ADVERTISEMENT

ಮೂರನೇ ಟೆಸ್ಟ್‌ | ಫಿಟ್ ಆಗದ ರಾಹುಲ್, ಪಡಿಕ್ಕಲ್‌ಗೆ ಅವಕಾಶ ಸಾಧ್ಯತೆ

ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 14:30 IST
Last Updated 12 ಫೆಬ್ರುವರಿ 2024, 14:30 IST
<div class="paragraphs"><p>ಕೆ.ಎಲ್‌.ರಾಹುಲ್</p></div>

ಕೆ.ಎಲ್‌.ರಾಹುಲ್

   

ರಾಜಕೋಟ್‌ : ಭಾರತ ತಂಡದ ಪ್ರಮುಖ ಬ್ಯಾಟರ್ ಕೆ.ಎಲ್‌.ರಾಹುಲ್ ಅವರು ತೊಡೆಯ ನೋವಿನಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿಯ ಮೂರನೇ ಪಂದ್ಯದಲ್ಲೂ ಆಡುವುದಿಲ್ಲ ಎಂದು ಸೋಮವಾರ ಪ್ರಕಟಿಸಲಾಗಿದೆ.

ರಣಜಿಯಲ್ಲಿ ಉತ್ತಮ ರನ್ ಹರಿಸುತ್ತಿರುವ ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರು ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಅಧಿಕವಾ್ಗಿದೆ. ‘ರಾಹುಲ್ ರಾಜಕೋಟ್‌ನಲ್ಲಿ ತಂಡವನ್ನು ಸೇರಿಕೊಂಡಿಲ್ಲ. ಸ್ಥಳೀಯ ಆಟಗಾರ ರವೀಂದ್ರ ಜಡೇಜಾ ಸೇರಿಕೊಂಡಿದ್ದಾರೆ. ಬಿಸಿಸಿಐನ ವೈದ್ಯಕೀಯ ತಂಡ ರಾಹುಲ್‌ ಅವರು ಆಡಲು ಅರ್ಹ ಎನ್ನುವ ಪ್ರಮಾಣಪತ್ರ ನೀಡಿಲ್ಲ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲವೊಂದು ಪಿಟಿಐಗೆ ತಿಳಿಸಿದೆ.

ADVERTISEMENT

ತಮಿಳುನಾಡು ವಿರುದ್ಧ ಸೋಮವಾರ ಮುಕ್ತಾಯಗೊಂಡ ರಣಜಿ ಪಂದ್ಯದಲ್ಲಿ, 23 ವರ್ಷದ ಪಡಿಕ್ಕಲ್ 151 ರನ್ ಗಳಿಸಿ, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರಕರ್ ಗಮನ ಸೆಳೆದಿದ್ದರು. ಅವರು ಪಂಜಾಬ್ ವಿರುದ್ಧ 193 ಮತ್ತು ಗೋವಾ ವಿರುದ್ಧ 103 ರನ್ ಗಳಿಸಿ ಉತ್ತಮ ಲಯದಲ್ಲಿದ್ದಾರೆ. ಜೊತೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ‘ಎ’ ತಂಡದ ಪರ ‘ಟೆಸ್ಟ್’ ಪಂದ್ಯಗಳ ಮೂರು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 105, 65 ಮತ್ತು 21 ರನ್ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.