ADVERTISEMENT

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಸೆಮಿಫೈನಲ್: ಲಲಿತ್ ಶತಕ; ಗೋವಾ ಉತ್ತಮ ಮೊತ್ತ

ಸಮಿತ್ ದ್ರಾವಿಡ್‌ಗೆ 2 ವಿಕೆಟ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
 ಸಮಿತ್ ದ್ರಾವಿಡ್ 
 ಸಮಿತ್ ದ್ರಾವಿಡ್    

ಬೆಂಗಳೂರು: ಲಲಿತ್ ಯಾದವ್ ಶತಕದ ಬಲದಿಂದ ಗೋವಾ ತಂಡವು ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕರ್ನಾಟಕ ಕಾರ್ಯದರ್ಶಿ ಇಲೆವನ್ ತಂಡದ ಎದುರು ಉತ್ತಮ ಮೊತ್ತ ಪೇರಿಸಿತು. 

ನಗರದ ಹೊರವಲಯದಲ್ಲಿರುವ ಆಲೂರಿನ ಪ್ಲಾಟಿನಂ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದಲ್ಲಿ ಗೋವಾ ತಂಡವು 90 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 323 ರನ್ ಗಳಿಸಿತು. ಕರ್ನಾಟಕ ಕಾರ್ಯದರ್ಶಿ ತಂಡದ ಸಮಿತ್ ದ್ರಾವಿಡ್ (18ಕ್ಕೆ2), ಮಾಧವ್ ಪಿ ಬಜಾಜ್ (77ಕ್ಕೆ2) ಮತ್ತು ಅಭಿಷೇಕ್ ಅಹ್ಲಾವತ್ (78ಕ್ಕೆ2) ಉತ್ತಮ ಬೌಲಿಂಗ್ ಮಾಡಿದರು. 

ಗೋವಾ ತಂಡದ ಲಲಿತ್ ಯಾದವ್ (ಔಟಾಗದೇ 100; 189ಎ, 4X9, 6X2) ಮತ್ತು ಅಭಿನವ್ ತೆಜರಾನಾ (88; 130ಎ, 4X10, 6X1) ಮಿಂಚಿದರು. ಇದರಿಂದಾಗಿ ತಂಡವು ಉತ್ತಮ ಮೊತ್ತ ಗಳಿಸಲು ಸಾಧ್ಯವಾಯಿತು. ಲಲಿತ್ ಜೊತೆಗೆ ಕ್ರೀಸ್‌ನಲ್ಲಿ ವಿ. ಕೌಶಿಕ್ (ಔಟಾಗದೇ 8) ಇದ್ದಾರೆ.

ADVERTISEMENT

ಸಂಕ್ಷಿಪ್ತ ಸ್ಕೋರು: ಗೋವಾ: 90 ಓವರ್‌ಗಳಲ್ಲಿ 9ಕ್ಕೆ323 (ಮಂಥನ್ ಖುಟ್ಕರ್ 27, ಅಭಿನವ್ ತೆಜರಾನ್ 88, ಲಲಿತ್ ಯಾದವ್ ಔಟಾಗದೇ 100, ಕಶಬ್ ಬಾಕಳೆ 31, ಮೋಹಿತ್ ರೇಡ್ಕರ್ 35, ಸಮಿತ್ ದ್ರಾವಿಡ್ 18ಕ್ಕೆ2, ಮಾಧವ್ ಪಿ ಜಬಾಜ್ 77ಕ್ಕೆ2, ಅಭಿಷೇಕ್ ಅಹ್ಲಾವತ್ 78ಕ್ಕೆ2) ವಿರುದ್ಧ ಕರ್ನಾಟಕ ಕಾರ್ಯದರ್ಶಿ ಇಲೆವನ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.