ADVERTISEMENT

ಟೆಸ್ಟ್ ಕ್ರಿಕೆಟ್ ಆಯೋಜಿಸಲು ಐದು ಕಾಯಂ ಸ್ಥಳ: ಕೊಹ್ಲಿ ಸಲಹೆಗೆ ಕುಂಬ್ಳೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 13:31 IST
Last Updated 26 ಅಕ್ಟೋಬರ್ 2019, 13:31 IST
   

ನವದೆಹಲಿ:ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಮಾದರಿಯಂತೆಟೆಸ್ಟ್‌ ಕ್ರಿಕೆಟ್‌ ಆಯೋಜಿಸಲು ಐದು ಕಾಯಂ ಸ್ಥಳಗಳನ್ನು ನಿಗದಿಪಡಿಸಲು ಬಿಸಿಸಿಐಗೆ ಇದು ಸಕಾಲ ಎಂಬ ವಿರಾಟ್‌ ಕೊಹ್ಲಿ ಅವರ ಸಲಹೆಯನ್ನು ಭಾರತ ತಂಡದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಬೆಂಬಲಿಸಿದ್ದಾರೆ.

1980 ಮತ್ತು 1990ರ ದಶಕಗಳಲ್ಲಿ ನಿರ್ದಿಷ್ಟ ಕೇಂದ್ರಗಳಲ್ಲಿ ಹಬ್ಬಗಳ ವೇಳೆ ಮಾತ್ರ ಟೆಸ್ಟ್‌ ಆಯೋಜಿಸುತ್ತಿದ್ದ ಹಳೆಯ ಸಂಪ್ರದಾಯಕ್ಕೆ ಬಿಸಿಸಿಐ ಹಿಂತಿರುಗಬೇಕು ಎಂದೂ ಕುಂಬ್ಳೆ ಬಯಸಿದ್ದಾರೆ.

ರಾಂಚಿಯಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಮೂರನೇ ಟೆಸ್ಟ್‌ ಗೆಲುವಿನ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ವೇಳೆ, ಭಾರತ ತಂಡದ ನಾಯಕ ಕೊಹ್ಲಿ ಈ ಸಲಹೆ ಮುಂದಿಟ್ಟಿದ್ದರು. ರಾಂಚಿಯ ಪಂದ್ಯಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ನೀರಸವಾದ ಹಿನ್ನೆಲೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ಈ ಸಲಹೆ ನೀಡಿದ್ದರು.

ADVERTISEMENT

‘ಟೆಸ್ಟ್ ಕ್ರಿಕೆಟ್‌ ಪ್ರೋತ್ಸಾಹಿಸಲು ಇದು ಖಂಡಿತ ಉತ್ತಮ ದಾರಿ. ಕೇವಲ ಕೆಲವೇ ಸ್ಥಳಗಳನ್ನು ಆಯ್ದುಕೊಳ್ಳುವುದು ಮಾತ್ರವಲ್ಲ, ಸಂದರ್ಭವನ್ನೂ ಗಮನಿಸಬೇಕು’ ಎಂದು ಕುಂಬ್ಳೆ ಹೇಳಿರುವುದಾಗಿ ಕ್ರಿಕೆಟ್‌ನೆಕ್ಸ್ಟ್‌ ಹೇಳಿದರು. ಈ ಹಿಂದೆ ಪೊಂಗಲ್‌ ವೇಳೆ ಚೆನ್ನೈನಲ್ಲಿ ಪಂದ್ಯಗಳು ನಡೆಯುತ್ತಿದ್ದ ಸಂದರ್ಭವನ್ನೂ ಅವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.