯಕ ದಿಮುತ್ ಕರುಣರತ್ನೆ ಮೊದಲ ಬಾರಿ ಗಳಿಸಿದ ಸೊಗಸಾದ ದ್ವಿಶತಕ (ಔಟಾಗದೆ 234) ಹಾಗೂ ಧನಂಜಯ ಡಿಸಿಲ್ವ (ಔಟಾಗದೆ 154) ಶತಕದ ನೆರವಿನಿಂದ ಶ್ರೀಲಂಕಾ ತಂಡ ಮೊತ್ತ ಗಳಿಸಿತು. ಬಾಂಗ್ಲಾದೇಶ ಎದುರು ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ ಕಳೆದುಕೊಂಡು 512 ರನ್‌ ಗಳಿಸಿತು.

ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದ ದಿಮುತ್ ಹಾಗೂ ಧನಂಜಯ್‌, ಮುರಿಯದ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 322 ರನ್‌ ಕಲೆಹಾಕಿದರು. ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಇದು ಗರಿಷ್ಠ ಜೊತೆಯಾಟವಾಗಿದೆ. 2011ರಲ್ಲಿ ಆಸ್ಟ್ರೇಲಿಯಾದ ಮೈಕ್ ಹಸ್ಸಿ ಹಾಗೂ ಶಾನ್ ಮಾರ್ಷ್‌ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲೇ 258 ರನ್‌ ಗಳಿಸಿದ್ದರು.

ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 541 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಪಂದ್ಯದ ನಾಲ್ಕನೇ ದಿನವಾದ ಶನಿವಾರ ಆತಿಥೇಯ ತಂಡ ಒಂದೂ ವಿಕೆಟ್‌ ಕಳೆದುಕೊಳ್ಳಲಿಲ್ಲ.

ADVERTISEMENT

419 ಎಸೆತಗಳನ್ನು ಎದುರಿಸಿದ ದಿಮುತ್‌ ಇನಿಂಗ್ಸ್‌ನಲ್ಲಿ 25 ಬೌಂಡರಿಗಳಿದ್ದವು. ಧನಂಜಯ 278 ಎಸೆತಗಳಲ್ಲಿ 20 ಬೌಂಡರಿ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ, ಮೊದಲ ಇನಿಂಗ್ಸ್‌: 173 ಓವರ್‌ಗಳಲ್ಲಿ 7ಕ್ಕೆ 541 ಡಿಕ್ಲೇರ್ಡ್‌; ಶ್ರೀಲಂಕಾ, ಮೊದಲ ಇನಿಂಗ್ಸ್‌(ಶುಕ್ರವಾರ 3ಕ್ಕೆ 229): 149 ಓವರ್‌ಗಳಲ್ಲಿ 3ಕ್ಕೆ 512 (ದಿಮುತ್ ಕರುಣರತ್ನೆ ಔಟಾಗದೆ 234, ಲಾಹಿರು ತಿರಿಮನೆ 58, ಧನಂಜಯ ಡಿ ಸಿಲ್ವಾ ಔಟಾಗದೆ 154; ತಸ್ಕಿನ್ ಅಹಮ್ಮದ್ 91ಕ್ಕೆ1, ಮೆಹದಿ ಹಸನ್‌ 123ಕ್ಕೆ1, ತೈಜುಲ್ ಇಸ್ಲಾಂ 136ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.