ADVERTISEMENT

ಕೊಹ್ಲಿ ಆರ್‌ಸಿಬಿಗೆ ಹಲವು ವರ್ಷ ಶ್ರಮಿಸಿದ್ದಾರೆ, ನಮ್ಮ ಬೆಸ್ಟ್ ನೀಡಬೇಕಿದೆ: ರಜತ್

ಪಿಟಿಐ
Published 3 ಜೂನ್ 2025, 6:02 IST
Last Updated 3 ಜೂನ್ 2025, 6:02 IST
<div class="paragraphs"><p>ರಜತ್ ಪಾಟೀದಾರ್</p></div>

ರಜತ್ ಪಾಟೀದಾರ್

   

ಅಹಮದಾಬಾದ್: ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನದ 18 ವರ್ಷಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೀಡಿದ್ದಾರೆ. ನಾವು ತಂಡಕ್ಕಾಗಿ ನಮ್ಮ ಬೆಸ್ಟ್ ನೀಡಬೇಕಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಹೇಳಿದ್ದಾರೆ.

ಕೊಹ್ಲಿ ಅವರ ಉಪಸ್ಥಿತಿಯು ತಂಡದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆಯೇ? ಎಂದು ಕೇಳಲಾದ ಪ್ರಶ್ನೆಗೆ, ಹೌದು, ಅವರು ಆರ್‌ಸಿಬಿ ಮತ್ತು ಅಂತರರಾಷ್ಟ್ರೀಯ ತಂಡಕ್ಕೆ ಹಲವು ವರ್ಷಗಳಿಂದ ಶ್ರಮಿಸಿದ್ದಾರೆ. ನಾವು ಈಗ ನಮ್ಮ ಅತ್ಯುತ್ತಮ ಆಟ ಆಡಬೇಕಿದೆ ಎಂದು ಪಾಟಿದಾರ್ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಆರ್‌ಸಿಬಿ 2009, 2011 ಮತ್ತು 2016ರಲ್ಲಿ ಒಟ್ಟು ಮೂರು ಫೈನಲ್‌ಗಳನ್ನು ಆಡಿದೆ. ಆದರೆ, ಮೂರು ಬಾರಿಯೂ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ.

‘ನಾವು ಲೀಗ್ ಪಂದ್ಯ ಆಡುತ್ತಿಲ್ಲ. ನಾವು ಈಗ ಫೈನಲ್ ಆಡುತ್ತಿದ್ದೇವೆ. ನಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಲು ಇಚ್ಛಿಸುತ್ತೇವೆ. ನಾನು ಯಾವುದೇ ವಿಷಯವನ್ನು ಸರಳವಾಗಿ ತೆಗೆದುಕೊಳ್ಳಲು ಬಯಸುತ್ತೇನೆ’ಎಂದು ಪಾಟಿದಾರ್ ಹೇಳಿದ್ದಾರೆ.

ನಾವು ತವರು ಮೈದಾನ ಅಥವಾ ಎಲ್ಲೇ ಆಡಿದರೂ ಅಪಾರ ಅಭಿಮಾನಿಗಳ ಬೆಂಬಲ ಸಿಗುತ್ತದೆ. ಅದಕ್ಕೆ ಕೊಹ್ಲಿ ಅವರ ಉಪಸ್ಥಿತಿಯೂ ಪ್ರಮುಖ ಕಾರಣ ಎಂದು ಪಾಟಿದಾರ್ ಹೇಳಿದ್ಧರೆ.

ಬಿಗ್ ಹಿಟ್ಟರ್ ಟಿಮ್ ಡೇವಿಡ್ ಲಭ್ಯತೆಯ ಬಗ್ಗೆ ಆರ್‌ಸಿಬಿಯಲ್ಲಿ ಕಳವಳವಿದೆ. ಮಂಡಿರಜ್ಜು ಗಾಯದಿಂದಾಗಿ ಕೊನೆಯ ಎರಡು ಪಂದ್ಯಗಳಲ್ಲಿ ಅವರು ಆಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.