ADVERTISEMENT

ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: KSCA ಕೋಲ್ಟ್ಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 21:32 IST
Last Updated 18 ಸೆಪ್ಟೆಂಬರ್ 2025, 21:32 IST
<div class="paragraphs"><p>ಕೆಎಸ್‌ಸಿಎ ಕೋಲ್ಟ್ಸ್ ಪರ 5 ವಿಕೆಟ್ ಪಡೆದ ಮೊಹ್ಸಿನ್‌ ಖಾನ್‌ </p></div>

ಕೆಎಸ್‌ಸಿಎ ಕೋಲ್ಟ್ಸ್ ಪರ 5 ವಿಕೆಟ್ ಪಡೆದ ಮೊಹ್ಸಿನ್‌ ಖಾನ್‌

   

– ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಸ್ಪಿನ್ನರ್‌ಗಳ ಕೈಚಳಕದಿಂದಾಗಿ ಕೆಎಸ್‌ಸಿಎ ಕೋಲ್ಟ್ಸ್‌ ತಂಡವು ಗುರುವಾರ ಬರೋಡ ಕ್ರಿಕೆಟ್ ಸಂಸ್ಥೆ ತಂಡವನ್ನು 10 ರನ್‌ ಅಂತರದಿಂದ ಮಣಿಸಿತು.

ADVERTISEMENT

ಇಲ್ಲಿನ ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ನಡೆದ ಕ್ಯಾಪ್ಟನ್‌ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 358 ರನ್‌ಗಳ ಗುರಿ ಬೆನ್ನತ್ತಿದ ಬರೋಡ ತಂಡ ಕೊನೆಯ ದಿನವಾದ ಗುರುವಾರ ಭೋಜನ ವಿರಾಮದವರೆಗೂ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಕಡೆಯ ಅವಧಿಯಲ್ಲಿ ಮೊಹ್ಸಿನ್ ಖಾನ್‌ ( 89ಕ್ಕೆ 5) ಹಾಗೂ ಶಿಖರ್ ಶೆಟ್ಟಿ ( 94ಕ್ಕೆ 4) ಎದುರಾಳಿಗಳನ್ನು ಸ್ಪಿನ್‌ ಬಲೆಗೆ ಕೆಡವಿದರು. ಕೇವಲ 47 ರನ್‌ಗೆ ಕಡೆಯ 6 ವಿಕೆಟ್‌ ಕಳೆದುಕೊಳ್ಳುವ ಮೂಲಕ ಬರೋಡ ಪಂದ್ಯ ಕೈಚೆಲ್ಲಿತು.

ಬರೋಡ ಪರ ಆರಂಭಿಕ ಜ್ಯೋತ್ಸಿಲ್ ಸಿಂಗ್‌ ಶತಕದ ಮೂಲಕ (156) ಹೋರಾಟದ ಆಟ ಪ್ರದರ್ಶಿಸಿದರು. ವಿಕೆಟ್‌ ಕೀಪರ್ ಅಕ್ಷಯ್‌ ಮೋರೆ ( 43) ಸಾಥ್‌ ನೀಡಿದರು.

ಈ ಪಂದ್ಯದ ಅಂತ್ಯಕ್ಕೆ ‘ಡಿ’ ಗುಂಪಿನಲ್ಲಿ ಹಿಮಾಚಲ ಪ್ರದೇಶ ತಂಡವು ಒಟ್ಟು 16 ಅಂಕದೊಂದಿಗೆ ಅಗ್ರಸ್ಥಾನ ಪಡೆದಿದ್ದು, ಕೆಎಸ್‌ಸಿಎ ಕೋಲ್ಟ್ಸ್‌ 12 ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಇಳಿಯಿತು. ಬರೋಡ 4 ಅಂಕ ಹಾಗೂ ಆಂಧ್ರ ಪ್ರದೇಶ ಕೇವಲ 1 ಅಂಕ ಪಡೆದವು.

ಸಂಕ್ಷಿಪ್ತ ಸ್ಕೋರ್‌

ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ

ಮೊದಲ ಇನಿಂಗ್ಸ್‌: ಕೆಎಸ್‌ಸಿಎ ಕೋಲ್ಟ್ಸ್‌: 47.3 ಓವರ್‌ಗಳಲ್ಲಿ 184; ಬರೋಡ ಕ್ರಿಕೆಟ್‌ ಸಂಸ್ಥೆ: 59 ಓವರ್‌ಗಳಲ್ಲಿ 209

ಎರಡನೇ ಇನಿಂಗ್ಸ್‌: ಕೆಎಸ್‌ಸಿಎ ಕೋಲ್ಟ್ಸ್‌: ಓವರ್‌ಗಳಲ್ಲಿ 92.3 ಓವರ್‌ಗಳಲ್ಲಿ 382; ಬರೋಡ ಕ್ರಿಕೆಟ್‌ ಸಂಸ್ಥೆ: 134.1 ಓವರ್‌ಗಳಲ್ಲಿ 347 ( ಜ್ಯೋತ್ಸಿಲ್ ಸಿಂಗ್‌ 156, ಅಕ್ಷಯ್‌ ಮೋರೆ 43, ಶಿವಾಲಿಕ್‌ ಶರ್ಮ 37. ಮೊಹ್ಸಿನ್ ಖಾನ್‌ 89ಕ್ಕೆ 5, ಶಿಖರ್ ಶೆಟ್ಟಿ 94ಕ್ಕೆ 4).

ಎಸ್‌ಜೆಸಿಇ ಕ್ರೀಡಾಂಗಣ, ಮೈಸೂರು

ಮೊದಲ ಇನಿಂಗ್ಸ್‌: ಆಂಧ್ರ ಕ್ರಿಕೆಟ್ ಸಂಸ್ಥೆ: 23.2 ಓವರ್‌ಗಳಲ್ಲಿ 87; ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 105.1 ಓವರ್‌ಗಳಲ್ಲಿ 455

ಎರಡನೇ ಇನಿಂಗ್ಸ್‌: ಆಂಧ್ರ ಕ್ರಿಕೆಟ್ ಸಂಸ್ಥೆ: 129.2 ಓವರ್‌ಗಳಲ್ಲಿ 500; ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 27.1 ಓವರ್‌ಗಳಲ್ಲಿ 6 ವಿಕೆಟ್‌ಗೆ 134 ( ಏಕಾಂತ್ ಸೇನ್‌ 42, ಸಿದ್ದಾಂತ್‌ ಪುರೋಹಿತ್ 37. ಕೆ. ಸಾಯಿತೇಜ 24ಕ್ಕೆ 4)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.