ADVERTISEMENT

ಮಗಳಿಗೆ ‘ಇವಾರಾ’ ಎಂದು ಹೆಸರಿಟ್ಟ ಕ್ರಿಕೆಟಿಗ ರಾಹುಲ್‌– ಅತಿಯಾ: ಏನಿದರ ಅರ್ಥ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2025, 10:22 IST
Last Updated 18 ಏಪ್ರಿಲ್ 2025, 10:22 IST
<div class="paragraphs"><p>ಮಗಳಿಗೆ ‘ಇವಾರಾ’ ಎಂದು ಹೆಸರಿಟ್ಟ ಕ್ರಿಕೆಟಿಗ ರಾಹುಲ್‌– ಅತಿಯಾ</p></div>

ಮಗಳಿಗೆ ‘ಇವಾರಾ’ ಎಂದು ಹೆಸರಿಟ್ಟ ಕ್ರಿಕೆಟಿಗ ರಾಹುಲ್‌– ಅತಿಯಾ

   

ನವದೆಹಲಿ: ಭಾರತ ಕ್ರಿಕೆಟ್‌ ಆಟಗಾರ ಕೆ.ಎಲ್‌ ರಾಹುಲ್ 33ನೇ ಹುಟ್ಟುಹಬ್ಬವನ್ನು ಶುಕ್ರವಾರ ಆಚರಿಸಿಕೊಂಡಿದ್ದಾರೆ. ಈ ಪ್ರಯುಕ್ತ ರಾಹುಲ್‌ ಮತ್ತು ಅತಿಯಾ ಶೆಟ್ಟಿ ದಂಪತಿ ತಮ್ಮ ಮಗಳ ಹೆಸರನ್ನು ಬಹಿರಂಗಗೊಳಿಸಿದ್ದಾರೆ.

ಮಗಳಿಗೆ ‘ಇವಾರಾ’ ಎಂದು ನಾಮಕರಣ ಮಾಡಿದ್ದಾರೆ. ಮಗಳನ್ನು ರಾಹುಲ್‌ ಎತ್ತಿಕೊಂಡಿದ್ದು, ಪಕ್ಕದಲ್ಲೇ ಅತಿಯಾ ಅವರು ಇರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ನಮ್ಮ ಮಗಳು ‘ಇವಾರಾ’ ಅಂದರೆ ‘ದೇವರ ಉಡುಗೊರೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಮಾರ್ಚ್‌ 14ರಂದು ಅತಿಯಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

ಅನುಷ್ಕಾ ಶರ್ಮಾ ಸೇರಿದಂತೆ ಹಲವರು ರಾಹುಲ್‌ ದಂಪತಿಯನ್ನು ಅಭಿನಂದಿಸಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ಹಲವರು ಎಮೋಜಿಗಳ ಮೂಲಕ ಶುಭ ಹಾರೈಸಿದ್ದಾರೆ.

ಕಳೆದ ತಿಂಗಳು ಬೇಬಿ ಬಂಪ್‌ ಫೋಟೊಶೂಟ್‌ ಮಾಡಿಸಿದ ಫೋಟೊಗಳನ್ನು ಹಂಚಿಕೊಂಡಿದ್ದರು. 2023ರ ಜ.23ರಂದು ಈ ಜೋಡಿ ವಿವಾಹವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.