ADVERTISEMENT

ಹಿನ್ನಡೆ ಭೀತಿಯಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್‌

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 0:24 IST
Last Updated 23 ಸೆಪ್ಟೆಂಬರ್ 2025, 0:24 IST
ಆಲೂರಿನಲ್ಲಿರುವ ನಡೆಯುತ್ತಿರುವ ಪಂದ್ಯದಲ್ಲಿ ಕೃತಿಕ್‌ ಕೃಷ್ಣ ಅವರ ಹೊಡೆತದ ಬಂಗಿ
ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್‌ ಪಿ.ಎಸ್.
ಆಲೂರಿನಲ್ಲಿರುವ ನಡೆಯುತ್ತಿರುವ ಪಂದ್ಯದಲ್ಲಿ ಕೃತಿಕ್‌ ಕೃಷ್ಣ ಅವರ ಹೊಡೆತದ ಬಂಗಿ ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್‌ ಪಿ.ಎಸ್.   

ಬೆಂಗಳೂರು: ಲೋಚನ್‌ ಎಸ್‌. ಗೌಡ (88;155ಎ) ಮತ್ತು ಕೃತಿಕ್‌ ಕೃಷ್ಣ (ಔಟಾಗದೇ 89;180ಎ) ಅವರ ಚೆಂದದ ಬ್ಯಾಟಿಂಗ್ ನಂತರವೂ ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್‌ ತಂಡವು ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಗೋವಾ ತಂಡದ ವಿರುದ್ಧ ಮೊದಲ ಇನಿಂಗ್ಸ್‌ ಹಿನ್ನಡೆಯ ಭೀತಿಯಲ್ಲಿದೆ.

ನಗರದ ಹೊರವಲಯದಲ್ಲಿರುವ ಆಲೂರಿನ ಪ್ಲಾಟಿನಂ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾನುವಾರ 9 ವಿಕೆಟ್‌ಗಳಿಗೆ 323 ರನ್ ಗಳಿಸಿದ್ದ ಗೋವಾ ತಂಡವು ಸೋಮವಾರ 338 ರನ್‌ಗಳಿಗೆ ಆಲೌಟ್‌ ಆಯಿತು. ಅದಕ್ಕೆ ಪ್ರತಿಯಾಗಿ ಇನಿಂಗ್ಸ್‌ ಆರಂಭಿಸಿದ ಕಾರ್ಯದರ್ಶಿ ಇಲೆವೆನ್‌ ತಂಡವು ಎರಡನೇ ದಿನದಾಟ ಅಂತ್ಯಕ್ಕೆ 83 ಓವರ್‌ಗಳಲ್ಲಿ 8 ವಿಕೆಟ್‌ಗೆ 245 ರನ್‌ ಗಳಿಸಿದೆ. ಇನಿಂಗ್ಸ್‌ ಚುಕ್ತಾ ಮಾಡಲು ಇನ್ನೂ 93 ರನ್‌ ಬೇಕಿದೆ. 

ಗೋವಾ ತಂಡದ ಅರ್ಜುನ್‌ ತೆಂಡೂಲ್ಕರ್‌ ಮೂರು ವಿಕೆಟ್‌ ಪಡೆದು ಮಿಂಚಿದರೆ, ಮೋಹಿತ್‌ ರೇಡ್ಕರ್ ಎರಡು ವಿಕೆಟ್‌ ಕಬಳಿಸಿದರು. 

ADVERTISEMENT

ಸಂಕ್ಷಿಪ್ತ ಸ್ಕೋರ್‌: ಆಲೂರು ಕ್ರೀಡಾಂಗಣ: ಗೋವಾ ತಂಡ: 94.4 ಓವರ್‌ಗಳಲ್ಲಿ 338 (ಲಲಿತ್‌ ಯಾದವ್‌ ಔಟಾಗದೇ 113; ಮಾಧವ್ ‍ಪಿ. ಬಜಾಜ್‌ 88ಕ್ಕೆ 3). ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್‌: 83 ಓವರ್‌ಗಳಲ್ಲಿ 8 ವಿಕೆಟ್‌ಗೆ 245 (ಲೋಚನ್‌ ಎಸ್‌.ಗೌಡ 88, ಕೃತಿಕ್‌ ಕೃಷ್ಣ ಔಟಾಗದೇ 89; ಅರ್ಜುನ್‌ ತೆಂಡೂಲ್ಕರ್‌ 50ಕ್ಕೆ 3, ಮೋಹಿತ್‌ ರೇಡ್ಕರ್‌ 67ಕ್ಕೆ 2)

ಚಿನ್ನಸ್ವಾಮಿ ಕ್ರೀಡಾಂಗಣ: ಮಧ್ಯಪ್ರದೇಶ: 141.2 ಓವರ್‌ಗಳಲ್ಲಿ 425 (ಹಿಮಾಂಶು ಮಂತ್ರಿ 131;ಮುಕುಲ್‌ ನೇಗಿ 110ಕ್ಕೆ 5). ಹಿಮಾಚಲ ಪ್ರದೇಶ: 36 ಓವರ್‌ಗಳಲ್ಲಿ 6 ವಿಕೆಟ್‌ಗೆ 106 (ಸಿದ್ಧಾಂತ್ ಪುರೋಹಿತ್ 39; ಕುಮಾರ್ ಕಾರ್ತಿಕೇಯ 23ಕ್ಕೆ 3)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.